Wednesday 15 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 6 - 10

ಇತ್ಥಂ ವಿಚಿಂತ್ಯ ಪರಮಃ ಸ ತು ವಾಸುದೇವ-
ನಾಮಾ ಬಭೂವ ನಿಜಮುಕ್ತಿಪದಪ್ರದಾತಾ |
ತಸ್ಯಾsಜ್ಞಯೈವ ನಿಯತಾsಥ ರಮಾsಪಿ ರೂಪಂ
ಬಭ್ರೇ ದ್ವಿತೀಯಮಪಿ ಯತ್ ಪ್ರವದಂತಿ ಮಾಯಾಮ್ ||೧.೬||

ಈ ರೀತಿಯ ಚಿಂತನೆಯಿಂದ ನಾರಾಯಣನಾದ ವಾಸುದೇವ,
ಆ ನಾಮದಿಂದ ತನ್ನವರಿಗೆ ಮುಕುತಿ ದಯಪಾಲಿಸುವ ಮಹಾದೇವ,
ಅವನಾಜ್ಞೆಯಿಂದ ಲಕ್ಷ್ಮಿಯಾದಳು ಮಾಯಾ,
ಪ್ರಕೃತಿ ಪುರುಷರಾದರು ವಾಸುದೇವ-ಮಾಯ.


ಸಙ್ಕರ್ಷಣಶ್ಚ ಸ ಬಭೂವ ಪುನಃ ಸುನಿತ್ಯಃ
ಸಂಹಾರಕಾರಣವಪುಸ್ತದನುಜ್ಞಯೈವ |
ದೇವೀ ಜಯೇತ್ಯನು ಬಭೂವ ಸ ಸೃಷ್ಟಿಹೇತೋಃ
ಪ್ರದ್ಯುಮ್ನತಾಮುಪಗತಃ ಕೃತಿತಾಂ ಚ ದೇವೀ ||೧.೭||

ಜಗತ್ಪಾಲನೆಗಾಗಿ ನಾರಾಯಣನಾದ ಅನಿರುದ್ಧ,
ಮಾತೆ ಲಕ್ಷ್ಮೀದೇವಿ ಶಾಂತಿ ಎಂಬ ಹೆಸರಿಂದ ಸಿದ್ಧ,
ಇದು ಅವರೇ ಸೃಷ್ಟಿಸಿಕೊಂಡ ಚತುರ್ವ್ಯೂಹ,
ಭಕ್ತರುದ್ಧಾರಕೆ ಸೃಷ್ಟಿಕಾರ್ಯದ ವ್ಯಾಮೋಹ,
ಎಣೆಯಿರದ ಶಕ್ತಿಯಿರುವ ಈ ನಾರಾಯಣ,
ಮಾಡಿದ ಈ ಮೂರ್ತಿಗಳ ಸಾವಿರ ವರ್ಷ ಧಾರಣ,
ಪ್ರದ್ಯುಮ್ನ ರೂಪಿಯಾದ ಭಗವಂತ,
ತನ್ನೊಳಿಹ ಜೀವರ ಅನಿರುದ್ಧಗೆ ಇತ್ತ.


ಸ್ಥಿತ್ಯೈ ಪುನಃ ಸ ಭಗವಾನನಿರುದ್ಧನಾಮಾ
ದೇವೀ ಚ ಶಾನ್ತಿರಭವಚ್ಛರದಾಂ ಸಹಸ್ರಮ್ |
ಸ್ಥಿತ್ವಾ ಸ್ವಮೂರ್ತಿಭಿರಮೂಭಿರಚಿನ್ತ್ಯಶಕ್ತಿಃ
ಪ್ರದ್ಯುಮ್ನರೂಪಕ ಇಮಾಂಶ್ಚರಮಾತ್ಮನೇsದಾತ್ ||೧.೮||

ಈ ಅನಿರುದ್ಧ ನಾಮಕ ಸ್ವಾಮಿ,
ತನ್ನೊಳಗೆ ಜೀವರ ಹೊತ್ತ ಪ್ರೇಮಿ,
ಆಯಿತು ಬ್ರಹ್ಮ ಪ್ರಾಣ ಶೇಷ ಗರುಡ ರುದ್ರರ ಸೂಕ್ಷ್ಮ ಸೃಷ್ಟಿ,
ನಿರ್ಮಾಣವಾಗಲಿಲ್ಲ  ಇನ್ನೂ ಸ್ಥೂಲ ದೇಹಗಳು ಸಮಷ್ಟಿ.


ನಿರ್ದೇಹಕಾನ್ ಸ ಭಗವಾನನಿರುದ್ಧನಾಮಾ
ಜೀವಾನ್ ಸ್ವಕರ್ಮಸಹಿತಾನುದರೇ ನಿವೇಶ್ಯ |
ಚಕ್ರೇsಥ ದೇಹಸಹಿತಾನ್ ಕ್ರಮಶಃ ಸ್ವಯಮ್ಭು-
ಪ್ರಾಣಾತ್ಮಶೇಷಗರುಡೇಶಮುಖಾನ್ ಸಮಗ್ರಾನ್ ||೧.೯||

ನಾರಾಯಣ-ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧ ಐದು ರೂಪ,
ಮತ್ತೆ ಪರಮಾತ್ಮನ ಕೇಶವಾದಿ ಹನ್ನೆರಡು ರೂಪ,
ಮತ್ತೆ ಹತ್ತವತಾರ ತಾಳಿದ ಎಣೆಯಿರದ ಭೂಪ .


ಪಞ್ಚಾತ್ಮಕಃ ಸ ಭಗವಾನ್ ದ್ವಿಷಡಾತ್ಮಕೋsಭೂತ್
ಪಞ್ಚದ್ವಯೀ ಶತಸಹಸ್ರಪರೋsಮಿತಶ್ಚ |
ಏಕಃ ಸಮೋsಪ್ಯಖಿಲದೋಷಸಮುಜ್ಝಿತೋsಪಿ
ಸರ್ವತ್ರ ಪೂರ್ಣಗುಣಕೋsಪಿ ಬಹೂಪಮೋsಭೂತ್ ||೧.೧೦ ||

ವಿಶ್ವ ಮೊದಲಾದ ರೂಪಗಳವನವು ಅನೇಕ,
ಅವನೆಲ್ಲಾ ರೂಪಗಳಲ್ಲೂ ಗುಣತಃ ಅವ ಏಕ,
ದೋಷದೂರನಾದ ಗುಣಗಳ  ಮಹಾಸಾಗರ,
ಅನೇಕ ರೂಪಗಳಲ್ಲಿದ್ದರೂ ಏಕನಾಗಿರುವ ವ್ಯಾಪಾರ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula