Tuesday 21 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 36 -42

ವಿಷ್ಣ್ವಾಧಿಕ್ಯವಿರೋಧೀನಿ ಯಾನಿ ವೇದವಚಾಂಸ್ಯಪಿ ।
ತಾನಿ ಯೋಜ್ಯಾನ್ಯಾನುಕೂಲ್ಯಾದ್ ವಿಷ್ಣ್ವಾಧಿಕ್ಯಸ್ಯ ಸರ್ವಶಃ ॥೧.೩೬॥

ವೇದದಲ್ಲೇ ಕಾಣಿಸಿರಲಿ ವಿಷ್ಣು ಸರ್ವೋತ್ತಮತ್ವಕ್ಕೆ ವಿರೋಧ,
ಸಮೀಕರಿಸಿ ಅರ್ಥೈಸಬೇಕಾಗುತ್ತದೆ ವಿಷ್ಣು ಪರ ವಾದ,
ಯಾಗದಲ್ಲಿ ಹೇಳುವ "ವಿಷ್ಣು"ವಿನ ತಂದೆಗೆ ನಮಸ್ಕಾರ,
ಅದು ಯಜ್ಞಕರ್ತೃವಿನ ತಂದೆಗೆ ನಮನದ ಪುರಸ್ಕಾರ,
ಸರ್ವಜ್ಞ ಸರ್ವಶಕ್ತ ಸರ್ವವ್ಯಾಪ್ತ ವಿಷ್ಣುಗ್ಯಾವ ತಂದೆ?
ವೇದ ಶಾಸ್ತ್ರಗಳಲಿ ವೇದವೇದ್ಯ ವಿಷ್ಣುವೇ -ಮುಂದೆ!

ಅವತಾರೇಷು ಯತ್ ಕಿಞ್ಚಿದ್ ದರ್ಶಯೇನ್ನರವದ್ಧರಿಃ ।
ತಚ್ಚಾಸುರಾಣಾಂ ಮೋಹಾಯ ದೋಷಾ ವಿಷ್ಣೋರ್ನಹಿ ಕ್ವಚಿತ್ ॥೧.೩೭॥

ಅಜ್ಞತ್ವಂ ಪಾರವಶ್ಯಂ ವಾ ವೇಧಭೇದಾದಿಕಂ ತಥಾ
ತಥಾ ಪ್ರಾಕೃತದೇಹತ್ವಂ ದೇಹತ್ಯಾಗಾದಿಕಂ ತಥಾ ॥೧.೩೮॥

ಅನೀಶತ್ವಂ ಚ ದುಃಖಿತ್ವಂ ಸಾಮ್ಯಮನ್ಯೈಶ್ಚ ಹೀನತಾಮ್ ।
ಪ್ರದರ್ಶಯತಿ ಮೋಹಾಯ ದೈತ್ಯಾದೀನಾಂ ಹರಿಃ ಸ್ವಯಮ್ ॥೧.೩೯॥

ಪುರಾಣ ಮಹಾಭಾರತ ಗ್ರಂಥಗಳಲ್ಲಿ,
ಭಗವಂತನ ಅವತಾರದ ವಿವರಣೆಯಲ್ಲಿ,
ಕಾಣಿಸುವುದುಂಟು ಇದ್ದಂತೆ ಅಲ್ಲಲ್ಲಿ ದೋಷ,
ಪರಿಹಾರಕ್ಕೆ ಆಚಾರ್ಯರ ಉತ್ತರ -ವಿಶೇಷ.

ರಾಮ ಕೃಷ್ಣಾವತಾರದಲ್ಲಿ ಭಗವಂತ ಆಡುವ ಅನೇಕ ಆಟ,
ತೋರಿಸಿಕೊಳ್ಳುವ -ಅತಿ ಸಾಮಾನ್ಯ ಮನುಷ್ಯನಂತೆ  ನೋಟ,
ಅವೆಲ್ಲವೂ ಕೂಡಾ ದೈತ್ಯ ಮೋಹನಾರ್ಥ,
ಹರಿಗಿಲ್ಲ ಎಂದೂ ಎಲ್ಲೂ ದೋಷ -ಇತ್ಯರ್ಥ.

ಅಜ್ಞಾನಿಯಂತೆ ಕಾಣಿಸಿಕೊಳ್ಳುವ ನಟನೆ,
ತೋರಿಸುವ ಜನಸಾಮಾನ್ಯನಂತೆ ವರ್ತನೆ,
ತೋರಿದ- ಪ್ರಾಕೃತದೇಹಿಯಂತೆ ನೋವು ಅಸಹಾಯಕತೆ,
ಮನುಷ್ಯ ಅವತಾರವೆತ್ತಿದಾಗ ಮನುಷ್ಯನಂತೇ ಅವನ ನಡತೆ.

