Wednesday 29 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 88 - 92

ಮುಕ್ತಿರ್ನಿತ್ಯಾ ತಮಶ್ಚೈವ ನಾsವೃತ್ತಿಃ ಪುನರೇತಯೋಃ ।
ದೇವಾನಾಂ ನಿರಯೋ ನಾಸ್ತಿ ತಮಶ್ಚಾಪಿ ಕಥಞ್ಚನ ॥೧.೮೮॥

ಮುಕ್ತಿ - ತಮಸ್ಸಿಗೆ ಹೋದವರಿಗಿಲ್ಲ ವಾಪಸಾತಿ,
ಮತ್ತೆ ಬರಲಾಗದ ಆಯಾ ಸ್ಥಾನಗಳೇ ಗತಿ,
ದೇವತೆಗಳಿಗೆಲ್ಲಿ(ಇಲ್ಲ) ತಮಸ್ಸಿನ ಭೀತಿ.

ನಾಸುರಾಣಾಂ ತಥಾ ಮುಕ್ತಿಃ ಕದಾಚಿತ್ ಕೇನಚಿತ್ ಕ್ವಚಿತ್ ।
ಮಾನುಷಾಣಾಂ ಮಧ್ಯಮಾನಾಂ ನೈವೈತದ್ ದ್ವಯಮಾಪ್ಯತೇ ॥೧.೮೯॥

ಅಸುರರಿಗೆ ಹಿಂದಾಗಿಲ್ಲ ಮುಕ್ತಿ,
ಆಗಲ್ಲ ಎಂದೆಂದೂ ಎಂದೇ ಉಕ್ತಿ,
ಅಂಧಂತಮಸ್ಸು ಮಧ್ಯಮ ಮನುಷ್ಯರಿಗಾಗಲ್ಲ,
ಹಾಗೇ ಸುಖ ರೂಪದ ಮೋಕ್ಷವೂ ಆಗಲ್ಲ.

ಅಸುರಾಣಾಂ ತಮಃ ಪ್ರಾಪ್ತಿಸ್ತದಾ ನಿಯಮತೋ ಭವೇತ್ ।
ಯದಾ ತು ಜ್ಞಾನಿಸದ್ಭಾವೇ ನೈವ ಗೃಹ್ಣನ್ತಿ ತತ್ ಪರಮ್ ॥೧.೯೦॥

ಅಸುರರಿಗೆ ಅಂಧಂತಮಸ್ಸು ಕಟ್ಟಿಟ್ಟ ಬುತ್ತಿ,
ಭಗವದ್ಜ್ಞಾನಕ್ಕೆ ತೆರೆದುಕೊಳ್ಳದ ದೈತ್ಯರಿಗಾಗುವ ಶಾಸ್ತಿ.




ತದಾ ಮುಕ್ತಿಶ್ಚ ದೇವಾನಾಂ ಯದಾ ಪ್ರತ್ಯಕ್ಷಗೋ ಹರಿಃ ।
ಸ್ವಯೋಗ್ಯಯೋಪಾಸನಯಾ ತನ್ವಾ ತದ್ಯೋಗ್ಯಯಾ ತಥಾ ॥೧.೯೧॥

ಯೋಗ್ಯತೆಗೆ ತಕ್ಕುದಾಗಿ ದೊರೆಯುವ ದೇಹ,
ಯೋಗ್ಯತೆಗೆ ತಕ್ಕುದಾದ ಭಗವದ್ಜ್ಞಾನ ದಾಹ,
ಇವೆರಡರಿಂದಲೇ ಆಗುವುದು ಮುಕ್ತಿ ಪ್ರಾಪ್ತ,
ತಪ್ಪದ ಅದ್ಭುತ ಲೆಕ್ಕಾಚಾರ -ತಾರತಮ್ಯೋಕ್ತ.

ಸರ್ವೈರ್ಗುಣೈರ್ಬ್ರಹ್ಮಣಾ ತು ಸಮುಪಾಸ್ಯೋ ಹರಿಃ ಸದಾ ।
ಆನನ್ದೋ ಜ್ಞಃ ಸದಾತ್ಮೇತಿ ಹ್ಯುಪಾಸ್ಯೋ ಮಾನುಷೈರ್ಹರಿಃ ॥೧.೯೨॥

ಎಲ್ಲ ಜೀವರಿಗೂ ಭಗವಂತನ ಸರ್ವಗುಣೋಪಾಸನೆ ಅಸಾಧ್ಯ,
ಸರ್ವಗುಣಗಳ ಉಪಾಸಕನಾಗಿ ಚತುರ್ಮುಖನೊಬ್ಬ  ಬಾಧ್ಯ,
ಇನ್ನು ಮನುಷ್ಯರಿಂದ ಹೇಗೆ ಉಪಾಸಿಸಲ್ಪಡುವ ಅವ  ಸ್ವಾಮಿ?
ಹೀಗೆ -ಆನಂದ ಜ್ಞಾನ ಸ್ವರೂಪಿ ದೋಷದೂರ ಎಲ್ಲರ ಅಂತರ್ಯಾಮಿ,
ಬ್ರಹ್ಮದೇವನೊಬ್ಬನೇ ಗುಣೋಪಾಸನೆಯ ಮುಖ್ಯ ಅಧಿಕಾರಿ,

ಉಳಿದವರೆಲ್ಲ ತಾರತಮ್ಯೋಕ್ತ -ಮನುಷ್ಯ ಅಧಮ ಅಧಿಕಾರಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula