Saturday 25 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 72 - 75

ಕ್ಷಿತಿಪಾ ಮನುಷ್ಯಗನ್ಧರ್ವಾ ದೈವಾಶ್ಚ ಪಿತರಶ್ಚಿರಾಃ ।
ಆಜಾನಜಾಃ ಕರ್ಮಜಾಶ್ಚ ದೇವಾ ಇನ್ದ್ರಃ ಪುರನ್ದರಃ ॥೧.೭೨॥

ರುದ್ರಃ ಸರಸ್ವತೀ ವಾಯುರ್ಮುಕ್ತಾಃ ಶತಗುಣೋತ್ತರಾಃ ।
ಏಕೋ ಬ್ರಹ್ಮಾ ಚ ವಾಯುಶ್ಚ ವೀನ್ದ್ರೋ ರುದ್ರಸಮಸ್ತಥಾ ।
ಏಕೋ ರುದ್ರಸ್ತಥಾ ಶೇಷೋ ನ ಕಶ್ಚಿದ್ ವಾಯುನಾ ಸಮಃ ॥೧.೭೩॥

ಮುಕ್ತೇಷು ಶ್ರೀಸ್ತಥಾ ವಾಯೋಃ ಸಹಸ್ರಗುಣಿತಾ ಗುಣೈಃ ।
ತತೋsನನ್ತಗುಣೋ ವಿಷ್ಣುರ್ನ ಕಶ್ಚಿತ್ ತತ್ಸಮಃ ಸದಾ’ ॥೧.೭೪॥

ಹೇಳಿದೆಯಿಲ್ಲಿ ತಾರತಮ್ಯ ರೀತಿಯ ವಿವರಣೆ,
ಯೋಗ್ಯತಾನುಸಾರ ಸ್ಥಾನ ಮಾನಗಳ ವಿಶ್ಲೇಷಣೆ,
ಚಕ್ರವರ್ತಿಗಳು-ಮನುಷ್ಯ ಗಂಧರ್ವರು -ದೇವ ಗಂಧರ್ವರು,
ಚಿರಪಿತೃಗಳು-ಆಜಾನಜ ದೇವತೆಗಳು-ಕರ್ಮದಿಂದ ದೇವತೆಗಳಾದವರು,
ಇಂದ್ರ -ರುದ್ರ -ಸರಸ್ವತಿ - (ವಾಯು)ಮುಖ್ಯಪ್ರಾಣ,
ಇವರದು ಮುಕ್ತರಾದಮೇಲೂ ಇದೇ ತಾರತಮ್ಯದ ಗಣ,
ಶಾಸ್ತ್ರದಲ್ಲಿ ಏನೆಲ್ಲಾ ಹೇಳಿದೆ ಚತುರ್ಮುಖನ ಸ್ಥಾನ-ಗುಣ,
ಅವೆಲ್ಲವನ್ನೂ ಹೊಂದೇ ಹೊಂದುತ್ತಾನೆ ಅವ ಮುಖ್ಯಪ್ರಾಣ,
ಬ್ರಹ್ಮ-ಮುಖ್ಯಪ್ರಾಣರದು ಸ್ಥಾನ ಮಾನಗಳಲ್ಲಿ ಒಂದೇ ತ್ರಾಣ,
ಅಂತೆಯೇ ಕೆಳಗೆ ಬರುವ ಗರುಡ ರುದ್ರ ಶೇಷ,
ಒಂದೇ ಸ್ಥಾನ ಮಾನದ ದೇವತೆಗಳು ಎಂಬುದಿಲ್ಲಿ ವಿಶೇಷ,
ದೇವತಾಗಣದಲ್ಲಿ ಮುಖ್ಯಪ್ರಾಣನಿಗೆ ಯಾರಿಲ್ಲ ಸಮ,
ಮುಖ್ಯಪ್ರಾಣನಿಗಿಂತ ಸಾವಿರ ಪಟ್ಟು ಅಧಿಕಳು ರಮ,
ರಮೆಗಿಂತ ಅನಂತ ಪಟ್ಟು ಅಧಿಕ ಹರಿ-ಅವನಿಗೆಂದೂ ಯಾರಿಲ್ಲ ಸಮ.

ಇತ್ಯಾದಿ ವೇದವಾಕ್ಯಂ ವಿಷ್ಣೋರುತ್ಕರ್ಷಮೇವ ವಕ್ತ್ಯುಚ್ಚೈಃ ।
ತಾತ್ಪರ್ಯಂ ಮಹದತ್ರೇತ್ಯುಕ್ತಂ ‘ಯೋ ಮಾಮಿ’ತಿ ಸ್ವಯಂ ತೇನ ॥೧.೭೫॥

ಇವೇ ಮೊದಲಾದ ವೇದ ವಾಕ್ಯ,
ಹೇಳುತ್ತವೆ ನಾರಾಯಣನ ಆಧಿಕ್ಯ,
ಇದನ್ನೇ ಹೇಳುತ್ತದೆ ಮಹಾತಾತ್ಪರ್ಯ,

ಕೃಷ್ಣನೇ ಹೇಳಿದ-ತನಗಿಂತ ಅಧಿಕರಿಲ್ಲೆಂಬ ಆಂತರ್ಯ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula