Wednesday 15 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 11 - 15

ನಿರ್ದೋಷಪೂರ್ಣಗುಣವಿಗ್ರಹ ಆತ್ಮತನ್ತ್ರೋ
ನಿಶ್ಚೇತನಾತ್ಮಕಶರೀರಗುಣೈಶ್ಚ ಹೀನಃ |
ಆನನ್ದಮಾತ್ರಕರಪಾದಮುಖೋದರಾದಿಃ
ಸರ್ವತ್ರ ಚ ಸ್ವಗತಭೇದವಿವರ್ಜಿತಾತ್ಮಾ ||೧.೧೧||

ದೋಷವೇ ಇಲ್ಲದ ಗುಣಗಳ ಕಡಲು,
ಜಡಶರೀರವಿಲ್ಲದ ಅತ್ಯದ್ಭುತ ಒಡಲು,
ಆನಂದವೇ ಅವನ ಕೈ ಕಾಲು ಮುಖ ಹೊಟ್ಟೆ,
ಅವತಾರ ಮೂಲದಲ್ಲಿಲ್ಲವಗೆ ಭೇದದ ಇತಿಮಿತಿಯ ಕಟ್ಟೆ.

ಕಾಲಾಚ್ಚ ದೇಶಗುಣತೋsಸ್ಯ ನಚಾದಿರನ್ತೋ
ವೃದ್ಧಿಕ್ಷಯೌ ನತು ಪರಸ್ಯ ಸದಾತನಸ್ಯ |
ನೈತಾದೃಶಃ ಕ್ವಚ ಬಭೂವ ನಚೈವ ಭಾವ್ಯೋ
ನಾಸ್ತ್ಯುತ್ತರಃ ಕಿಮು ಪರಾತ್ ಪರಮಸ್ಯ ವಿಷ್ಣೋಃ ||೧.೧೨||

ಇವನು ಎಂದೆಂದೂ ಕಾಲಾತೀತ,
ದೇಶ ಗುಣದಿ -ಕೊನೆಯಿರದಾತ,
ಇವನಿಗಿಲ್ಲ ಹಿಗ್ಗು--ಕುಗ್ಗುವಿಕೆ,
ಹಿಂದಿಲ್ಲ ಮುಂದಿಲ್ಲ ಸಮ-ಅಂಥ ಹೆಗ್ಗಳಿಕೆ.


ಸರ್ವಜ್ಞ ಈಶ್ವರತಮಃ ಸ ಚ ಸರ್ವಶಕ್ತಿಃ
ಪೂರ್ಣಾವ್ಯಯಾತ್ಮಬಲಚಿತ್ಸುಖವೀರ್ಯಸಾರಃ |
ಯಸ್ಯಾsಜ್ಞಯಾ ರಹಿತಮಿನ್ದಿರಯಾ ಸಮೇತಂ
ಬ್ರಹ್ಮೇಶಪೂರ್ವಕಮಿದಂ ನತು ಕಸ್ಯ ಚೇಶಮ್ ||೧.೧೩||

ಎಲ್ಲವನೂ ತಿಳಿದಾತ,
ಸರ್ವ ಸಮರ್ಥನಾತ,
ಎಲ್ಲ ತೂಗಿಸಬಲ್ಲನಾತ,
ನಾಶವಿರದ ಆತ್ಮಬಲದಾತ,
ಅವನಾತ್ಮವೇ ಜ್ಞಾನ ಅವನಾತ್ಮವೇ ಸುಖ,
ಅವನಾತ್ಮವೇ ವೀರ್ಯ-ಅವನೆಲ್ಲರ ಆತ್ಮಸಖ,
ಲಕ್ಷ್ಮೀ ಸಮೇತ ಬ್ರಹ್ಮ ರುದ್ರ ಜೀವಗಣ,
ಅವನಾಣತಿ ಇರದಿರೆ ಅವರಿಗಿಲ್ಲ ತ್ರಾಣ,
ಸೃಷ್ಟಿಯಲ್ಲಿನ ಲೋಪದೋಷಗಳು ಅವನದಲ್ಲ,
ಜೀವರಾಶಿಯ ಸ್ವಭಾವ ತೋರುವ ಲಕುಮೀನಲ್ಲ.


ಆಭಾಸಕೋsಸ್ಯ ಪವನಃ ಪವನಸ್ಯ ರುದ್ರಃ
ಶೇಷಾತ್ಮಕೋ ಗರುಡ ಏವ ಚ ಶಕ್ರಕಾಮೌ |
ವೀನ್ದ್ರೇಶಯೋಸ್ತದಪರೇ ತ್ವನಯೋಶ್ಚ ತೇಷಾ-
ಮೃಷ್ಯಾದಯಃ ಕ್ರಮಶ ಊನಗುಣಾಃ ಶತಾಂಶಾಃ ॥೧.೧೪॥

ಈ ನಾರಾಯಣಗೆ ಮುಖ್ಯಪ್ರಾಣ ಪ್ರತಿಬಿಂಬ,
ಮುಖ್ಯಪ್ರಾಣಗೆ ಶೇಷಾತ್ಮಕ ರುದ್ರ ಗರುಡ ಪ್ರತಿಬಿಂಬ,
ಗರುಡ ರುದ್ರರಿಗೆ ದೇವೇಂದ್ರ ಕಾಮ ಪ್ರತಿಬಿಂಬ,
ಉಳಿದೆಲ್ಲ ದೇವತೆಗಳೂ ಇಂದ್ರ ಕಾಮರ ಪ್ರತಿಬಿಂಬ.


ಆಭಾಸಕಾ ತ್ವಥ ರಮಾsಸ್ಯ ಮರುತ್ಸ್ವರೂಪಾತ್
ಶ್ರೇಷ್ಠಾsಪ್ಯಜಾತ್ ತದನು ಗೀಃ ಶಿವತೋ ವರಿಷ್ಠಾ |
ತಸ್ಯಾ ಉಮಾ ವಿಪತಿನೀ ಚ ಗಿರಸ್ತಯೋಸ್ತು
ಶಚ್ಯಾದಿಕಾಃ ಕ್ರಮಶ ಏವ ಯಥಾ ಪುಮಾಂಸಃ ॥೧.೧೫॥  

ನಂತರ ಋಷಿ ಮೊದಲಾದವರ ಅನಾವರಣ,
ನೂರಾರು ಪಟ್ಟು ಕಡಿಮೆಯಾದವರು ಕ್ರಮೇಣ,
ಈ ತಾರತಮ್ಯಕೆ ಬಿಂಬ ಪ್ರತಿಬಿಂಬ ಭಾವ ಕಾರಣ,
ಬಿಂಬ ಪ್ರತಿಬಿಂಬ ಭಾವವೆಂದರೆ ಸದೃಶ,
ಪ್ರತಿ ಪ್ರತಿಬಿಂಬವೂ ಸದೃಶನಾದ ಬಿಂಬದ ವಶ.

[Contributed by Shri Govind Magal]


No comments:

Post a Comment

ಗೋ-ಕುಲ Go-Kula