Thursday, 31 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 07 - 09

ಲಙ್ಕಾವನಾಯ ಸಕಲಸ್ಯ ಚ ನಿಗ್ರಹೇsಸ್ಯಾಃ ಸಾಮರ್ಥ್ಯಮಪ್ರತಿಹತಂ ಪ್ರದದೌ ವಿಧಾತಾ ।
ಛಾಯಾಮವಾಕ್ಷಿಪದಸೌ ಪವನಾತ್ಮಜಸ್ಯ ಸೋsಸ್ಯಾಃ ಶರೀರಮನುವಿಶ್ಯ ಬಿಭೇದ 
ಚಾsಶು ॥೭.೦೭॥

ನಿರ್ವಹಿಸಲು ಲಂಕೆಯ ರಕ್ಷಣಾಕಾರ್ಯ,
ಸಿಂಹಿಕೆಗಿತ್ತು ಬ್ರಹ್ಮನಿಂದ ಅಮಿತಶಕ್ತಿಯ ವರ.
ಯಾವಾಗ ಸಿಂಹಿಕೆ ಮಾಡಿತೋ ಹನುಮನ ಛಾಯಾಗ್ರಹಣ,
ಅವಳ ದೇಹಹೊಕ್ಕು ಸೀಳಿದ ಹನುಮ ಕೊಟ್ಟವಳಿಗೆ ಮರಣ.

ನಿಸ್ಸೀಮಮಾತ್ಮಬಲಮಿತ್ಯನುದರ್ಶಯಾನೋ ಹತ್ವೈವ ತಾಮಪಿ ವಿಧಾತೃವರಾಭಿಗುಪ್ತಾಮ್  ।
ಲಮ್ಬೇ ಸ ಲಮ್ಬಶಿಖರೇ ನಿಪಪಾತ ಲಙ್ಕಾಪ್ರಾಕಾರರೂಪಕಗಿರಾವಥ ಸಞ್ಚುಕೋಚ ॥೭.೦೮॥

ಹನುಮಂತ  ತನ್ನ ಎಣೆಯಿರದ ಬಲವ ಲೋಕಕ್ಕೆ ತೋರಿದ,
ಸಿಂಹಿಕೆಯ ಸೀಳಿ ಲಂಕಾಪ್ರಾಕಾರದಲ್ಲಿದ್ದ ಲಂಬ ಶಿಖರದ ಮೇಲಿಳಿದ.
ಈರೀತಿ ಹನುಮಂತ ಲಂಕಾಪ್ರಾಕಾರ ಸೇರಿಕೊಂಡ,
ನಗರಪ್ರವೇಶಕ್ಕೆ ತಕ್ಕಂತೆ ತನ್ನ ರೂಪ ಕುಗ್ಗಿಸಿಕೊಂಡ.

ಭೂತ್ವಾಬಿಲಾಳಸಮಿತೋ ನಿಶಿತಾಂ ಪುರೀಂ ಚ ಪ್ರಾಪ್ಸ್ಯನ್ ದದರ್ಶ ನಿಜರೂಪವತೀಂ ಸ ಲಙ್ಕಾಮ್ ।
ರುದ್ಧೋsನಯಾssಶ್ವಥ ವಿಜಿತ್ಯ ಚ ತಾಂ ಸ್ವಮುಷ್ಟಿಪಿಷ್ಟಾಂ ತಯಾsನುಮತ ಏವ ವಿವೇಶ ಲಙ್ಕಾಮ್ ॥೭.೦೯॥

ಹನುಮಂತ ಬೆಕ್ಕಿಗೆ ಸಮವಾದ ಪರಿಮಾಣದ ದೇಹ ಹೊಂದಿದ,
ಪಟ್ಟಣ ಪ್ರಾಕಾರದಲ್ಲಿ ಲಂಕಾಭಿಮಾನಿ ದೇವತೆ ಎದುರಾದದ್ದು ನೋಡಿದ.
ಅವಳಿಂದ ತಡೆಯಲ್ಪಟ್ಟ ಹನುಮ ಕೊಟ್ಟವಳಿಗೆ ಎಡಗೈ ಹೊಡೆತ,
ಗೆದ್ದು ಅವಳ ಒಪ್ಪಿಗೆ ಪಡೆದೇ ಲಂಕೆಯ ಪ್ರವೇಶಿಸಿದ ಹನುಮಂತ.


Wednesday, 30 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 04 - 06

ನೈವಾತ್ರ ವಿಶ್ರಮಣಮೈಚ್ಛತ ನಿಃಶ್ರಮೋsಸೌ ನಿಃಸ್ಸೀಮಪೌರುಷಗುಣಸ್ಯ ಕುತಃ ಶ್ರಮೋsಸ್ಯ ।
ಆಶ್ಲಿಷ್ಯ ಪರ್ವತವರಂ ಸ ದದರ್ಶ ಗಚ್ಛನ್ ದೈವೈಸ್ತು ನಾಗಜನನೀಂ ಪ್ರಹಿತಾಂ ವರೇಣ ೦೭.೦೪॥

ಅಮಿತಬಲ ಪೌರುಷದ ಹನುಮಗೆಲ್ಲಿಯ ಶ್ರಮ,
ಶ್ರಮವಾಗದ ಶಕ್ತಿನಿಧಿಗ್ಯಾಕೆ ವಿಶ್ರಾಂತಿಯ ನೇಮ.
ಶ್ರೇಷ್ಠ ಪರ್ವತ ಮೈನಾಕಗಿತ್ತ ಪ್ರೀತಿಯ ಆಲಿಂಗನ,
ಮುನ್ನಡೆದು ಕಂಡ ನಾಗಮಾತೆಯಾದ ಸುರಸೆಯನ್ನ.

ಜಿಜ್ಞಾಸುಭಿರ್ನ್ನಿಜಬಲಂ ತವ ಭಕ್ಷಮೇತು ಯದ್ಯತ್ ತ್ವಮಿಚ್ಛಸಿ ತದಿತ್ಯಮರೋದಿತಾಯಾಃ ।
ಆಸ್ಯಂ ಪ್ರವಿಶ್ಯ ಸಪದಿ ಪ್ರವಿನಿಃಸೃತೋsಸ್ಮಾದ್ ದೇವಾನನನ್ದಯದುತ ಸ್ವೃತಮೇಷು ರಕ್ಷನ್ ॥೭-೦೫॥

ನುಂಗಬಯಸಿದ್ದೆಲ್ಲಾ ನಿನ್ನ ಬಾಯಿಗೆ ಬೀಳಲೆಂದು ಸುರಸೆಗೆ ದೇವತೆಗಳ ವರ,
ಕ್ಷಣಾರ್ಧದಲ್ಲಿ ಅವಳ ಬಾಯಿಹೊಕ್ಕು ಹೊರಬಂದ ತಾ ಅಂಜನೀಕುಮಾರ.
ದೇವತೆಗಳ ವರಕ್ಕೆ ಹನುಮಂತದೇವರು  ಕೊಟ್ಟ ಬೆಲೆ,
ತನ್ನ ಪೌರುಷ ಮೆರೆದು ಸುರಸೆಯಿಂದ ಸ್ತುತನಾದ ಕಲೆ.

ದೃಷ್ಟ್ವಾ ಸುರಪ್ರಣಯಿತಾಂ ಬಲಮಸ್ಯ ಚೋಗ್ರಂ ದೇವಾಃ ಪ್ರತುಷ್ಟುವುರಮುಂ ಸುಮನೋsಭಿವೃಷ್ಟ್ಯಾ ।
ತೈರಾದೃತಃ ಪುನರಸೌ ವಿಯತೈವ ಗಚ್ಛನ್ ಛಾಯಾಗ್ರಹಂ ಪ್ರತಿದದರ್ಶ ಚ ಸಿಂಹಿಕಾಖ್ಯಮ್ ॥೭.೦೬॥

ಹನುಮಂತಗಿರುವ ಬಲ ವಾತ್ಸಲ್ಯ ಕಂಡ ದೇವತಾವೃಂದ,
ಹಾಡಿ ಕೊಂಡಾಡಿದರವನ ಸ್ತುತಿಸುತ್ತ ಪುಷ್ಪವೃಷ್ಟಿಯಿಂದ.
ದೇವತೆಗಳಿಂದ ಆದರಿಸಲ್ಪಟ್ಟ ಹನುಮ ಮುಂದೆ ಸಾಗಿದ,
ನೆರಳಿಂದಲೇ ಸೆಳೆವ ರಾಕ್ಷಸಿ ಸಿಂಹಿಕೆಯನ್ನು ತಾ ನೋಡಿದ.
[Contributed by Shri Govind Magal]

Tuesday, 29 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 01 - 03

ಹನೂಮತ್ ಪ್ರತಿಯಾನಮ್

ರಾಮಾಯ ಶಾಶ್ವತಸುವಿಸ್ತೃತಷಡ್ಗುಣಾಯ ಸರ್ವೇಶ್ವರಾಯ ಸುಖಸಾರಮಹಾರ್ಣ್ಣವಾಯ
ನತ್ವಾ ಲಿಲಙ್ಘಯಿಷುರರ್ಣ್ಣವಮುತ್ಪಪಾತ ನಿಷ್ಪೀಡ್ಯತಂ ಗಿರಿವರಂ 
ಪವನಸ್ಯಸೂನುಃ ೦೭-೦೧
ಶಾಶ್ವತ ಸರ್ವವ್ಯಾಪ್ತ ವಿಸ್ತೃತಶಕ್ತ ಸದ್ಗುಣಗಳ ಸಾಗರ,
ಷಡ್ಗುಣಗಳ ಆಗರ ಎಲ್ಲರ ಒಡೆಯ ಶ್ರೀರಾಮಚಂದ್ರ.
ಸ್ಮರಿಸುತ್ತಾ ಭಕ್ರಿಯಿಂದ ಹನುಮಂತ ಮಾಡಿದ ನಮಸ್ಕಾರ,
ಮಹೇಂದ್ರಪರ್ವತವ ಒದ್ದು ಜಿಗಿದ ಹಾರಲು ಸಾಗರ.

ಚುಕ್ಷೋಭ ವಾರಿಧಿರನುಪ್ರಯಯೌ ಶೀಘ್ರಂ ಯಾದೋಗಣೈಃ ಸಹ ತದೀಯಬಲಾಭಿಕೃಷ್ಟಃ
ವೃಕ್ಷಾಶ್ಚ  ಪರ್ವತಗತಾಃ ಪವನೇನ ಪೂರ್ವಂ ಕ್ಷಿಪ್ತೋsರ್ಣ್ಣವೇ ಗಿರಿರುದಾಗಮದಸ್ಯ ಹೇತೋಃ೦೭.೦೨
ಸೆಳೆಯಿತು ಸಮುದ್ರವನ್ನೇ ಹನುಮಂತನ ಅಪರಿಮಿತ ಬಲ,
ಸಾಗರವಾಯಿತು ಸ್ಥಿರತೆ ಕಳೆದುಕೊಂಡು ಅಲ್ಲೋಲಕಲ್ಲೋಲ.
ಬೇರುಕಿತ್ತ ಮರಗಿಡಗಳೂ ಹಾರಿದವು ಹನುಮನ ಅನುಸರಿಸಿ,
ಮುಳುಗಿದ್ದ ಮೈನಾಕವೂ ಮೇಲೆದ್ದಿತು ಹನುಮಸೇವೆ ಬಯಸಿ.

ಸ್ಯಾಲೋ ಹರಸ್ಯ ಗಿರಿಪಕ್ಷವಿನಾಶಕಾಲೇ ಕ್ಷಿಪ್ತ್ವಾsರ್ಣ್ಣವೇ ಮರುತೋರ್ವರಿತಾತ್ಮಪಕ್ಷಃ
ಹೈಮೋ ಗಿರಿಃ ಪವನಜಸ್ಯ ತು ವಿಶ್ರಮಾರ್ತ್ಥಮುದ್ಭಿದ್ಯ 
ವಾರಿಧಿಮವರ್ದ್ಧದನೇಕಸಾನುಃ .೦೩
ಹಿಂದೆ ಪರ್ವತಗಳಿಗೆ ರೆಕ್ಕೆಗಳು ಇದ್ದವಂತೆ,
ಇಂದ್ರ ಅವನ್ನೆಲ್ಲಾ ಛೇದಿಸುತ್ತ ಬಂದನಂತೆ.
ರುದ್ರಾಣಿಯ ತಮ್ಮನಾದ ಮೈನಾಕ ಪರ್ವತ,
ಪ್ರಾಣನಿಂದ ಸಮುದ್ರಕ್ಕೆಸೆಯಲ್ಪಟ್ಟಾದನಂತೆ ರಕ್ಷಿತ.
ನೆನಪಾಯಿತಂತೆ ಅದಕೆ ಮುಖ್ಯಪ್ರಾಣನ ಕರುಣೆ,
ಮೇಲೆದ್ದು ಬಂತಂತೆ ಅನುಸರಿಸಿ ಉಪಕಾರ ಸ್ಮರಣೆ.
[Contributed by Shri Govind Magal]

Sunday, 27 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 56 - 59


ಅಪೂರಿತೇ ತೈಃ ಸಕಲೈಃ ಶತಸ್ಯ ಗಮಾಗಮೇ ಶತ್ರುಬಲಂ ಚ ವೀಕ್ಷ್ಯ ।
ಸುದುರ್ಗ್ಗಮತ್ವಂ ಚ ನಿಶಾಚರೇಶಪುರ್ಯ್ಯಾಃ ಸ ಧಾತುಃ ಸುತ ಆಬಭಾಷೇ ॥೬.೫೬॥

ತಿಳಿದಾದಮೇಲೆ ಎಲ್ಲಾ ಕಪಿಗಳ ಸಾಮರ್ಥ್ಯದ ಇತಿಮಿತಿ,
ಬ್ರಹ್ಮಪುತ್ರ ಜಾಂಬವಂತ ಆಲೋಚಿಸಿದ ಇತರ ಅನೇಕ ಸಂಗತಿ.
ಇತರ ಸಮಸ್ಯೆ ದಾರಿಯಲ್ಲಿನ ದುರ್ಗಮತ್ವ ಶತ್ರುಬಲ,
ಪರಾಮರ್ಶಿಸಿ ಮಾತಾಡುತಾನೆ ಜಾಂಬವಂತ ಕೆಲಕಾಲ.

ಅಯಂ ಹಿ ಗೃಧ್ರಃ ಶತಯೋಜನಂ ಗಿರಿಂ ತ್ರಿಕೂಟಮಾಹೇತ ಉತಾತ್ರ ವಿಘ್ನಾಃ ।
ಭವೇಯುರನ್ಯೇsಪಿ ತತೋ ಹನೂಮಾನೇಕಃ ಸಮರ್ತ್ಥೋ ನ ಪರೋsಸ್ತಿ ಕಶ್ಚಿತ್ ॥೬.೫೭॥

ಸಂಪಾತಿ ಹೇಳುವಂತೆ ತ್ರಿಕೂಟಪರ್ವತವಿದೆ ನೂರು ಯೋಜನ ದೂರ,
ಹಾರುವುದಷ್ಟೇ ಅಲ್ಲ ಎದುರಿಸಿ ಸಮಸ್ಯೆಗಳ ಕಂಡುಕೊಳ್ಳಬೇಕು ಪರಿಹಾರ.
ಈ ಕಾರಣದಿಂದ ಹನುಮಂತನೊಬ್ಬನೇ ಸಮರ್ಥ,
ಇನ್ಯಾರದೇ ಶ್ರಮವಾಗಲೀ ಆಗುವುದದು  ವ್ಯರ್ಥ.

ಉಕ್ತ್ವಾಸ ಇತ್ಥಂ ಪುನರಾಹ ಸೂನುಂ ಪ್ರಾಣಸ್ಯ ನಿಃಸ್ಸೀಮಬಲಂ; ಪ್ರಶಂಸಯನ್ ।
ತ್ವಮೇಕ ಏವಾತ್ರ ಪರಂ ಸಮರ್ತ್ಥಃ ಕುರುಷ್ವ ಚೈತತ್ ಪರಿಪಾಹಿ ವಾನರಾನ್ ॥೬.೫೮॥

ಜಾಂಬವಂತನಿಂದ ಹನುಮನ ವಿಶೇಷ ಗುಣಗಾನ,
ನಿನ್ನಿಂದ ಸಮುದ್ರತರಣ ರಾಮಸಂದೇಶ ತಲುಪಿಸೋ ತ್ರಾಣ.
ನೀನೊಬ್ಬನೇ ಸಮರ್ಥನಾಗಿರುವೆ ಮುಖ್ಯಪ್ರಾಣ,
ಪೂರೈಸುತ್ತಾ ಈ ಕಾರ್ಯ ಮಾಡು ನೀ ಕಪಿರಕ್ಷಣ.

ಇತೀರಿತೋsಸೌ ಹನುಮಾನ್ ನಿಜೇಪ್ಸಿತಂ ತೇಷಾಮಶಕ್ತಿಂ ಪ್ರಕಟಾಂ ವಿಧಾಯ ।
ಅವರ್ದ್ಧತಾsಶು ಪ್ರವಿಚಿನ್ತ್ಯ ರಾಮಂ ಸುಪೂರ್ಣ್ಣಶಕ್ತಿಂ ಚರಿತೋಸ್ತದಾಜ್ಞಾಮ್ ॥೬.೫೯॥

ಸಿದ್ಧವಾಯಿತೆಲ್ಲರ ಶಕ್ತಿ ಸಾಮರ್ಥ್ಯದ ಇತಿಮಿತಿ,
ಮನನವಾಯಿತೆಲ್ಲರಿಗೆ ಹನುಮನ ಜ್ಞಾನ- ಶಕ್ತಿ.
ಸರ್ವಶಕ್ತ ಶ್ರೀರಾಮಧ್ಯಾನದಲ್ಲಿ ಹನುಮಂತ,
ಅವನಾಜ್ಞೆಯ ನೆರೆವೇರಿಸುವುದಕೆ ಬೆಳೆದು ನಿಂತ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ ಸಮುದ್ರತರಣನಿಶ್ಚಯೋನಾಮ ಷಷ್ಠೋsಧ್ಯಾಯಃ ॥

ಶ್ರೀಮದಾನಂದತೀರ್ಥಭಗವತ್ಪಾದರಿಂದ ರಚಿತವಾದ,
ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯದ ಅನುವಾದ.
ಶ್ರೀರಾಮ ಚರಿತೆಯ ಸಮುದ್ರತರಣದ ಅಧ್ಯಾಯ,
ಆರನೇ ಅಧ್ಯಾಯ ರೂಪದಿ ಕೃಷ್ಣಾರ್ಪಣವಾದ ಭಾವ.

Saturday, 26 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 52 - 55

ತತಸ್ತು ತೇ ಬ್ರಹ್ಮಸುತೇನ ಪೃಷ್ಟಾ ನ್ಯವೇದಯನ್ನಾತ್ಮಬಲಂ ಪೃಥಕ್ ಪೃಥಕ್ ।
ದಶೈವ ಚಾsರಭ್ಯ ದಶೋತ್ತರಸ್ಯ ಕ್ರಮಾತ್ ಪಥೋ ಯೋಜನತೋsತಿಯಾನೇ ॥೬.೫೨॥

ಪ್ರಶ್ನಿಸಿದ ಬ್ರಹ್ಮಪುತ್ರನಾದಂಥ ಜಾಂಬವಂತ,
ಯಾರ್ಯಾರು ಎಷ್ಟೆಷ್ಟು ಹಾರಬಲ್ಲಿರಿ ಅಂತ.
ಹೇಳಿದವು ಕಪಿಗಳು ತಮ್ತಮ್ಮ ಶಕ್ತಿ ಸಾಮರ್ಥ್ಯ ಸಮೇತ,
ಹತ್ತು ಯೋಜನದಿಂದ ಹತ್ಹತ್ತು ಹೆಚ್ಚುತ್ತ ಎಂಬತ್ತಕ್ಕೆ ಸೀಮಿತ.


