Tuesday 21 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 30 - 35

ಋಗಾದಯಶ್ಚ ಚತ್ವಾರಃ ಪಞ್ಚರಾತ್ರಂ ಚ ಭಾರತಮ್ ।
ಮೂಲರಾಮಾಯಣಂ  ಬ್ರಹ್ಮಸೂತ್ರಂ ಮಾನಂ ಸ್ವತಃ ಸ್ಮೃತಮ್ ॥೧.೩೦ ॥

ಅವಿರುದ್ಧಂ ಚ ಯತ್ತ್ವಸ್ಯ ಪ್ರಮಾಣಂ ತಚ್ಚ ನಾನ್ಯಥಾ ।
ಏತದ್ವಿರುದ್ಧಂ ಯತ್ತು ಸ್ಯಾನ್ನ ತನ್ಮಾನಂ ಕಥಞ್ಚನ ॥೧.೩೧॥

ಋಗ್ವೇದ ಮೊದಲಾದ ನಾಕು ವೇದ,
ಪಂಚರಾತ್ರ ಮಹಾಭಾರತದ ನಾದ,
ಹಯಗ್ರೀವ ಬರೆದ ಮೂಲ ರಾಮಾಯಣ,
ಬ್ರಹ್ಮಸೂತ್ರಗಳು ಇವೆಲ್ಲಾ ಸ್ವತಃಪ್ರಮಾಣ.

ಸ್ವತಃಪ್ರಮಾಣಕ್ಕೆ ಬೇಕಿಲ್ಲ ಇನ್ನೊಂದು ಪ್ರಮಾಣ,
ಅನುಭವದಿಂದ ಪ್ರಮಾಣೀಕರಿಸುವ ತತ್ವದ್ಹೂರಣ,
ಈ ಸ್ವತಃಪ್ರಮಾಣ ಆಧರಿಸಿ ಬರುವುದು -ಪರತಪ್ರಮಾಣ,
ಋಷಿ ಮುನಿಗಳಿಗೆ ಅನುಭವವಾದ ಸ್ಫುರಣ-ಸ್ವತಃಪ್ರಮಾಣ,
ತರ್ಕ ದೂರಿಟ್ಟ -ಸ್ವಾನುಭವದ ಕಿರಣ -ಸ್ವತಃಪ್ರಮಾಣ,
ಸ್ವತಃಪ್ರಮಾಣವ ಅನುಸರಿಸಿ ಪ್ರಮಾಣಿಸುವ  ಪರತಪ್ರಮಾಣ,
ಮೇಲಿನದ್ದಕ್ಕೆ ವಿರೋಧವಾಗದ ಎಲ್ಲವೂ ಪ್ರಮಾಣ,
ಮೇಲಿನದ್ದಕ್ಕೆ ಯಾವುದು ವಿರೋಧವೋ ಅದಲ್ಲ- ಪ್ರಮಾಣ.




ವೈಷ್ಣವಾನಿ ಪುರಾಣಾನಿ ಪಞ್ಚರಾತ್ರಾತ್ಮಕತ್ವತಃ ।
ಪ್ರಮಾಣಾನ್ಯೇವ ಮನ್ವಾದ್ಯಾಃ ಸ್ಮೃತಯೋsಪ್ಯನುಕೂಲತಃ ॥೧.೩೨॥

ಎಲ್ಲ ಪುರಾಣ ಇತಿಹಾಸ ಪಂಚರಾತ್ರ,
ನಾರಾಯಣನನ್ನೇ ಪ್ರತಿಪಾದಿಸುತ್ತವೆ ಸರ್ವತ್ರ,
ಮನು -ಯಾಜ್ಞವಲ್ಕ್ಯಇತ್ಯಾದಿ ಸ್ಮೃತಿ ಗ್ರಂಥಗಳು,
ಆಯಾ ಕಾಲಕ್ಕನುಗುಣವಾಗಿ ನಿರ್ಮಿತ ಕಾನೂನುಗಳು,
ಈ ತರಹದ ಕಾಲ -ಕಾಲಗಳಲ್ಲಾದ ಗ್ರಂಥ ಸ್ಮೃತಿ,
ವೇದಕ್ಕೆ ವಿರುದ್ಧವಾಗಿರದಿದ್ದಲ್ಲಿ ಇದ್ದೇ ಇದೆ ಸಮ್ಮತಿ.


ಏತೇಷು ವಿಷ್ಣೋರಾಧಿಕ್ಯಮುಚ್ಯತೇsನ್ಯಸ್ಯ ನ ಕ್ವಚಿತ್ ।
ಅತಸ್ತದೇವ ಮನ್ತವ್ಯಂ ನಾನ್ಯಥಾ ತು ಕಥಞ್ಚನ ॥೧.೩೩॥

ಈ ಎಲ್ಲಾ ಗ್ರಂಥಗಳಲ್ಲಿರುವುದು ಹರಿಸರ್ವೋತ್ತಮತ್ವ,
ಅನ್ಯ ದೇವತೆಗಳಿಗಿರದ -ವೇದ ಪ್ರಮಾಣಿಸುವ ನಾರಾಯಣ ತತ್ವ,
ವೇದವದು ಅಪೌರುಷೇಯ -ಪರೀಕ್ಷೆ ಸರ್ವಥಾ ಸಲ್ಲದು,
ಮನಸ್ಸದು ಪೌರುಷೇಯ - ಸೀಮಿತ ತರ್ಕಕ್ಕೆ ಎಟುಕದು.

"ಮೋಹಾರ್ಥಾನ್ಯನ್ಯಶಾಸ್ತ್ರಾಣಿ ಕೃತಾನ್ಯೇವಾsಜ್ಞಯಾ ಹರೇಃ ।
ಅತಸ್ತೇಷೂಕ್ತಮಗ್ರಾಹ್ಯಮಸುರಾಣಾಂ ತಮೋಗತೇಃ ॥೧.೩೪॥

ಯಸ್ಮಾತ್ ಕೃತಾನಿ ತಾನೀಹ ವಿಷ್ಣುನೋಕ್ತೈಃ ಶಿವಾದಿಭಿಃ ।
ಏಷಾಂ ಯನ್ನ ವಿರೋಧಿ ಸ್ಯಾತ್ ತತ್ರೋಕ್ತಂ ತನ್ನ ವಾರ್ಯತೇ ॥೧.೩೫॥

ಹರಿಯಾಜ್ಞೆಯಿಂದಲೇ ನಿರ್ಮಿತ ಅಸುರಮೋಹನಾರ್ಥ,
ತಮಸ್ಸಿಗೇ ದಾರಿ ತೋರುವ ಶಿವಾದಿರಚಿತ  ಗ್ರಂಥ,
ಮೇಲ್ನೋಟಕ್ಕೆ ಕಂಡೀತು ವಿಷ್ಣು ವಿರೋಧ,
ತಮೋಯೋಗ್ಯರಿಗೇ ರುಚಿಸಲಿಕ್ಕದು ಅಗಾಧ,
ಅಲ್ಲಿ ಹೇಳುವುದೆಲ್ಲ ಅಲ್ಲ ನೇರ ಗ್ರಾಹ್ಯ,

ವೇದವನ್ನು ಸಮೀಕರಿಸಿಕೊಳ್ಳುವುದೇ ಸಹ್ಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula