Wednesday 22 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 52 - 55

ಸ್ಕಾನ್ದೇsಪ್ಯುಕ್ತಂ ಶಿವೇನೈವ ಷಣ್ಮುಖಾಯೈವ ಸಾದರಮ್ ।
ಶಿವಶಾಸ್ತ್ರೇsಪಿ ತದ್ ಗ್ರಾಹ್ಯಂ ಭಗವಚ್ಛಾಸ್ತ್ರಯೋಗಿ ಯತ್ ॥೧.೫೨॥

ಪರಮೋ ವಿಷ್ಣುರೇವೈಕಸ್ತಜ್ಜ್ಞಾನಂ ಮೋಕ್ಷಸಾಧನಮ್ ।
ಶಾಸ್ತ್ರಾಣಾಂ ನಿರ್ಣಯಸ್ತ್ವೇಷ ತದನ್ಯನ್ಮೋಹನಾಯ ಹಿ ॥೧.೫೩॥

ಜ್ಞಾನಂ ವಿನಾ ತು ಯಾ ಮುಕ್ತಿಃ ಸಾಮ್ಯಂ ಚ ಮಮ ವಿಷ್ಣುನಾ ।
ತೀರ್ಥಾದಿಮಾತ್ರತೋ ಜ್ಞಾನಂ ಮಮಾsಧಿಕ್ಯಂ ಚ ವಿಷ್ಣುತಃ ॥೧.೫೪॥

ಅಭೇದಶ್ಚಾಸ್ಮದಾದೀನಾಂ ಮುಕ್ತಾನಾಂ ಹರಿಣಾ ತಥಾ ।
ಇತ್ಯಾದಿ ಸರ್ವಂ ಮೋಹಾಯ ಕಥ್ಯತೇ ಪುತ್ರ ನಾನ್ಯಥಾ’ ॥೧.೫೫॥

ಸ್ಕಂದಪುರಾಣದಲ್ಲಿ ಶಿವನಿಂದ ಷಣ್ಮುಖಗೆ ಹೇಳಿದ ವಾಕ್ಯ,
ಆದರದಿಂದ ತಂದೆ ಮಗನಿಗೆ ಹೇಳಿದ್ದೇ-ಆಚಾರ್ಯರಿಂದ ಉಲ್ಲೇಖ,
ಇದು ಪ್ರೀತಿಯ ತಂದೆ ಮಗನ ಮಧ್ಯದ ಸಂಭಾಷಣೆ,
ಇಲ್ಹೇಗೆ ಬಂದೀತು ದಾರಿತಪ್ಪಿಸುವ ಸುಳ್ಳು ಧೋರಣೆ,
ಸ್ಕಂದಪುರಾಣ ಶಿವನನ್ನು ಎತ್ತಿ ಹೇಳುವ ಶಾಸ್ತ್ರ,
ಶಿವನೇ ಮಾಡುತ್ತಾನೆ ಹರಿಸರ್ವೋತ್ತಮತ್ವದ ಸ್ತೋತ್ರ,
ರುದ್ರನೇ ಹೇಳುತ್ತಾನೆ ನಾರಾಯಣನೊಬ್ಬನೇ ಸರ್ವೋತ್ತಮ,
ಆ ಜ್ಞಾನ ಸಾಕಾರವಾದಾಗಲೇ ಲಭ್ಯ ಮೋಕ್ಷದ ಧಾಮ,
ಇದೇ ಶಾಸ್ತ್ರದ ಪರಮ ಪವಿತ್ರವಾದ ಗುಟ್ಟು,
ಉಳಿದುದೆಲ್ಲಾ ಮೋಹನಾರ್ಥ -ವಿಷ್ಣುಪಾರಮ್ಯ ಬಿಟ್ಟು.

ಶಿವ ಕೊಡುತ್ತಾನೆ ಮೋಹನಕ್ಕಾಗಿ ಶಾಸ್ತ್ರದಲ್ಲಿ ಹೇಳಿದ ಪಟ್ಟಿ,
ಜ್ಞಾನವಿಲ್ಲದೇ ಮುಕ್ತಿ ಸಾಧ್ಯವೆಂಬುದು -ಮೋಹಕವದು ಗಟ್ಟಿ,
ಎಲ್ಲಾದರೂ ಹೇಳಿದ್ದರೆ ಶಿವ-ನಾರಾಯಣರಿಗೆ ಸಾಮ್ಯತೆ,
ಅದೂ ಕೂಡಾ ಅಸುರ ಮೋಹನಾರ್ಥ ಹೇಳಿದ ಕತೆ,
ಪುಣ್ಯತೀರ್ಥದ ಸ್ನಾನದಿಂದ ಜ್ಞಾನ,
ಸುಳ್ಳು ಹೇಳಿದ್ದದು -ದೈತ್ಯ ಮೋಹನ,
ನಾನು(ಶಿವ) ಬ್ರಹ್ಮ ವಿಷ್ಣು -ಮೂವರಲ್ಲಿ ಅಭೇದ,
ಅಯೋಗ್ಯರಿಗೆ ಹೇಳಿದ ಪ್ರಭೇದ-ನಂಬಿದರೆ ಪ್ರಮಾದ,
ಶಿವ ಷಣ್ಮುಖನ ಮಗನೇ ಎಂದು ಕರೆದ ರೀತಿ,

ದಾರಿ ತಪ್ಪದಿರಲಿ ಎಂದ್ಹೇಳಿದ ಕಳಕಳಿಯ ನೀತಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula