Thursday, 1 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 107 - 112

ಷಣ್ಣಾಂ ಚ ಮದ್ಧ್ಯಗಮುದೀರ್ಣ್ಣಭುಜಂ ವಿಶಾಲವಕ್ಷಸ್ಥಲಂ ಬಹಳಪೌರುಷಲಕ್ಷಣಂ ಚ ।

ದೃಷ್ಟ್ವೈವ ಮಾರುತಿಮಸಾವುಪಲಪ್ಸ್ಯತೀಹ ಕೃಷ್ಣಾಮಿತಿ ಸ್ಮ ಚ ವಚಃ ಪ್ರವದನ್ತಿ ವಿಪ್ರಾಃ ॥೧೯.೧೦೭॥

ಆರುಜನರ ಮಧ್ಯ ಎದ್ದು ಕಾಣುತ್ತಿದ್ದ ಭೀಮಸೇನ ,

ಉಬ್ಬಿದ ತೋಳು ಅಗಲಎದೆ -ಎಲ್ಲ ಪೌರುಷ ಲಕ್ಷಣ .

ಇವನ ಕಂಡ ಬ್ರಾಹ್ಮಣರ ಮಾತು ,

ದ್ರೌಪದಿಯಾಗುವಳು ಇವನ ಸ್ವತ್ತು .

 

ರಾತ್ರೌ ದಿವಾ ಚ ಸತತಂ ಪಥಿ ಗಚ್ಛಮಾನಾಃ ಪ್ರಾಪುಃ ಕದಾಚಿದಥ ವಿಷ್ಣುಪದೀಂ ನಿಶಾಯಾಮ್ ।

ಸರ್ವಸ್ಯ ರಕ್ಷಿತುಮಗಾದಿಹ ಪೃಷ್ಠತಸ್ತು ಭೀಮೋsಗ್ರ ಏವ ಶತಮನ್ಯುಸುತೋsನ್ತರಾsನ್ಯೇ ॥೧೯.೧೦೮॥

ರಾತ್ರಿ ಹಗಲು ನಿರಂತರ ನಡೆಯುತ್ತಿದ್ದ ಪಾಂಡವರು,

ಒಂದಿನ ರಾತ್ರಿ ಹೊತ್ತಿಗೆ ಗಂಗಾತೀರವ ತಲುಪಿದರು .

ಎಲ್ಲರ ಹಿಂದುಗಡೆ ಭೀಮಸೇನನ ಕಾವಲಿದ್ದರೆ ,

ಮಧ್ಯ ಉಳಿದವರ ಮುಂದೆ ಅರ್ಜುನನ ಪಹರೆ .

 

ಪ್ರಾಪ್ತೇ ತದೋಲ್ಮುಕಧರೇsರ್ಜ್ಜುನ ಏವ ಗಙ್ಗಾಂ ಗನ್ಧರ್ವರಾಜ ಇಹ ಚಿತ್ರರಥೋsರ್ದ್ಧರಾತ್ರೇ

ದೃಷ್ಟ್ವೈವ ವಿಪ್ರರಹಿತಾನುದಕಾನ್ತರಸ್ಥಃ ಕ್ಷತ್ರಾತ್ಮಜಾ ಇತಿ ಹ ಧರ್ಷಯಿತುಂ ಸ ಚಾsಗಾತ್ ॥೧೯.೧೦೯॥

ಪಂಜನ್ನು ಹಿಡಿದು ಅರ್ಜುನ ಮುಂದೆ ಸಾಗುತ್ತಿದ್ದ ,

ಆ ನದಿ ನೀರಲ್ಲಿ ಚಿತ್ರರಥನೆಂಬ ಗಂಧರ್ವ ತಾನಿದ್ದ .

ಕ್ಢತ್ರಿಯರಿವರು ಎಂದರಿತು ಆಕ್ರಮಣಕ್ಕೆ ಮುಂದಾದ .

 

ಹನ್ತಾsಸ್ಮಿ ವೋ ಹ್ಯುಪಗತಾನುದಕಾನ್ತಮಸ್ಯಾ ನದ್ಯಾಶ್ಚ ಮರ್ತ್ತ್ಯಚರಣಾಯ ನಿಷಿದ್ಧಕಾಲೇ ।

ಇತ್ಥಂ ವದನ್ತಮಮುಮಾಹ ಸುರೇನ್ದ್ರಸೂನುರ್ಗ್ಗನ್ಧರ್ವ ನಾಸ್ತ್ರವಿದುಷಾಂ ಭಯಮಸ್ತಿ ತೇsದ್ಯ ॥೧೯.೧೧೦॥

ಮನುಷ್ಯರು ಓಡಾಡಬಾರದ ರಾತ್ರಿಸಮಯ ,

ನದಿತೀರಕ್ಕೆ ಬಂದ ನಿಮ್ಮನ್ನು ಕೊಲ್ಲುವೆನೆಂದವ .

ಅರ್ಜುನನೆಂದ -ಅಸ್ತ್ರ ಶಸ್ತ್ರ ಗೊತ್ತು ನಮಗೆ ,

ನಿನ್ನಿಂದಾವ ಭಯವೂ ಒದಗದು ಎಮಗೆ .

 

ಸರ್ವಂ ಹಿ ಫೇನವದಿದಂ ಬಹುಲಂ ಬಲಂ ತೇ ನಾರ್ತ್ಥಪ್ರದಂ ಭವತಿ ಚಾಸ್ತ್ರವಿದಿ ಪ್ರಯುಕ್ತಮ್ ।

ಇತ್ಯುಕ್ತವನ್ತಮಮುಮುತ್ತಮಯಾನಸಂಸ್ಥೋ ಬಾಣಾನ್ ಕ್ಷಿಪನ್ನಭಿ ಸಸಾರ ಸುರೇಶಭೃತ್ಯಃ ॥೧೯.೧೧೧॥

ಆದರೂ ನಿನ್ನ ಎಲ್ಲಾ ಬಲದ ಉಪಯೋಗ ,

ನೀರಗುಳ್ಳೆಯಂತೆ ಅದು ವ್ಯರ್ಥವಾಗುವುದಾಗ .

ಗಂಧರ್ವನ ಕುರಿತು ಅರ್ಜುನ ಮೇಲಿನ ಮಾತಂದ ,

ರಥದಲ್ಲಿ ಕೂತ ಚಿತ್ರರಥ ಬಾಣಗಳ ಬಿಡುತ್ತಾ ಬಂದ .

 

ಆಗ್ನೇಯಮಸ್ತ್ರಮಭಿಮನ್ತ್ರ್ಯ ತದೋಲ್ಮುಕೇ ಸ ಚಿಕ್ಷೇಪ ಶಕ್ರತನಯೋsಸ್ಯ ರಥಶ್ಚ ದಗ್ಧಃ ।

ತಂ ಚಾಗ್ನಿನಾ ಪರಿಗೃಹೀತಮಭಿಪ್ರಗೃಹ್ಯ ಕೇಶೇಷು ಸಞ್ಚಕರ್ಷಾSಶು ಸುರೇನ್ದ್ರಸೂನುಃ ॥೧೯.೧೧೨॥

ಅರ್ಜುನ ಹಿಡಿದ ಕೊಳ್ಳಿಗೇ ಆಗ್ನೇಯಾಸ್ತ್ರ ಅಭಿಮಂತ್ರಿಸಿದ ,

ರಥವ ಸುಟ್ಟುಕೊಂಡ ಚಿತ್ರರಥನ ಕೂದಲ ಹಿಡಿದು ಎಳೆದ . 

[Contributed by Shri Govind Magal]


No comments:

Post a Comment

ಗೋ-ಕುಲ Go-Kula