ಅವನಿಗೆಲ್ಲಿ ಗರ್ಭವಾಸ ನೋವು ಸೋಲು ದೇಹತ್ಯಾಗ?
ನಟಿಸಿ ತೋರಿಸಿದ ವಿರಹ ತಪ್ಪು ಅಸಾಮರ್ಥ್ಯ ಆಗಾಗ!
ಎಲ್ಲವೂ ಅಸುರರ ನಂಬಿಸಿ ದಾರಿತಪ್ಪಿಸುವುದಕ್ಕಾಗಿ,
ಅವನೆಂದೂ ಎಲ್ಲೂ ದೋಷಗಳಿರದ ಜ್ಞಾನಯೋಗಿ.

ನ ತಸ್ಯ ಕಶ್ಚಿದ್ ದೋಷೋsಸ್ತಿ ಪೂರ್ಣಾಖಿಲಗುಣೋ ಹ್ಯಸೌ ।
ಸರ್ವದೇಹಸ್ಥರೂಪೇಷು ಪ್ರಾದುರ್ಭಾವೇಷು ಚೇಶ್ವರಃ ॥೧.೪೦॥

ಶ್ರೀಹರಿಗೆ ಎಂದೂ ಯಾವ ದೋಷವೂ ಇಲ್ಲ,
ಗುಣಗಳದೇ ಗಡಣನವ ಅಪ್ರತಿಮ ಮಲ್ಲ,
ಎಲ್ಲ ದೇಹದೊಳಗಣ ಅಂತರ್ಯಾಮಿ ರೂಪ,
ತನ್ನಿತರ ಅವತಾರ ರೂಪಗಳಲ್ಲೂ ಭೇದವಿರದ ಭೂಪ.

ಸಾಕ್ಷಾತ್ ಶ್ರೀಕೃಷ್ಣ ಹೇಳಿದ ಗೀತೆಯ ವಾದ,
ನಾಯಿ,ನಾಯಿಮಾಂಸ ಭಕ್ಷಕ,ಪಂಡಿತನಲ್ಲಿರುವ ಅವನಿಗಿಲ್ಲ ಭೇದ,
ಅಂತರ್ಯಾಮಿಯಾಗಿ ಅವತಾರಿಯಾಗಿ ಎಲ್ಲೆಲ್ಲೂ ಇರುವ ಸ್ವಾಮಿ,
ಜೀವರ ಲೋಪ ದೋಷಗಳ ಲೇಪವಿರದ ಸರ್ವ ಸ್ವತಂತ್ರ ನೇಮಿ.

ಬ್ರಹ್ಮಾದ್ಯಭೇದಃ ಸಾಮ್ಯಂ ವಾ ಕುತಸ್ತಸ್ಯ ಮಹಾತ್ಮನಃ ।
ಯದೇವಂವಾಚಕಂ ಶಾಸ್ತ್ರಂ ತದ್ಧಿ ಶಾಸ್ತ್ರಂ ಪರಂ ಮತಮ್ ॥೧.೪೧॥

ನಿರ್ಣಯಾಯೈವ ಯತ್ ಪ್ರೋಕ್ತಂ ಬ್ರಹ್ಮಸೂತ್ರಂ ತು ವಿಷ್ಣುನಾ ।
ವ್ಯಾಸರೂಪೇಣ ತದ್ ಗ್ರಾಹ್ಯಂ ತತ್ರೋಕ್ತಾಃ ಸರ್ವನಿರ್ಣಯಾಃ ॥೧.೪೨॥

ಅವನಿಗಿಲ್ಲ ಬ್ರಹ್ಮಾದಿಗಳೊಂದಿಗೆ ಅಭೇದ ಸಾಮ್ಯ-ಸರ್ವತ್ರ,
ಅದನ್ನೇ ಸ್ಪಷ್ಟಪಡಿಸ ಹೊರಟಿದ್ದು ಅತಿ ಉತ್ಕೃಷ್ಟ ಬ್ರಹ್ಮಸೂತ್ರ,
ಎಲ್ಲಾ ಸಂಗತಿಗಳ ನಿರ್ಣಯದಲ್ಲಿ ಅದರದು ಬಹು ದೊಡ್ಡ ಪಾತ್ರ,

ವೇದವ್ಯಾಸರೇ ಕೊಟ್ಟ ಸರ್ವಮಾನ್ಯ ಪರವಿದ್ಯೆ ಪರಶಾಸ್ತ್ರ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula