Friday 24 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 56 -60

ಉಕ್ತಂ ಪಾದ್ಮಪುರಾಣೇ ಚ ಶೈವ ಏವ ಶಿವೇನ ತು ।
ಯದುಕ್ತಂ ಹರಿಣಾ ಪೂರ್ವಮುಮಾಯೈ ಪ್ರಾಹ ತದ್ಧರಃ ॥೧.೫೬॥

  ‘ತ್ವಾಮಾರಾಧ್ಯ ತಥಾ ಶಮ್ಭೋ ಗ್ರಹೀಷ್ಯಾಮಿ ವರಂ ಸದಾ ।
ದ್ವಾಪರಾದೌ ಯುಗೇ ಭೂತ್ವಾ ಕಲಯಾ ಮಾನುಷಾದಿಷು ॥೧.೫೭॥

ಸ್ವಾಗಮೈಃ ಕಲ್ಪಿತೈಸ್ತ್ವಂ ಚ ಜನಾನ್ ಮದ್ವಿಮುಖಾನ್ ಕುರು ।
ಮಾಂ ಚ ಗೋಪಾಯ ಯೇನ ಸ್ಯಾತ್ ಸೃಷ್ಟಿರೇಷೋತ್ತರಾಧರಾ’ ॥೧.೫೮॥

ಸದಾಶಿವನನ್ನು ಪ್ರತಿಪಾದಿಸುವುದು ಪದ್ಮ ಪುರಾಣ,
ಶಿವ ಉಪದೇಶಿಸುತ್ತಾನೆ ಸತಿಗೆ-ಸರ್ವೋತ್ತಮ ನಾರಾಯಣ,
ನಾರಾಯಣ ಹೇಳುತ್ತಾನೆ ರುದ್ರನಿಗೆ ಹೀಗೆ,
ತೋರುವೆ ದ್ವಾಪರದಲ್ಲಿ ನಿನ್ನಿಂದ ವರ ಪಡೆದ ಹಾಗೆ,
ಅಯೋಗ್ಯರಿಗೆ ದಾರಿತಪ್ಪಿಸಿ ವಿಮುಖರನ್ನಾಗಿ ಮಾಡು,
ತಮೋಯೋಗ್ಯರು ಹಿಡಿಯಲಿ ತಮಸ್ಸಿನ ಜಾಡು,
ಇದು ಉಮಾ ಮಹೇಶ್ವರರ ಪ್ರಿಯ ಸಂವಾದ,
ಪದ್ಮ ಪುರಾಣ ತೆರೆದಿಟ್ಟ -ವಿಷ್ಣು ಪಾರಮ್ಯ ವಾದ.

ನಚ ವೈಷ್ಣವಶಾಸ್ತ್ರೇಷು ವೇದೇಷ್ವಪಿ ಹರೇಃ ಪರಃ ।
ಕ್ವಚಿದುಕ್ತೋsನ್ಯಶಾಸ್ತ್ರೇಷು ಪರಮೋ ವಿಷ್ಣುರೀರಿತಃ ॥೧.೫೯॥
ವೈಷ್ಣವ ಪುರಾಣ ಪಂಚರಾತ್ರ,
ಇರಲಿ ಚಾರ್ವಾಕ,ಬ್ರಹ್ಮ ,ಶಿವಶಾಸ್ತ್ರ,
ಶಕ್ತಿ ಉಪಾಸನೆಯ ಶಾಕ್ತ ಶಾಸ್ತ್ರ,
ನಾರಾಯಣನೇ ಸರ್ವೋತ್ತಮ ಸರ್ವತ್ರ .

ನಿರ್ದೋಷತ್ವಾಚ್ಚ ವೇದಾನಾಂ ವೇದೋಕ್ತಂ ಗ್ರಾಹ್ಯಮೇವ ಹಿ ।
ವೇದೇಷು ಚ ಪರೋ ವಿಷ್ಣುಃ ಸರ್ವಸ್ಮಾದುಚ್ಯತೇ ಸದಾ ॥೧.೬೦॥

ವೇದಗಳಲ್ಲಿದೆ ನಿರ್ದುಷ್ಟವಾದ ಪ್ರಮೇಯ,
ದೋಷವಿರುವುದಿಲ್ಲ ಅಲ್ಲಿ ಅದು ಅಪೌರುಷೇಯ,

ಎಲ್ಲೆಲ್ಲಿಯೂ ನಿರ್ಧರಿತ-ಸರ್ವೋತ್ತಮ ಅಪ್ರಮೇಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula