Saturday, 10 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 153 - 159

 ವ್ಯಾಸಂ ತಮೀಕ್ಷ ಭಗವನ್ತಮಗಣ್ಯಪೂರ್ಣ್ಣನಿತ್ಯಾವ್ಯಯಾತ್ಮಗುಣಮಾಶು ಸಮಸ್ತ ಏವ ।

ನತ್ವಾsಭಿಪೂಜ್ಯ ವರಪೀಠಗತಸ್ಯ ಚಾsಜ್ಞಾಮಾದಾಯ ಚೋಪವಿವಿಶುಃ ಸಹಿತಾಸ್ತದನ್ತೇ  ॥೧೯.೧೫೩॥

ಅಗಣಿತ ಗುಣಭರಿತ ಪರಿಪೂರ್ಣ ವ್ಯಾಸರಿಗೆ ಎಲ್ಲರಿಂದ ಸತ್ಕಾರ ನಮಸ್ಕಾರ ,

ಅವರನ್ನು ಶ್ರೇಷ್ಠಾಸನದಲ್ಲಿ ಕೂಡಿಸಿ ಅವರಾಜ್ಞೆಯಂತೆ ಎಲ್ಲಾ ಕುಳಿತ ವ್ಯಾಪಾರ .

 

ಕೃಷ್ಣಸ್ತದಾssಹ ನೃಪತಿಂ ಪ್ರತಿ ದೇಹಿ ಕನ್ಯಾಂ ಸರ್ವೇಭ್ಯ ಏವ ವೃಷವಾಯುಪುರನ್ದರಾ ಹಿ ।

ನಾಸತ್ಯದಸ್ರಸಹಿತಾ ಇಮ ಏವ ಇನ್ದ್ರಾಃ ಪೂರ್ವೇ ಚ ಸಮ್ಪ್ರತಿತನಶ್ಚ ಹರೇರ್ಹಿ ಪಶ್ಚಾತ್ ॥೧೯.೧೫೪॥

ವೇದವ್ಯಾಸರೆಂದರು-ದ್ರುಪದರಾಜ , ಪಾಂಡವರಿಗೆ ನಿನ್ನ ಮಗಳನ್ನು ಕೊಡು ,

ಇವರು ವೃಷ,ವಾಯು,ಪುರಂದರ,ನಾಸತ್ಯ-ದಸ್ರರು ಕೂಡಿದ ಇಂದ್ರರು ನೋಡು .

ಇಲ್ಲಿದೆ ಯಜ್ಞನಾಮಕ ಇಂದ್ರನೊಬ್ಬನ ಬಿಟ್ಟು ಉಳಿದ ಎಲ್ಲಾ ಇಂದ್ರರುಗಳ ಬೀಡು .

 

ಏಷಾಂ ಶ್ರಿಯಶ್ಚ ನಿಖಿಲಾ ಅಪಿಚೈಕದೇಹಾಃ ಪುತ್ರೀ ತವೈವ ನ ತತೋsತ್ರ ವಿರುದ್ಧತಾ ಹಿ ।

ಇತ್ಯುಕ್ತವತ್ಯಪಿ ಯದಾ ದ್ರುಪದಶ್ಚಕಾರ ಸಂವಾದಿನೀಂ ನ ಧಿಯಮೇನಮಥಾsಹ ಕೃಷ್ಣಃ ॥೧೯.೧೫೫॥

ಇವರೆಲ್ಲರ ಹೆಂಡಂದಿರು ಸೇರಿಕೊಂಡಿದ್ದಾರೆ ನಿನ್ನ ಮಗಳ ದೇಹ ,

ಇದರಲ್ಲಿ ಇಲ್ಲ ಯಾವುದೇ ತೆರನಾದ ಧರ್ಮವಿರೋಧದ ಭಾವ .

ವೇದವ್ಯಾಸರು ಇಷ್ಟೆಲ್ಲಾ ಹೇಳಿದರೂ ದ್ರುಪದನಿಂದ ಬರಲಿಲ್ಲ ಸಮ್ಮತಿ ,

ಮತಿ ಮೂಡದ ದ್ರುಪದಗೆ ವೇದವ್ಯಾಸರಿಂದ ಬಂತು ಕೆಳಗಿನ ಉಕ್ತಿ .

 

ದಿವ್ಯಂ ಹಿ ದರ್ಶನಮಿದಂ ತವ ದತ್ತಮದ್ಯ ಪಶ್ಯಾsಶು ಪಾಣ್ಡುತನಯಾನ್ ದಿವಿ ಸಂಸ್ಥಿತಾಂಸ್ತ್ವಮ್ ।

ಏತಾಂ ಚ ತೇ ದುಹಿತರಂ ಸಹ ತೈಃ ಪೃಥಕ್ಸ್ಥಾಮ್ ತಲ್ಲಕ್ಷಣೈಃ ಸಹ ತತಃ ಕುರು ತೇ ಯಥೇಷ್ಟಮ್ ॥೧೯.೧೫೬॥

ನಿನಗೆ ಮಾಡಿದ್ದೇನೆ ಬೇರೆಯವರಿಗೆ ಅಸಾಧ್ಯವಾದ ದಿವ್ಯದೃಷ್ಟಿ ಪ್ರದಾನ ,

ಮಾಡು ನಿನ್ನ ಮಗಳು ಅವರೊಂದಿಗಿರುವ ಬೇರೆ ಬೇರೆ ರೂಪದ ದರ್ಶನ .

ವಿಭಿನ್ನ ಐವರನ್ನೂ ವಿಶಿಷ್ಟ ಲಕ್ಷಣಗಳನ್ನೂ ಕಂಡಮೇಲೆ ಮಾಡು ತೀರ್ಮಾನ .

 

ಇತ್ಯುಕ್ತವಾಕ್ಯಮನು ತಾನ್ ಸ ದದರ್ಶ ರಾಜಾ ಕೃಷ್ಣಪ್ರಸಾದಬಲತೋ ದಿವಿ ತಾದೃಶಾಂಶ್ಚ ।

ಏತಾನ್ ನಿಶಾಮ್ಯ ಚರಣೌ ಜಗದೀಶಿತುಶ್ಚ ಭೀತೋ ಜಗಾಮ ಶರಣಂ ತದನಾದರೇಣ ॥೧೯.೧೫೭॥

ಈ ತೆರನಾಗಿ ಸರ್ವಜ್ಞ ವೇದವ್ಯಾಸರು ಹೇಳುತ್ತಿದ್ದಾಗ ,

ದ್ರುಪದಗಾಯಿತು ಅವರೆಲ್ಲರ ಭಿನ್ನ ದರ್ಶನ ಯೋಗ .

ಆವರಿಸಿತವನಲ್ಲಿ ಜಗದ್ಪಿತಗೆ ಅನಾದರ ಮಾಡಿದ ಭೀತಿ ,

ತಕ್ಷಣ ಆಯಿತು ವ್ಯಾಸಪದದಲ್ಲಿ ದ್ರುಪದನ ಶರಣಾಗತಿ .

 

ದತ್ವಾsಭಯಂ ಸ ಭಗವಾನ್ ದ್ರುಪದಸ್ಯ ಕಾರ್ಯ್ಯೇ ತೇನೋಮಿತಿ ಸ್ಮ ಕಥಿತೇ ಸ್ವಯಮೇವ ಸರ್ವಾಮ್ ।

ವೈವಾಹಿಕೀಂ ಕೃತಿಮಥ ವ್ಯದಧಾಚ್ಚ ಧೌಮ್ಯಯುಕ್ತಃ ಕ್ರಮೇಣ ಜಗೃಹುರ್ನ್ನಿಖಿಲಾಶ್ಚ ಪಾಣಿಮ್ ॥೧೯.೧೫೮॥

ಆಗ ವೇದವ್ಯಾಸರಿಂದ ದ್ರುಪದನಿಗೆ ಅಭಯ ನೀಡುವಿಕೆ,

ಎಲ್ಲಾ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂಬ ದೈವೀಹಾರೈಕೆ .

ದ್ರುಪದರಾಜನಿಂದ ಬಂತು ಅದಕೆ ಅಂಗೀಕಾರ ,

ಸ್ವಯಂ ವ್ಯಾಸರ ಧೌಮ್ಯರ ಪೌರೋಹಿತ್ಯ ಕಾರ್ಯ .

ಕೂಡಿಬಂದಿತ್ತು ದೈವಸಂಕಲ್ಪದ ವಿವಾಹ ಬಂಧನ ,

ಪಾಂಡವರಿಂದಾಯಿತು ದ್ರೌಪದಿಯ ಪಾಣಿಗ್ರಹಣ .

 

ಪಾಞ್ಚಾಲಕೇಷು ಚ ಮಹೋತ್ಸವ ಆಸ ರಾಜಾ ತುಷ್ಟೋsಭವತ್ ಸಹ ಸುತೈಃ ಸ್ವಜನೈಶ್ಚ ಸರ್ವೈಃ ।

ಪೌರೈಶ್ಚ ಜಾನಪದಿಕೈಶ್ಚ ಯಥೈವ ರಾಮೇ ದತ್ವಾ ಸುತಾಂ ಜನಕ ಆಪ ಮುದಂ ತತೋsನು ॥೧೯.೧೫೯॥

ಇಡೀ ಪಾಂಚಾಲದೇಶದಲ್ಲಿ ಮನೆಮಾಡಿತು ಹಬ್ಬದ ವಾತಾವರಣ ,

ಮಕ್ಕಳು ದೇಶವಾಸಿಗಳೊಂದಿಗೆ ದ್ರುಪದ ಉಂಡ ಸಂತಸದ ಹೂರಣ .

ಶ್ರೀರಾಮಗೆ ಮಗಳು ಸೀತೆಯ ಕೊಟ್ಟು ಜನಕ ಸಂತಸಪಟ್ಟ ತೆರದಿ ,

ದ್ರುಪದರಾಜ ಅನುಭವಿಸಿದ ಅದೇ ಪ್ರಮಾಣದ ತೃಪ್ತಿ ಸಂತೋಷದಿ. 

[Contributed by Shri Govind Magal]

No comments:

Post a Comment

ಗೋ-ಕುಲ Go-Kula