Tuesday 21 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 26 - 29

ಆಭಾಸಕಾಭಾಸಪರಾವಭಾಸ - ‘ರೂಪಾಣ್ಯಜಸ್ರಾಣಿ ಚ ಚೇತನಾನಾಮ್ ।
ವಿಷ್ಣೋಃ ಸದೈವಾತಿ ವಶಾತ್ ಕದಾsಪಿ ‘ಗಚ್ಛನ್ತಿ ಕೇಶಾದಿಗಣಾ ನ ಮುಕ್ತೌ’॥೧.೨೬॥

ಯಸ್ಮಿನ್ ಪರೇsನ್ಯೇsಪ್ಯಜಜೀವಕೋಶಾ’
ನಾಹಂ ಪರಾಯುರ್ನ ಮರೀಚಿಮುಖ್ಯಾಃ’ ।
ಜಾನನ್ತಿ ಯದ್ ಗುಣಗಣಾನ್ ನ ರಮಾದಯೋsಪಿ
ನಿತ್ಯಸ್ವತನ್ತ್ರ ಉತ ಕೋsಸ್ತಿ ತದನ್ಯ ಈಶಃ’ ॥೧.೨೭॥

ಈ ಭುವಿಯಲಿರುವ ಗುಣ ರೂಪ ಸೌಭಾಗ್ಯ ಆನಂದ,
ಸೌಂದರ್ಯ ಜ್ಞಾನ ಸಮಸ್ತ ಶ್ರೇಷ್ಠ ಗುಣಗಳೆಲ್ಲ ಭಗವಂತನಿಂದ,
ತಾರತಮ್ಯದಲ್ಲಿಹ ಉತ್ತಮರು-ಉತ್ತಮೋತ್ತಮರು,
ಸಹಜ-ಕೆಳಗಿನವರಿಗಿಂತ ಹೆಚ್ಚು ಗುಣ ಹೊತ್ತವರು,
ಹುಡುಕುತ್ತಾ ಹೋದರೆ ಇದರ ಮೂಲ,
ತೆರೆಯುತ್ತದೆ ಬಿಂಬ ಪ್ರತಿಬಿಂಬದ ಜಾಲ,
ಭಗವಂತನ ಪ್ರತಿಬಿಂಬನವ -ಚತುರ್ಮುಖ,
ಬ್ರಹ್ಮನ ಪ್ರತಿಬಿಂಬನವ-ಪಾರ್ವತೀ ಪ್ರಿಯಸಖ,
ರುದ್ರನ ಪ್ರತಿಬಿಂಬರು ಇಂದ್ರ ಕಾಮರು,
ಇಂದ್ರ ಕಾಮರ ಪ್ರತಿಬಿಂಬ ದೇವತೆಗಳವರು,
ದೇವತೆಗಳಿಂದ ಗಂಧರ್ವ ಋಷಿ ಇತರರು,
ಅವರೆಲ್ಲರ ಪ್ರತಿಬಿಂಬವಾಗಿ ರಾಜಾಧಿರಾಜರು,
ರಾಜರ ಪ್ರತಿಬಿಂಬದಿಂದ ಮನುಷ್ಯ ವರ್ಗದನಾವರಣ,
ಎಲ್ಲರಲೂ ಎಲ್ಲ ಪ್ರವಾಹದ ಮೂಲ ಅವ ಶ್ರೀಮನ್ನಾರಾಯಣ.
ಎಲ್ಲವೂ ಅವನ ವಶ-ಯಾರೂ ಅವನ ಮೀರಿಲ್ಲ,
ಎಂದೆಂದೂ ಯಾರೂ ಅವನ ಮೀರಲಾಗಲ್ಲ,
ಭಾಗವತದ ದೂರ್ವಾಸ ಅಂಬರೀಷರ ಪ್ರಸಂಗ,
ರುದ್ರರಿಂದ ಹೇಳಲ್ಪಟ್ಟ ದೇವತೆಗಳ ನ್ಯೂನತೆಯ ಭಾಗ,
ಅವನು ಗುಣಗಳ ಕಡಲು -ಸರ್ವರಿಗೂ ಮಿಗಿಲು,
ಇದರ ವಿವರಣೆ ಉಂಟು ವಾಮನ ಪದ್ಮ ಪುರಾಣದಲ್ಲು,
ಲೋಕದಲ್ಲುಂಟು ಗುಣ ಪಲ್ಲಟ ಶಕ್ತಿ ಹ್ರಾಸ -ನಾಶ,
ಲೋಕದೊಡೆಯಗೆಲ್ಲಿ ದೋಷ ಅವ ಸರ್ವಶ್ರೇಷ್ಠ ಶ್ರೀಶ.

ಸರ್ವೋತ್ತಮೋ ಹರಿರಿದಂ ತು ತದಾಜ್ಞಯೈವ
ಚೇತ್ತುಂ ಕ್ಷಮಂ ಸ ತು ಹರಿಃ ಪರಮಸ್ವತನ್ತ್ರಃ ।
ಪೂರ್ಣಾವ್ಯಯಾಗಣಿತನಿತ್ಯಗುಣಾರ್ಣವೋsಸೌ’
ಇತ್ಯೇವ ವೇದವಚನಾನಿ ಪರೋಕ್ತಯಶ್ಚ ॥೧.೨೯ ॥

ನಾರಾಯಣನು ಎಂದೆಂದಿಗೂ ಎಲ್ಲರಿಗಿಂತ ಮಿಗಿಲಾದವನು,
ಅವನಾಣತಿಯಂತೆ ಪ್ರಪಂಚ ಸಮರ್ಥವಾಗಿ-ಅರಿವಾಗುತ್ತದೆ ತಾನು,
ಭಗವಂತ ಸರ್ವದಾ ನಾಶವಿರದ ಅಗಣಿತ ತುಂಬು ಗುಣಗಳ ಗಡಣ,
ವೇದ ಪುರಾಣಗಳು ಸಾರಿಹೇಳುವ ಸರ್ವಶ್ರೇಷ್ಠ ಸರ್ವೋತ್ತಮ ನಾರಾಯಣ.

ವೇದ ಪುರಾಣ ಬ್ರಹ್ಮಸೂತ್ರಗಳು ಇತ್ಯಾದಿ,
ಇವಷ್ಟೇ ಹೇಗೆ ಪ್ರಮಾಣ ಎನ್ನುವ ಪ್ರತಿವಾದಿ,
ಪ್ರಮಾಣವೆಂದರೆ ಯಾವುದು-ಸ್ವೀಕಾರಾರ್ಹ?

ಶಾಸ್ತ್ರದ ಮೂಲಕ ಉತ್ತರಿಸುತ್ತಾರೆ ಆಚಾರ್ಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula