Tuesday 28 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 83 -87

ಸೃಷ್ಟಿರಕ್ಷಾಹೃತಿಜ್ಞಾನನಿಯತ್ಯಜ್ಞಾನಬನ್ಧನಾನ್ ।
ಮೋಕ್ಷಂ ಚ ವಿಷ್ಣುತಸ್ತ್ವೇವ ಜ್ಞಾತ್ವಾ ಮುಕ್ತಿರ್ನಚಾನ್ಯಥಾ ॥೧.೮೩॥

ಪ್ರಪಂಚದ ಸೃಷ್ಟಿ-ಪಾಲನೆ-ಜ್ಞಾನ-ನಿಯಮನ-ಬಂಧನ,
ಎಲ್ಲದರ ಕೂಲಂಕಷ ತಿಳುವಳಿಕೆಯೇ ಮೋಕ್ಷಕ್ಕೆ ಸಾಧನ.

ವೇದಾಂಶ್ಚ ಪಞ್ಚರಾತ್ರಾಣಿ ಸೇತಿಹಾಸಪುರಾಣಕಾನ್।
ಜ್ಞಾತ್ವಾ ವಿಷ್ಣುಪರಾನೇವ ಮುಚ್ಯತೇ ನಾನ್ಯಥಾ ಕ್ವಚಿತ್ ॥೧.೮೪॥

ವೇದ-ಪಂಚರಾತ್ರ-ಇತಿಹಾಸ-ಪುರಾಣ,
ಎಲ್ಲದರ ಪ್ರತಿಪಾದನೆ ಅದು-ನಾರಾಯಣ,
ಈ ಸಮಗ್ರ ತಿಳಿವಿನಿಂದಲೇ ಜೀವಕ್ಕೆ ಬಿಡುಗಡೆಯ  ಭಾಗ್ಯ,
ಭಗವಂತನ ಗುಣಾಧಿಕ್ಯ ಜ್ಞಾನದಿಂದ ಹೊರತು-ಇಲ್ಲ ಅನ್ಯ ಮಾರ್ಗ.

ಮಾಹಾತ್ಮ್ಯಜ್ಞಾನಪೂರ್ವಸ್ತು ಸುದೃಢಃ ಸರ್ವತೋsಧಿಕಃ।
ಸ್ನೇಹೋ ಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನಚಾನ್ಯಥಾ ॥೧.೮೫॥

ಏನದು ಭಕ್ತಿ? ಏನದರ ಶಕ್ತಿ,
ಆಚಾರ್ಯರು ಕೊಡುವ ಸ್ಪಷ್ಟ ಉಕ್ತಿ,
ಜ್ಞಾನಪೂರ್ವಕವಾದ ಅಧಿಕ ಸ್ನೇಹ-ಪ್ರೀತಿ,
ಈ ಥರದ ಭಕ್ತಿಯಿಂದಲೇ ಲಭ್ಯವದು ಮುಕ್ತಿ.


ತ್ರಿವಿಧಾ ಜೀವಸಙ್ಘಾಸ್ತು ದೇವಮಾನುಷದಾನವಾಃ ।
ತತ್ರ ದೇವಾ ಮುಕ್ತಿಯೋಗ್ಯಾ ಮಾನುಷೇಷೂತ್ತಮಾಸ್ತಥಾ ॥೧.೮೬॥

ಮಧ್ಯಮಾ ಮಾನುಷಾ ಯೇ ತು ಸೃತಿಯೋಗ್ಯಾಃ ಸದೈವ ಹಿ ।
ಅಧಮಾ ನಿರಯಾಯೈವ ದಾನವಾಸ್ತು ತಮೋಲಯಾಃ ॥೧.೮೭॥

ಜೀವರಾಶಿಯಲ್ಲಿನ ಪ್ರಭೇದಗಳು ಮೂರು,
ದೇವತೆಗಳು --ಮನುಷ್ಯರು --ದಾನವರು,
ಇವರಲ್ಲಿ ಭಕ್ತಿ ಮಾಡುವವರು ಯಾರ್ಯಾರು?
ದೇವತೆಗಳು ಮತ್ತು ಮನುಷ್ಯೋತ್ತಮರು.

ಮನುಷ್ಯರಲ್ಲಿ ಮೂರು ವಿಧದ ಸ್ತೋಮ,
ಅವೇ ಉತ್ತಮ - ಮಧ್ಯಮ - ಅಧಮ,
ಉತ್ತಮರದು ಸದಾ ಭಕ್ತಿಯ ನಿಯಮ,
ಮಧ್ಯಮರದು ಅದು ದ್ವಂದ್ವದ ಧಾಮ,
ದ್ವೇಷ ಮಾಡುವವನೇ(ರೇ) ಮನುಷ್ಯಾಧಮ,
ಉತ್ತಮರಿಗೆ ಲಭ್ಯವದು-- ಮೋಕ್ಷ,
ಮಧ್ಯಮರದು ನಿತ್ಯಸಂಸಾರಿಗಳ ಕಕ್ಷ,

ಅಧಮರಿಗೆ ಖಚಿತವದು ತಮಸ್ಸಿನ ಭಿಕ್ಷ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula