Tuesday 5 April 2016

Sāra Saṅgama 14

ಸಾರ ಸಂಗಮ  by “ತ್ರಿವೇಣಿ ತನಯ

ಪ್ರಕೃತಿ -ವಿಕೃತಿ

ಭೂಮಿಯ ಮೇಲೆಲ್ಲಾ ಪ್ರಕೃತಿಯ ಕೊಡುಗೆ ಒಂದೇ,
ಎಲ್ಲೇ ಇದ್ದರೂ ತಿನ್ನುವ ಅನ್ನ ನೀರು ಗಾಳಿ ಒಂದೇ,
ಮಕ್ಕಳಿಗಾಗಿ ಅವನು ಕೊಡುವುದ "ಸಮ"ಕೊಟ್ಟ,
ಭಿನ್ನ ಸ್ವಾಭಾವದ ಮನುಜ ಹೊಡೆದಾಡಿ ತಾ ಕೆಟ್ಟ.

ಅನುಭವ -ಸ್ವಭಾವ

ಹಳಿಯದಿರು ಮತ್ತೊಬ್ಬರ ನಿನ್ನ ಸ್ಥಿತಿ ಗತಿಗೆ,
ಬರಬೇಕಾದ್ದೇ ಬಂದಿದೆ ಸ್ವಭಾವದ ಪರಿಮಿತಿಗೆ,
ಇದ್ದುದರಲಿ ತೃಪ್ತಿಯಲಿ ಪ್ರೀತಿಸುತ್ತಾ ಬಾಳು,
ಬೇಡುವದೇನಿದ್ದರೂ ಎಂದೂ ಅವನನ್ನೇ ಕೇಳು.

ಅಂಧಾನುಕರಣೆ

ಆಹಾರ ವಿಹಾರ ಉಡುಗೆ ತೊಡುಗೆ ಎಲ್ಲದರಲ್ಲೂ ಅನುಕರಣೆ,
ಯಾರಲ್ಲಿಯೂ ಕಾಣದು ಯಾವುದರಿಂದ ಏನೆಂಬ ವಿವೇಚನೆ,
ಅಂಧಾನುಕರಣೆಯಲ್ಲಿ ಸಾಗಿರುವ ಬುದ್ಧಿ ಹೀನ ಕುರಿಗಳು ನಾವು,
ಹೊಟ್ಟೆ ಬೆಳೆಸುವರ ಮಂದೆಯಲಿ ಬುದ್ಧಿ ಬಳಸುವರಿಲ್ಲೆಂಬುದೇ ನೋವು.

ವೇದ -ನಾದ

ವೇದ-ಮಹಿಮೆ ಗೊತ್ತಿರುವವರಿಗೆ ಜೀವನದ ಸ್ವಾದ,
ಬದುಕಿನ ನಡಿಗೆಗೆ ತಾಳ ಕೊಡುವ ಪವಿತ್ರ ನಾದ,
ಉಪನಿಷತ್ತು-ಕುತ್ತುಗಳ ಕಳೆದು ಎತ್ತರಕ್ಕೇರಿಸುವ ಮುತ್ತು,
ಝಾಡಿಸಿ ಲೌಕಿಕದಮತ್ತು ಜ್ಞಾನ ಹೀರುತ್ತಾ ಮೇಲ್ಹತ್ತು.

ವಿದ್ಯೆ -ನಿಜ ಹುದ್ದೆ

ಮಗುವಿಗೆ ವಿದ್ಯೆ ನೀಡದ ಹೆತ್ತವರದರ ವಿರೋಧಿ,
ಅಂಥವರಿಗೆ ಸಮಾಜವೆಂತು ನೀಡೀತು ಮರ್ಯಾದಿ,
ಈ ಥರದ ಜನ ಹಂಸಗಳ ಮಧ್ಯ ಕೊಕ್ಕರೆ ತೆರದಿ,
ಮಗುವಿಗೆ ನೀಡಿ ನಿಜವಿದ್ಯೆಯೆಂಬ ಸಕ್ಕರೆಯ ಮುದದಿ.



(Contributed by Shri Govind Magal)

No comments:

Post a Comment

ಗೋ-ಕುಲ Go-Kula