ಸನೀಲಮೈನ್ದದ್ವಿವಿದಾಃ ಸತಾರಾಃ ಸರ್ವೇsಪ್ಯಶೀತ್ಯಾಃ ಪರತೋ ನ ಶಕ್ತಾಃ ।
ಗನ್ತುಂ ಯದಾsಥಾsತ್ಮಬಲಂ ಸ ಜಾಮ್ಬವಾನ್ ಜಗಾದ ತಸ್ಮಾತ್ ಪುನರಷ್ಟಮಾಂಶಮ್ ॥೬.೫೩॥

ಕಪಿಗಳಾದ ನೀಲ, ಮೈಂದ, ದ್ವಿವಿದ ,ತಾರ,
ಅನುಕ್ರಮವಾಗಿ ಹಾರಬಲ್ಲರು ಎಂಬತ್ತರ ಪಾರ.
ಯಾರೂ ದಾಟಲಾರರು ಎಂಬತ್ತರ ಗಡಿಯ ತೀರ,
ಜಾಂಬವಂತನೆಂದ ಹಾರಬಲ್ಲೆ ತೊಂಬತ್ತು ಪೂರಾ.

ಬಲೇರ್ಯ್ಯದಾ ವಿಷ್ಣುರವಾಪ ಲೋಕಾಂಸ್ತ್ರಿಭಿಃ ಕ್ರಮೈರ್ನ್ನನ್ದಿರವಂ ಪ್ರಕುರ್ವತಾ ।
ತದಾ ಮಯಾ ಭ್ರಾನ್ತಮಿದಂ ಜಗತ್ತ್ರಯಂ ಸವೇದನಂ ಜಾನು ಮಮಾsಸ ಮೇರುತಃ ॥೬.೫೪॥

ಜಾಂಬವಂತ ಜ್ಞಾಪಿಸುತ್ತಾನೆ ವಾಮನಾವತಾರದ ಕಥೆ,
ಅತ್ಯುತ್ಸಾಹದಲ್ಲಿ ತಾನು ಶಕ್ತಿ ಹ್ರಾಸ ಮಾಡಿಕೊಂಡ ವ್ಯಥೆ.
ಹರಿಯ ವಾಮನವತಾರದ ಸಂದರ್ಭದಲ್ಲಿ,
ಹರುಷದಿಂದ ಹಾರಾಡಿದೆ ಅತಿ ಆನಂದದಲ್ಲಿ.
ನಾನಾಗ ಮೂರ್ಲೋಕ ಸುತ್ತುವ ಸಮಯ,
ಮೇರು ಬಡಿದು ಮೊಣಕಾಲಿಗಾಯ್ತು ಗಾಯ.

ಅತೋ ಜವೋ ಮೇ ನಹಿ ಪೂರ್ವಸಮ್ಮಿತಃ ಪುರಾ ತ್ವಹಂ ಷಣ್ಣವತಿಪ್ಲವೋsಸ್ಮಿ ।
ತತಃ ಕುಮಾರೋsಙ್ಗದ ಆಹ ಚಾಸ್ಮಾಚ್ಛತಂ ಪ್ಲವೇಯಂ ನ ತತೋsಭಿಜಾನೇ ॥೬.೫೫॥

ಆ ಕಾರಣದಿಂದ ಕುಸಿಯಿತು ನನ್ನ ವೇಗ,
ತೊಂಬತ್ತಾರು ಯೋಜನ ಹಾರುತ್ತಿದ್ದೆ ನಾನಾಗ.
ಕಿರಿ ಅಂಗದನೆಂದ ನಾ ನೂರು ಯೋಜನ ಜಿಗಿದೇನು,
ಆನಂತರ ಶಕ್ತಿಹೀನನಾಗಿ ಮಾಡಲಾರೆ ಮುಂದೇನೂ.
[Contributed by Shri Govind Magal]

Friday, 25 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 49 -51

ತಸ್ಯಾಗ್ರಜೋsಸಾವರುಣಸ್ಯ ಸೂನುಃ ಸೂರ್ಯ್ಯಸ್ಯ ಬಿಮ್ಬಂ ಸಹ ತೇನ ಯಾತಃ ।
ಜವಂ ಪರೀಕ್ಷನ್ನಥ ತಂ ಸುತಪ್ತಂ ಗುಪ್ತ್ವಾ ಪತತ್ರಕ್ಷಯಮಾಪ್ಯ ಚಾಪತತ್ ॥೬.೪೯॥

ಜಟಾಯುವಿನ ಅಣ್ಣ ವರುಣನ ಮಗ ಸಂಪಾತಿ,
ವೇಗ ಪರೀಕ್ಷಾಸ್ಪರ್ಧೆಯಲಿ ಒದಗಿತವಗೆ ಆ ಗತಿ.
ಅಣ್ಣ ತಮ್ಮಂದಿರಿಬ್ಬರೂ ಸೂರ್ಯನೆಡೆಗೆ ಹಾರಿದ ಕತೆ,
ತಮ್ಮನ ರಕ್ಷಿಸಿ ತನ್ನ ರೆಕ್ಕೆ ಸುಟ್ಟುಕೊಂಡು ಬಿದ್ದವನ ವ್ಯಥೆ.


ಸ ದಗ್ಧಪಕ್ಷಃ ಸವಿತೃಪ್ರತಾಪಾಚ್ಛ್ರುತ್ವೈವ ರಾಮಸ್ಯ ಕಥಾಂ ಸಪಕ್ಷಃ ।
ಭೂತ್ವಾ ಪುನಶ್ಚಾಽಶು ಮೃತಿಂ ಜಟಾಯುಷಃ ಶುಶ್ರಾವ ಪೃಷ್ಟ್ವಾ ಪುನರೇವ ಸಮ್ಯಕ್ ॥೬.೫೦॥

ಸೂರ್ಯನ ಶಾಖಕೆ ಸುಟ್ಟುಹೋದ ರೆಕ್ಕೆ ,
ಚಿಗುರಿದವಂತೆ ಶ್ರೀರಾಮಕಥಾ ಕೇಳಿದ್ದಕ್ಕೆ .
ಮೋಕ್ಷದಾತ ಶ್ರೀರಾಮಕಥಾ ಸಾರ,
ರೆಕ್ಕೆ ಮರಳಿದ್ದೇನು ದೊಡ್ಡ ಆಶ್ಚರ್ಯ.
ಇದನ್ನೆಲ್ಲಾ ನೋಡಿ ಕೇಳಿದ ಆ ಸಂಪಾತಿ,
ಪಡೆದ ಜಟಾಯು ಮರಣದ ಮಾಹಿತಿ.

ಸ ರಾವಣಸ್ಯಾಥ ಗತಿಂ ಸುತೋಕ್ತಾಂ ನಿವೇದ್ಯದೃಷ್ಟ್ವಾಜನಕಾತ್ಮಜಾಕೃತಿಮ್ ।
ಸ್ವಯಂ ತಥಾsಶೋಕವನೇ ನಿಷಣ್ಣಾಮವೋಚದೇಭ್ಯೋ ಹರಿಪುಙ್ಗವೇಭ್ಯಃ ॥೬.೫೧॥

ತನ್ನ ಮಗ ಸುಪಾರ್ಶ್ವನಿಂದ ತಿಳಿದ ರಾವಣವಾರ್ತೆಯ ಹೇಳಿದ,
ಮೇಲೆ ಹಾರಿ ಕಂಡು ಸೀತಾಕೃತಿ ಅಶೋಕವನದಲ್ಲಿರುವುದ ಅರುಹಿದ.
[Contributed by Shri Govind Magal]