Wednesday 22 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 43 -47

ಯಥಾರ್ಥವಚನಾನಾಂ ಚ ಮೋಹಾರ್ಥಾನಾಂ ಚ ಸಂಶಯಮ್ ।
ಅಪನೇತುಂ ಹಿ ಭಗವಾನ್ ಬ್ರಹ್ಮಸೂತ್ರಮಚೀಕ್ಲೃಪತ್ ॥೧.೪೩॥

ತಸ್ಮಾತ್ ಸೂತ್ರಾರ್ಥಮಾಗೃಹ್ಯ ಕರ್ತವ್ಯಃ ಸರ್ವನಿರ್ಣಯಃ ।
ಸರ್ವದೋಷವಿಹೀನತ್ವಂ ಗುಣೈಃ ಸರ್ವೈರುದೀರ್ಣತಾ ॥೧.೪೪॥

ಅಭೇದಃ ಸರ್ವರೂಪೇಷು ಜೀವಭೇದಃ ಸದೈವ ಚ ।
ವಿಷ್ಣೋರುಕ್ತಾನಿ ಸೂತ್ರೇಷು ಸರ್ವವೇದೇಡ್ಯತಾ ತಥಾ ॥೧.೪೫॥

ತಾರತಮ್ಯಂ ಚ ಮುಕ್ತಾನಾಂ ವಿಮುಕ್ತಿರ್ವಿದ್ಯಯಾ ತಥಾ ।
ತಸ್ಮಾದೇತದ್ವಿರುದ್ಧಂ ಯನ್ಮೋಹಾಯ ತದುದಾಹೃತಮ್ ॥೧.೪೬॥

ತಸ್ಮಾದ್ ಯೇಯೇ ಗುಣಾ ವಿಷ್ಣೋರ್ಗ್ರಾಹ್ಯಾಸ್ತೇ ಸರ್ವ ಏವ ತು ।
ಇತ್ಯಾದ್ಯುಕ್ತಂ ಭಗವತಾ ಭವಿಷ್ಯತ್ಪರ್ವಣಿ ಸ್ಫುಟಮ್ ॥೧.೪೭॥

ಕೆಲ ವೇದದ ಮಾತುಗಳವು ಯಥಾರ್,
ಮತ್ತೆ ಕೆಲವು ಮಾತುಗಳು ಮೋಹನಾರ್ಥ,
ವ್ಯಾಸರು ಕೊಟ್ಟ ಸಂಶಯ ನಿವಾರಕ -ಬ್ರಹ್ಮಸೂತ್ರ,
ಸಮೀಕರಿಸುವುದು ದೋಷದೂರ ಗುಣಪೂರ್ಣನ ಪಾತ್ರ.

ದೇವರು ಯಾವ ದೋಷಗಳೂ ಇರದಾತ,
ಎಲ್ಲಾ ಗುಣಗಳಿಂದಲೇ ಪರಿಪೂರ್ಣನಾತ,
ಅವನೇ ಎಲ್ಲರ ಅಂತರ್ಯಾಮಿಯಾಗಿರುವ,
ಅನಂತ ಅವತಾರಗಳ ಸ್ವಾಮಿ ತಾನಾಗಿರುವ,
ಅಂತರ್ಯಾಮಿತ್ವದಲ್ಲೂ ಅವತಾರದಲ್ಲೂ ಭೇದವಿರದಾತ,
ತನ್ನಾಮ ತದ್ರೂಪಗಳಲ್ಲಿದ್ದರೂ ಅದ್ವಿತೀಯ ತಾನೇ ತಾನಾತ.

ಮುಕ್ತರಲ್ಲೂ ಉಂಟೇ ಉಂಟು ತಾರತಮ್ಯದ ನೀತಿ,
ಸೂತ್ರ ಸಾರುತ್ತದೆ-ಭಗವಂತನ ಅಪರೋಕ್ಷಜ್ಞಾನದಿಂದಲೇ ಮುಕ್ತಿ,
ಇದಕ್ಕೆ ವಿರುದ್ಧವಾಗಿ ಕಾಣುವದೆಲ್ಲಾ ಮೋಹನಾರ್ಥ,
ವೇದ-ಸೂತ್ರಕ್ಕನುಗುಣವಾಗಿರುವುದೆಲ್ಲ ಸ್ವೀಕಾರಾರ್ಹ ಶಾಸ್ತ್ರಾರ್ಥ,
ಹರಿವಂಶದ ಭವಿಷ್ಯತ್ ಪರ್ವದಲ್ಲಿದೆ ಇದರ ಸ್ಪಷ್ಟತೆ,
ಎಲ್ಲಾ ಕೋನಗಳಿಂದ ಸಮೀಕರಿಸಬೇಕವನ ಸಾರ್ವಭೌಮತೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula