Wednesday 22 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 48 51

ಏಷ ಮೋಹಂ ಸೃಜಾಮ್ಯಾಶು ಯೋ ಜನಾನ್ ಮೋಹಯಿಷ್ಯತಿ ।
ತ್ವಂ ಚ ರುದ್ರ ಮಹಾಬಾಹೋ ಮೋಹಶಾಸ್ತ್ರಾಣಿಕಾರಯ ॥೧.೪೮॥

ಅತಥ್ಯಾನಿ ವಿತಥ್ಯಾನಿ ದರ್ಶಯಸ್ವ ಮಹಾಭುಜ ।
ಪ್ರಕಾಶಂ ಕುರು ಚಾsತ್ಮಾನಮಪ್ರಕಾಶಂ ಚ ಮಾಂ ಕುರು’ ॥೧.೪೯॥

ಇತಿ ವಾರಾಹವಚನಂ ಬ್ರಹ್ಮಾಣ್ಡೋಕ್ತಂ ತಥಾsಪರಮ್ ।
ಅಮೋಹಾಯ ಗುಣಾ ವಿಷ್ಣೋರಾಕಾರಶ್ಚಿಚ್ಛರೀರತಾ ॥೧.೫೦॥
ನಿರ್ದೋಷತ್ವಂ ತಾರತಮ್ಯಂ ಮುಕ್ತಾನಾಮಪಿ ಚೋಚ್ಯತೇ ।
ಏತದ್ವಿರುದ್ಧಂ ಯತ್ ಸರ್ವಂ ತನ್ಮೋಹಾಯೇತಿ ನಿರ್ಣಯಃ’ ॥೧.೫೧॥

ಅಯೋಗ್ಯ ಜನರಿಗೆ ಮೋಹ ಸೃಷ್ಟಿಸುವ ಉದ್ದೇಶ,
ತಾತ (ಹರಿ) ನಿಂದ ಮೊಮ್ಮಗಗೆ (ಶಿವ) ಆದೇಶ,
ನಾನು ಮಾಡುತ್ತೇನೆ ಮೋಹಶಾಸ್ತ್ರದ ರಚನೆ,
ನೀನೂ ಮಾಡಿ ಮಾಡಿಸು ಅಂಥದೇ ಪ್ರತಿಪಾದನೆ.

(ಹರಿಯಿಚ್ಛೆಯಂತೆ ಸದಾಶಿವನ ಪ್ರೇರಣೆಯಿಂದ ಪಾಶುಪತಾಗಮನ -ರುದ್ರ ಶಿಷ್ಯ ದಧೀಚಿ ವಾಮದೇವರಿಂದ ಮೋಹ ಶಾಸ್ತ್ರ ಪ್ರಸರಣ)

ಮಹಾಭುಜ ,ನಿಜ ನುಡಿಯದೇ-ಸುಳ್ಳು ದಾರಿಯ ತೋರು,
ನೀನೇ(ಶಿವನೇ)ಸರ್ವೋತ್ತಮನೆಂದು ಇಲ್ಲದ ಗುಣಗಳ ಬೀರು,
ನಿನ್ನನ್ನು ಮೆರೆಸಿಕೊಂಡು ನನ್ನನ್ನು(ವಿಷ್ಣು)ಮರೆಸು,
ವಿಷ್ಣು ನಿರ್ಗುಣನೆಂದು ಗುಣಪೂರ್ಣನಲ್ಲೆಂದು ಸುಳ್ಳ ಮಳೆ ಸುರಿಸು.

ಈ ತರಹದ ಸಂದೇಶ ವರಾಹ ಪುರಾಣದಲ್ಲಿ ಲಭ್ಯ,
ಪದ್ಮಪುರಾಣದ ಉತ್ತರಖಂಡ ಶ್ಲೋಕದಲ್ಲಿ ಶಿವನೇ "ಸಭ್ಯ",
ವಿಷ್ಣುವಿನ ವಿಶೇಷ ಗುಣ ಅದ್ಭುತ ಆಕಾರ,
ಚಿನ್ಮಯ ಶರೀರನೆಂದು ಬ್ರಹ್ಮಾಂಡಪುರಾಣದಲ್ಲಿ ಸಾಕಾರ.

ನಾರಾಯಣ ರೂಪವಂತ ಗುಣವಂತ,
ದೋಷದೂರ ಜ್ಞಾನವೇ ಮೈವೆತ್ತಾತ,
ತಾರತಮ್ಯವದು ಉಂಟು ಮುಕ್ತರಲ್ಲಿ,
ಇದೆಲ್ಲ ಹೇಳಿದೆ ಬ್ರಹ್ಮಾಂಡ ಪುರಾಣದಲ್ಲಿ,
ಪ್ರಬಲವಾಗಿ ಕಾಣುವ ಸ್ಪಷ್ಟ ಯಥಾರ್ಥ ಜ್ಞಾನ,

ವಿರುದ್ಧ ಹೇಳುವ ಅಂಶವೆಲ್ಲವೂ ಅನ್ಯಥಾಜ್ಞಾನ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula