Wednesday 15 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 16 - 20

ತಾಭ್ಯಶ್ಚತೇ ಶತಗುಣೈರ್ದಶತೋ ವರಿಷ್ಠಾಃ
ಪಞ್ಚೋತ್ತರೈರಪಿ ಯಥಾಕ್ರಮತಃ ಶ್ರುತಿಸ್ಥಾಃ |
ಶಬ್ದೋ ಬಹುತ್ವವಚನಃ ಶತಮಿತ್ಯತಶ್ಚ
ಶ್ರುತ್ಯನ್ತರೇಷು ಬಹುಧೋಕ್ತಿವಿರುದ್ಧತಾ ನ ॥೧.೧೬॥

ಲಕ್ಷ್ಮೀದೇವಿ ಪರಮಾತ್ನನ ಸ್ತ್ರೀರೂಪದ ಪ್ರತಿಬಿಂಬ 
ನಿಶ್ಚಿತಜ್ಞಾನವದು ಲಕ್ಷ್ಮಿ-ಬ್ರಹ್ಮ ವಾಯುಗಳಿಗಿಂತ ಮಿಗಿಲೆಂಬ,
ಶಿವಗೆ ಮಿಗಿಲಾದ ಸರಸ್ವತಿ(ಭಾರತಿ) ಲಕ್ಷ್ಮಿಯ ಪ್ರತಿಬಿಂಬ,
ಪಾರ್ವತೀದೇವಿ ಸರಸ್ವತಿಯ ಪ್ರತಿಬಿಂಬ,
ಸುಪರ್ಣಿ ವಾರುಣಿ ಪಾರ್ವತಿಯರಿಗೆ ಶಚಿಯಾದಿಗಳು ಪ್ರತಿಬಿಂಬ,
ಯಾವ ರೀತಿ ಸೌಂದರ್ಯ ಗುಣ ಲಾವಣ್ಯಗಳಲಿ ವ್ಯತ್ಯಾಸ,
ಸ್ತ್ರೀ ಪುರುಷ ದೇವತೆಗಳಲಿ ಅನುಗುಣವಾಗಿ ತಾರತಮ್ಯದ ಲಾಸ್ಯ.


ತೇಷಾಂ ಸ್ವರೂಪಮಿದಮೇವ ಯತೋsಥ ಮುಕ್ತಾ
ಅಪ್ಯೇವಮೇವ ಸತತೋಚ್ಚವಿನೀಚರೂಪಾಃ |
ಶಬ್ದಃ ಶತಂ ದಶ ಸಹಸ್ರಮಿತಿ ಸ್ಮ ಯಸ್ಮಾತ್
ತಸ್ಮಾನ್ನ ಹೀನವಚನೋsಥ ತತೋsಗ್ರ್ಯರೂಪಾಃ ॥೧.೧೭॥

ಯಾವರೀತಿಯಿದೆಯೋ ಜೀವರ ಸ್ವರೂಪಗಳು,
ಪ್ರಾಪ್ತಿ ಮೋಕ್ಷದಲ್ಲೂ ತಾರತಮ್ಯೋಕ್ತ ಪ್ರಕಾರಗಳು,
ನೂರು ಹತ್ತು ಸಾವಿರಗಳು ಹೇಳುವುದು ಅಧಿಕ,
ಪಕ್ಷಪಾತವಿರದ ಅರ್ಹ ಸ್ಥಾನ ಮಾನಗಳು ನಿಗದಿತ.


ಏವಂ ನರೋತ್ತಮಪರಾಸ್ತು ವಿಮುಕ್ತಿಯೋಗ್ಯಾ
ಅನ್ಯೇ ಚ ಸಂಸೃತಿಪರಾ ಅಸುರಾಸ್ತಮೋಗಾಃ |
ಏವಂ ಸದೈವ ನಿಯಮಃ ಕ್ವಚಿದನ್ಯಥಾ ನ
ಯಾವನ್ನಪೂರ್ತಿರುತ ಸಂಸೃತಿಗಾಃ ಸಮಸ್ತಾಃ ॥೧.೧೮ ॥  

ಮುಕ್ತಿಯೋಗ್ಯರಾದ ಸಾತ್ವಿಕರು,
ನಿತ್ಯಸಂಸಾರದಲ್ಲಿರುವ ರಾಜಸರು,
ತಮಸ್ಸಿಗೆ ತೆರಳುವ ತಾಮಸ ಅಸುರರು,
ಇವರೆಲ್ಲರೂ ತಾರತಮ್ಯದಿ ಬಂಧಿತರು,
ತಾರತಮ್ಯವಿದು ಅನಿವಾರ್ಯ ನಿಯಮ,
ಮುಗಿಯದ ಸಂಸಾರಿಗಳ ಅವಿಭಾಜ್ಯ ಧರ್ಮ.


ಪೂರ್ತಿಶ್ಚ ನೈವ ನಿಯಮಾದ್ ಭವಿತಾ ಹಿ ಯಸ್ಮಾತ್
ತಸ್ಮಾತ್ ಸಮಾಪ್ತಿಮಪಿ ಯಾನ್ತಿ ನ ಜೀವಸಙ್ಘಾಃ |
ಆನನ್ತ್ಯಮೇವ ಗಣಶೋsಸ್ತಿ ಯತೋ ಹಿ ತೇಷಾ-
ಮಿತ್ಥಂ ತತಃ ಸಕಲಕಾಲಗತಾ ಪ್ರವೃತ್ತಿಃ ॥೧.೧೯॥

ಜೀವರಿಗಿಲ್ಲ ಅಂತ್ಯ-ಅವರೂ ಅನಂತ,
ಅವರ ಅನಂತತ್ವವೂ ಗುಂಪುಗಳಲಿ ಬಂಧಿತ,
ಮೇಲಿನವರೆಲ್ಲಾ ಕಾಲದಿಂದ ಬಂಧಿತ,
ಕಾಲದ ಈ ಪ್ರವೃತ್ತಿಯದು ಅಬಾಧಿತ.


ಏತೈಃ ಸುರಾದಿಭಿರತಿಪ್ರತಿಭಾದಿಯುಕ್ತೈ-
ರ್ಯುಕ್ತೈಃ ಸಹೈವ ಸತತಂ ಪ್ರವಿಚಿನ್ತಯದ್ಭಿಃ |
ಪೂರ್ತೇರಚಿನ್ತ್ಯಮಹಿಮಃ ಪರಮಃ ಪರಾತ್ಮಾ
ನಾರಾಯಣೋsಸ್ಯ ಗುಣವಿಸ್ತೃತಿರನ್ಯಗಾ ಕ್ವ ॥೧.೨೦ ॥

ಪ್ರತಿಭಾನ್ವಿತ ದೇವತೆಗಳಿಂದಾಗುವ ಚಿಂತನೆ,
ಆಗುವುದಿಲ್ಲ ಪರಮಾತ್ಮನ ಗುಣಗಳ ಗಣನೆ,
ಮುಗಿಯದ ಜೀವರೂ ಅನಂತ,
ಅಳೆಯಲಾಗದ ದೇಶವೂ ಅನಂತ,
ಜೀವ -ದೇವರ ಕ್ರಿಯೆಯೂ ಅನಂತ,
ಎರಡನ್ನೂ ನುಂಗುವ ಕಾಲವೂ ಅನಂತ,
ಪರಮಾತ್ಮನ ಗುಣಗಳೂ ಅವು ಅನಂತ,

ಎಟುಕದ ಉತ್ಕೃಷ್ಟ ವ್ಯಾಪ್ತ "ವಿಷ್ಣು"ಆತ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula