Saturday 25 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 66 - 71

ಪ್ರ ಘಾ ನ್ವಸ್ಯ ಮಹತೋ ಮಹಾನಿ ‘ಸತ್ಯಾ ಸತ್ಯಸ್ಯ ಕರಣಾನಿ ವೋಚಮ್’ ।
ಸತ್ಯಮೇನಮನು ವಿಶ್ವೇ ಮದನ್ತಿ ‘ರಾತಿಂ ದೇವಸ್ಯ ಗೃಣತೋ ಮಘೋನಃ’॥೧.೬೬॥

(ಪ್ರ ಘಾ ನ್ವಸ್ಯ ಮಹತೋ..... ಎನ್ನುವ  ಈ ಮಾತು  ಋಗ್ವೇದದ ಎರಡನೇ ಮಂಡಲದ ಹದಿನೈದನೇ ಸೂಕ್ತ (ಗೃತ್ಸಮದ ಮಂಡಲ).)
(ಸತ್ಯಮೇನಮನು... ಎನ್ನುವ ಸಾಲು ಋಗ್ವೇದದಲ್ಲಿ ನಾಲ್ಕನೆಯ ಮಂಡಲದಲ್ಲಿ ಹದಿನೇಳನೆಯ ಸೂಕ್ತದಲ್ಲಿ ಐದನೆಯ ಋಕ್).

ಈ  ನಾರಾಯಣನು ಮಹಾಮಹಿಮ ಸತ್ಯಸ್ಯ ಸತ್ಯ,
ಭಕ್ತಾದಿಗಳ ಸ್ತೋತ್ರವಂದಿತನಾದ ಅವನ ಸೃಷ್ಟಿಯೂ ಸತ್ಯ,
ಇದನ್ನರಿತ ಸಜ್ಜನರಿಗೆ ಲಭ್ಯವಾಗುವ ಫಲವೂ ಸತ್ಯ,
ಇದರಿಂದ ಸ್ಪಷ್ಟವಾಗುತ್ತದೆ ಜಗತ್ತಲ್ಲವೇ ಅಲ್ಲ ಮಿಥ್ಯ.

ಯಚ್ಚಿಕೇತ ಸತ್ಯಮಿತ್ ತನ್ನ ಮೋಘಂ ‘ವಸು ಸ್ಪಾರ್ಹಮುತ ಜೇತೋತ ದಾತಾ।
ಸತ್ಯಃ ಸೋ ಅಸ್ಯ ಮಹಿಮಾ ಗೃಣೇ ‘ಶವೋ ಯಜ್ಞೇಷು ವಿಪ್ರರಾಜ್ಯೇ’ ॥೧.೬೭॥

(ಯಚ್ಚಿಕೇತ ಸತ್ಯಮಿತ್ ......ಇದು ಋಗ್ವೇದದ ಹತ್ತನೇ ಮಂಡಲದ ೫೫ನೆಯ ಸೂಕ್ತ, ೬ನೆಯ ಋಕ್.)
(ಸತ್ಯಃ ಸೋ ಅಸ್ಯ ಮಹಿಮಾ .....ಋಗ್ವೇದದ ಮೂರನೇ ಮಂಡಲ ೩ನೆಯ ಸೂಕ್ತ ೪ನೆಯ ಋಕ್.)

ಪರಮಾತ್ಮನ ಸೃಷ್ಟಿಯೆಲ್ಲವೂ ಪರಮಸತ್ಯ,
ಅದು ಮಿಥ್ಯವಲ್ಲವಾದ್ದರಿಂದ ಹೇಗಾಗುತ್ತದೆ ವ್ಯರ್ಥ?
ಮೂಲೋಕದ ಸಂಪತ್ತನ್ನು ಬಲಿಯಿಂದ ದಾನ ಪಡೆದದ್ದು ಸತ್ಯ,
ವಾಮನನಾಗಿ ಬಲಿಯ ಗೆದ್ದು ಅದನ್ನು ಪುರಂದರಗಿತ್ತಿದ್ದೂ ಸತ್ಯ,
ಯಜ್ಞಗಳಲ್ಲಿ ಬ್ರಾಹ್ಮಣರು ಹೇಳುವುದು ಭಗವಂತನ ಮಹಿಮೆ,
ಸರ್ವರೀತಿಯಿಂದಲೂ ಸ್ಥಾಪಿತವಾಗಿದೆ ಸತ್ಯಸಂಕಲ್ಪನ ಹಿರಿಮೆ.

ಸತ್ಯಾ ವಿಷ್ಣೋರ್ಗುಣಾಃ ಸರ್ವೇ ಸತ್ಯಾ ಜೀವೇಶಯೋರ್ಭಿದಾ ।
ಸತ್ಯೋ ಮಿಥೋ ಜೀವಭೇದಃ ಸತ್ಯಂ ಚ ಜಗದೀದೃಶಮ್ ॥೧.೬೮॥

ಭಗವಂತನ ಗುಣಗಳಾಗಿವೆ ಸತ್ಯ,
ಜೀವ ಈಶ್ವರರ ಭೇದವು ನಿತ್ಯ,
ಜೀವರ ಪರಸ್ಪರ ಭೇದವೂ ನಿತ್ಯ,
ಪಂಚಭೂತಗಳಿಂದಾದ ಜಗತ್ತು ಸತ್ಯ.

 ಅಸತ್ಯಃ ಸ್ವಗತೋ ಭೇದೋ ವಿಷ್ಣೋರ್ನಾನ್ಯದಸತ್ಯಕಮ್ ।
ಜಗತ್ ಪ್ರವಾಹಃ ಸತ್ಯೋsಯಂ ಪಞ್ಚಭೇದಸಮನ್ವಿತಃ ॥೧.೬೯॥

ಜೀವೇಶಯೋರ್ಭಿದಾ ಚೈವ ಜೀವಭೇದಃ ಪರಸ್ಪರಮ್ ।
ಜಡೇಶಯೋರ್ಜಡಾನಾಂ ಚ ಜಡಜೀವಭಿದಾ ತಥಾ ॥೧.೭೦॥

ಪಞ್ಚಭೇದಾ ಇಮೇ ನಿತ್ಯಾಃ ಸರ್ವಾವಸ್ಥಾಸು ಸರ್ವಶಃ ।
ಮುಕ್ತಾನಾಂ ಚ ನ ಹೀಯನ್ತೇ ತಾರತಮ್ಯಂ ಚ ಸರ್ವದಾ ॥೧.೭೧॥

ನಾರಾಯಣನ ರೂಪಗಳಲ್ಲಿರುವ ಭೇದವು ಅಲ್ಲ ಸತ್ಯ,
ಉಳಿದ ಯಾವುದೂ ಮಿಥ್ಯವಲ್ಲ ಸರ್ವವೂ ಸತ್ಯ,
ಪಂಚ ಭೇದಗಳಿಂದ ಕೂಡಿದ ಜಗತ್ತು,
ಸತ್ಯವೇ ಅದು-ಅಂಗೈಯಲ್ಲಿರುವಂತೆ ಮುತ್ತು .

ಜೀವಾತ್ಮ ಪರಮಾತ್ಮರಲ್ಲಿದೆ ಭೇದ,
ಪರಸ್ಪರ ಜೀವರಲ್ಲಿದೆ ಭೇದ,
ಜಡ ಪರಮಾತ್ಮನಲ್ಲಿದೆ ಭೇದ,
ಜಡ ಜಡಗಳಲ್ಲಿದೆ ಭೇದ,
ಜಡ ಜೀವರಲ್ಲಿದೆ ಭೇದ,
ಈ ಪಂಚ ಭೇದಗಳವು ಎಂದೆಂದೂ ನಿತ್ಯ,
ಕಾಲಮಿತಿಯಿರದ ಅನಾದಿ ಅನಂತ ನಿತ್ಯ,

ಮುಕ್ತರಲ್ಲೂ ಪಂಚ ಭೇದ ತಾರತಮ್ಯ ನಿತ್ಯ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula