Wednesday 15 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 21 - 25

ಸಾಮ್ಯಂ ನಚಾsಸ್ಯ ಪರಮಸ್ಯ ಚ ಕೇನ ಚಾsಪ್ಯಂ
ಮುಕ್ತೇನ ಚ ಕ್ವಚಿದತಸ್ತ್ವಭಿದಾ ಕುತೋsಸ್ಯ |
ಪ್ರಾಪ್ಯೇತ ಚೇತನಗಣೈಃ ಸತತಾಸ್ವತನ್ತ್ರೈ-
ರ್ನಿತ್ಯಸ್ವತನ್ತ್ರವಪುಷಃ ಪರಮಾತ್ ಪರಸ್ಯ ॥೧.೨೧॥

ಈ ನಾರಾಯಣಗೆ ಎಂದೂ ಯಾರಿಲ್ಲ ಸಮ,
ಮುಕ್ತ ಜೀವನೂ ಆಗಲ್ಲ ಆಗಲಾರೆಂದೂ ಸಮ,
ಹೀಗಿದ್ದ ಮೇಲೆ ಎಲ್ಲಿಯದು ಅಭೇದ?
ಯಾರೂ ಸಮಕ್ಕೇ ಬರಲಾಗದ-ಅಗಾಧ,
ಎಲ್ಲಾ ಜೀವರೂ ಸರ್ವದಾ ಅಸ್ವತಂತ್ರ,
ಭಗವಂತ ಮಾತ್ರ ಸರ್ವತಂತ್ರ ಸ್ವತಂತ್ರ,
ಭಗವಂತ ಗುಣಪೂರ್ಣ ನಿತ್ಯ ಸತ್ಯ,
ಜೀವನೂ ನಿತ್ಯ-ಅಸ್ವತಂತ್ರ-ಗುಣಸೀಮಿತ.


ಅರ್ಥೋsಯಮೇವ ನಿಖಿಲೈರಪಿ ವೇದವಾಕ್ಯೈ
ರಾಮಾಯಣೈಃ ಸಹಿತಭಾರತಪಞ್ಚರಾತ್ರೈಃ |
ಅನ್ಯೈಶ್ಚ ಶಾಸ್ತ್ರವಚನೈಃ ಸಹತತ್ತ್ವಸೂತ್ರೈ_
ರ್ನಿರ್ಣೀಯತೇ ಸಹೃದಯಂ ಹರಿಣಾ ಸದೈವ ॥೧.೨೨॥

ಇದು ರಾಮಾಯಣ ಭಾರತ ಪಂಚರಾತ್ರಗಳಲಿ ಉಕ್ತ,
ಅನೇಕ ಶಾಸ್ತ್ರ ಬ್ರಹ್ಮಸೂತ್ರಾದಿಗಳಲೂ ವ್ಯಕ್ತ,
ಇದು ಪರಮಾತ್ಮನಿಂದ ನಿಶ್ಚಿತವಾದ ಪ್ರತಿಪಾದನೆ,
ಅನಾದಿಯಾದ ಅನಂತವಾದ ಅನಂತನ ವರ್ಣನೆ.


ನಾರಾಯಣಸ್ಯ ನ ಸಮಃ’‘ಪುರುಷೋತ್ತಮೋsಹಂ
ಜೀವಾಕ್ಷರೇ ಹ್ಯತಿಗತೋsಸ್ಮಿ’‘ತತೋsನ್ಯದಾರ್ತಮ್’ |
ಮುಕ್ತೋಪಸೃಪ್ಯ’  ‘ಇಹ ನಾಸ್ತಿ ಕುತಶ್ಚ ಕಶ್ಚಿತ್’
ನಾನೇವ ಧರ್ಮಪೃಥಗಾತ್ಮದೃಗೇತ್ಯಧೋ ಹಿ’ ॥೧.೨೩॥

ನಾರಾಯಣನಿಗೆ ಎಂದೂ ಯಾರೂ ಇಲ್ಲ ಸಮ,
ನಾಶವಿರದ ಲಕ್ಷ್ಮಿ ನಾಶವಾಗೋ ಬ್ರಹ್ಮಾದಿಗಳಿಗೂ ಉತ್ತಮ,
ಅವನಿಗಿಂತ ವಿಲಕ್ಷಣವಾದ ಪ್ರಪಂಚವೆಲ್ಲ ದುಃಖಪೀಡಿತ,
ಅವನು ಮಾತ್ರ ಇದ್ಯಾವುದರ ಲೇಪವಿರದ ಆನಂದಾವೃತ,
ಅರ್ಹವಾದ ಮುಕ್ತಿ ಪಾಲಿಸುವ ನಿಯಮದಾತ,
ತನ್ನ್ಯಾವ ರೂಪ ಅವತಾರಗಳಲ್ಲೂ ಭೇದವಿರದಾತ,
ಇದನ್ನೇ ಸಾರುತ್ತಿವೆ ಸಕಲ ವೇದ ಶೃತಿ,
ಭೇದ ಕಾಣುವವರಿಗೆ ಖಚಿತ ಅಧೋಗತಿ.

ಆಭಾಸ ಏವ’ ‘ಪೃಥಗೀಶತ ಏಷ ಜೀವೋ’
ಮುಕ್ತಸ್ಯ ನಾಸ್ತಿ ಜಗತೋ ವಿಷಯೇ ತು ಶಕ್ತಿಃ’ ।
ಮಾತ್ರಾಪರೋsಸಿ ನತು ತೇsಶ್ನುವತೇ ಮಹಿತ್ವಮ್’
ಷಾಡ್ಗುಣ್ಯವಿಗ್ರಹ’ ‘ಸುಪೂರ್ಣಗುಣೈಕದೇಹಃ’ ॥೧.೨೪॥

ಅನುಮಾನವಿಲ್ಲ ಜೀವನು ಭಗವಂತನ ಪ್ರತಿಬಿಂಬ,
ಅವನಿಂದ ಅತ್ಯಂತ ಭಿನ್ನ-ಅವಲಂಬಿತನಾದ ಕಂಬ,
ಮುಕ್ತರಿಗೆ ಜಗದ್ವ್ಯಾಪಾರ ವರ್ಜ್ಯ ಅಮುಕ್ತರಿಗವನೀವ ಶಕ್ತಿ,
ದೇವರು ನಮ್ಮ ಮೈ-ಮನಗಳಿಂದ ಮುಟ್ಟಲಾಗದ ಶಕ್ತಿ,
ಅವನು ಗುಣಗಳ ಗಡಣ-ಗುಣವೇ ಮೈಹೂರಣ,
ಆರು ವಿಗ್ರಹ ಮೈವೆತ್ತ-ಅನಾದಿ ಅನಂತ ಪರಿಪೂರ್ಣ

ಮಾಹಾತ್ಮ್ಯದೇಹ’ ‘ಸೃತಿಮುಕ್ತಿಗತೇ’ ‘ಶಿವಶ್ಚ
ಬ್ರಹ್ಮಾ ಚ ತದ್ ಗುಣಗತೌ ನ ಕಥಞ್ಚನೇಶೌ’ ।
ನ ಶ್ರೀಃ ಕುತಸ್ತದಪರೇ’ ‘sಸ್ಯ ಸುಖಸ್ಯ ಮಾತ್ರಾ-
ಮಶ್ನನ್ತಿ ಮುಕ್ತಸುಗಣಾಶ್ಚಶತಾವರೇಣ’ ॥೧.೨೫॥

ಮಹಾತ್ಮ್ಯವೇ ಶರೀರವಾದ ಭಗವಂತನದ್ದು ಮಾಹಾತ್ಮ್ಯದೇಹ,
ಸಂಸಾರ ಮುಕ್ತಿಗಳೆರಡರಲ್ಲೂ ಆ ದೇವರೇ ಗತಿಯೆಂಬ ಭಾವ,
ಎರಡೂ ಕಡೆಗೂ ಅವನೇ ಜ್ಞಾನ ಆನಂದ ದಾತ,
ಸಂಸಾರದ ಕಷ್ಟ ನಷ್ಟ ಕೊಡುವ ಕರ್ಮಕ್ಕನುಗುಣವಾಗಿ ಆತ,
ಜೀವದೋಗ್ಯತಾನುಸಾರ ಅರ್ಹತೆ-ತಾರತಮ್ಯೋಕ್ತ,
ಸಲ್ಲುವುದನೇ ಸಲ್ಲಿಸುವ ನಿಷ್ಪಕ್ಷಪಾತಿ ನ್ಯಾಯಾಧೀಶನಾತ,
ಬ್ರಹ್ಮ ರುದ್ರಾದಿಗಳೂ ಪೂರ್ಣತಿಳಿಯದ ತ್ರಿಗುಣಾತೀತ,
ಸ್ಪಷ್ಟ ಭೇದವ ಸಿದ್ಧಪಡಿಸುವ ಅಧಿಕ ಗುಣಗಳು ಉಳ್ಳಾತ,
ಲಕ್ಷ್ಮೀ ಬ್ರಹ್ಮ ರುದ್ರಾದಿಗಳೇ ಅವನ ಗುಣಗಳಿಗಿಂತ ನ್ಯೂನ,
ಹೀಗಿರುವಾಗ ಅತಿ ಕೆಳಗಲ್ಲವೇ ಜೀವರ ಸ್ಥಾನ ಮಾನ,
ಲಕ್ಷ್ಮಿಯಾದಿಯಾಗಿ ದೇವತೆಗಳಲ್ಲೇ ಇದೆ ತಾರತಮ್ಯೋಕ್ತ ನ್ಯೂನತೆ,

ಅಂತೆಯೇ ಮುಕ್ತಜೀವರಿಗೂ ಸ್ವರೂಪಯೋಗ್ಯತಾನುಸಾರ ಮಾನ್ಯತೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula