[ಸ್ವಯಮ್ಬರದಲ್ಲಿ
ಸೋತು, ಮರಳಿ ದ್ರುಪದನನ್ನು
ಕೊಲ್ಲಲೆಂದು ಸೈನ್ಯದೊಂದಿಗೆ ಹೋಗಿ, ಪುನಃ ಸೋತ
ದುರ್ಯೋಧನಾದಿಗಳು ಹಿಂತಿರುಗಿ ಬರುತ್ತಿರುವಾಗ, ಇತ್ತ ಅರಮನೆಯಲ್ಲಿ ವಿದುರ ಧೃತರಾಷ್ಟ್ರನಿಗೆ ಪಾಂಡವರು ದ್ರೌಪದಿಯನ್ನು
ಮದುವೆಯಾಗಿರುವ ವಿಷಯವನ್ನು ಹೇಳುತ್ತಾನೆ. ಇಲ್ಲಿ
ದುರ್ಯೋಧನಾದಿಗಳು ಸ್ವಯಮ್ಬರದಲ್ಲಿ ಸೋತಿರುವುದಾಗಲಿ, ಮರಳಿ ದ್ರುಪದನಮೇಲೆ
ಯುದ್ಧಕ್ಕೆ ಹೋಗಿರುವ ವಿಷಯವಾಗಲೀ
ಧೃತರಾಷ್ಟ್ರನಿಗೆ ತಿಳಿದಿರಲಿಲ್ಲ. ದುರ್ಯೋಧನ ಆಡಳಿತಯಂತ್ರದ ಸಂಪೂರ್ಣ ನಿಯಂತ್ರಣ
ಹೊಂದಿದ್ದ ಎನ್ನುವುದು ಇದರಿಂದ ನಮಗೆ ತಿಳಿಯುತ್ತದೆ. ಆದರೆ ಚತುರನಾದ ವಿದುರ ತನ್ನದೇ ಆದ ಚಾರರ ಮುಖೇನ ಎಲ್ಲವನ್ನೂ
ತಿಳಿದುಕೊಳ್ಳುತ್ತಿದ್ದ].
ಜ್ಞಾತ್ವಾ ಸಮಸ್ತಮಪಿ ತದ್ ವಿದುರೋsಗ್ರಜಂ ಸ್ವಂ ವರ್ದ್ಧನ್ತ ಏವ ತನಯಾ ಭವತೋ ನರೇನ್ದ್ರ ।
ಇತ್ಯಾಹ ಸೋsಪಿ
ಮುದಿತಃ ಸ್ವಸುತೇನ ಕೃಷ್ಣಾ ಪ್ರಾಪ್ತೇತಿ ಭೂಷಣವರಾಣ್ಯದಿಶಚ್ಚ ವಾಸಃ ॥೧೯.೧೭೧॥
ವಿಷಯ ತಿಳಿದ ವಿದುರ ಅಣ್ಣ ಧೃತರಾಷ್ಟ್ರಗೆ ಹೀಗೆ ಹೇಳಿದ ,
ರಾಜಾ , ನಿನ್ನ ಮಕ್ಕಳು
ಬೆಳೆಯುತ್ತಿದ್ದಾರೆ ಕೀರ್ತಿ ಸಂಪತ್ತಿನಿಂದ .
ಧೃತರಾಷ್ಟ್ರ ತಿಳಿದ ದ್ರೌಪದಿಯ ಗೆದ್ದಿದ್ದಾನೆ ತನ್ನ ಮಗ ದುರ್ಯೋಧನ ,
ಸಂತಸದಿಂದ ನೀಡಿದ-- ಬಟ್ಟೆಬರೆಗಳು ಮತ್ತು ಶ್ರೇಷ್ಠವಾದ ಆಭರಣ .
ಪಾರ್ತ್ಥಾ ಇತಿ ಸ್ಮ ವಿದುರೋsವದದಾಶು ಸೋsಪಿ
ಸ್ವಾಕಾರಗೂಹನಪರೋ ಯದಿ ತರ್ಹ್ಯತೀವ ।
ಭದ್ರಂ ಮೃತಾ ನಹಿ ಪೃಥಾಸಹಿತಾಃ ಸ್ಮ ಪಾರ್ತ್ಥಾಸ್ತೇಷಾಂ
ಪ್ರವೃತ್ತಿಮಪಿ ಮೇ ವದ ಸರ್ವಶಸ್ತ್ವಮ್ ॥೧೯.೧೭೨॥
ಆಗ ವಿದುರ ಹೇಳುತ್ತಾನೆ ಕುರುಗಳು ಎಂದರೆ ಪಾಂಡವರು ,
ತುಂಬಾ ಸಂತಸವೆಂದ ಕುರುಡ ಒಳಗೆ ಸಂಕಟ ಕುದಿಯುತ್ತಿದ್ದರೂ .
ಕುಂತಿ ಪಾಂಡವರು ಸತ್ತಿಲ್ಲವಾದರೆ ಅದು ಅತ್ಯಂತ ಮಂಗಳಕರ ,
ಅವರ ವೃತ್ತಾಂತವ ವಿವರವಾಗಿ ಹೇಳುವನಾಗು ನೀನು ವಿದುರ .
ಇತ್ಯುಕ್ತ ಆಹ ವಿದುರಃ ಸ ಹಿಡಿಮ್ಬವದ್ಧ್ಯಾಪೂರ್ವಾಂ
ಪ್ರವೃತ್ತಿಮಖಿಲಾಮಪಿ ಲಕ್ಷವೇಧಮ್ ।
ಉದ್ವಾಹಮಪ್ಯಥ ನದೀಜಮುಖಾಶ್ಚ ಸರ್ವೇ ತುಷ್ಟಾ ಬಭೂವುರಪಿ
ವತ್ಸರಮೂಷುರೇವಮ್ ॥೧೯.೧೭೩॥
ವಿದುರನಿಂದ ಹಿಡಿಂಬವಧಾ ಲಕ್ಷ್ಯವೇಧ ಮತ್ತು ಮದುವೆಯ ವಿಚಾರ ,
ಕೇಳಿದ ಭೀಷ್ಮಾದಿಗಳು ಸಂತುಷ್ಟರಾಗಿ ವರ್ಷ ಸುಮ್ಮನಿದ್ದ ವ್ಯಾಪಾರ .
ಶ್ರುತ್ವಾsಥ
ಕೃಷ್ಣಮುಪಯಾತಮುರು ಪ್ರದಾಯ ರತ್ನಂ ಚ ಪಾಣ್ಡುತನಯೇಷು ಗತಂ ಪುನಶ್ಚ ।
ತಾತಪ್ಯಮಾನಹೃದಯಾಸ್ತು ಸುಯೋಧನಾದ್ಯಾ ಮನ್ತ್ರಂ ಪ್ರಚಕ್ರುರಥ
ಕರ್ಣ್ಣಮುಖಾ ಯಯುಶ್ಚ ॥೧೯.೧೭೪॥
ನಂತರ ಶ್ರೀಕೃಷ್ಣ ಪಾಂಡವರಲ್ಲಿಗೆ ಬಂದದ್ದು ,
ಬಹಳ ಸಂಪತ್ತನ್ನು ಉಡುಗೊರೆ ಕೊಟ್ಟದ್ದು ,
ಕೇಳಿದ ದುರ್ಯೋಧನಾದಿಗಳ ಹೊಟ್ಟೆಯಲ್ಲಿ ಕಿಚ್ಚಿನ ಸಂಕಟ ,
ತಕ್ಷಣ ಮಂತ್ರಾಲೋಚನೆಯಲ್ಲಿ ತೊಡಗಿತು ಆ ದುಷ್ಟಕೂಟ .
ಕರ್ಣನ ಮುಂದಿಟ್ಟುಕೊಂಡು ಹೊರಟವರಿಗೆ ಯುದ್ಧನೋಟ .
ಯುದ್ಧಾಯ ತೇಷು ಪುನರೇವ ರಥೈಃ ಪ್ರಯಾತೇಷ್ವಾಹಾಗ್ರಜಂ ಸ ವಿದುರೋsಪಿ ನದೀಜಮುಖ್ಯಾನ್ ।
ಏತೇ ಹಿ ಪಾಪತಮಚೇತಸ ಏತ್ಯ ಪಾರ್ತ್ಥಾನ್ ಯುದ್ಧಾಯ ಮೃತ್ಯುಮುಪಯಾನ್ತಿ
ನ ಸಂಶಯೋsತ್ರ
॥೧೯.೧೭೫॥
ಕೌರವರು ರಥವೇರಿ ಯುದ್ಧಕ್ಕೆ0ದು ಹೊರಟಾಗ ,
ಭೀಷ್ಮ ಧೃತರಾಷ್ಟ್ರಾದಿಗಳಿಗೆ ವಿದುರ ಹೇಳಿದನಾಗ.
ಪಾಪಿಷ್ಠ ಮನಸ್ಸಿನ ಇವರು ಮಾಡುವ ಯುದ್ಧ ,
ಪಾಂಡವರೆದುರು ಇವರ ಸಾವದು ಶತ:ಸಿದ್ಧ .
ಭೀಮಾರ್ಜ್ಜುನೌ ವಿಷಹಿತುಂ ನಹಿ ಕಶ್ಚನಾಸ್ತಿ ಸಾಮರ್ತ್ಥ್ಯಯುಕ್
ಸುರವರೇಷ್ವಪಿ ವರ್ದ್ಧಿತಾಸ್ತೇ ।
ಜ್ಞಾತ್ವೈವ ವತ್ಸರತ ಏವ ಮಹಾನಧರ್ಮ್ಮಸ್ತೇಷಾಮುಪೇಕ್ಷಣಕೃತಸ್ತದಲಂ
ನಿಯುಙ್ಕ್ಷ್ವ ॥೧೯.೧೭೬॥
ಭೀಮಾರ್ಜುನರನ್ನು ಎದುರಿಸಲು ಬೇಕಾದ ಸಾಮರ್ಥ್ಯ ,
ದೇವೋತ್ತಮರಲ್ಲಿಯೂ ಯಾರಿಲ್ಲವೆಂಬುದು ನಿತ್ಯಸತ್ಯ .
ಪಾಂಡವರು ಬದುಕಿರುವ ಸುದ್ದಿ ತಿಳಿದಾಗಿದ್ದರೂ ಒಂದು ವರ್ಷ ,
ಅದನ್ನು ಕಡೆಗಣಿಸಿ ಸುಮ್ಮನಿದ್ದುಬಿಟ್ಟಿದ್ದೇ ಒಂದು ದೊಡ್ಡ ದೋಷ .
ರಾಯಭಾರಿಯ ವ್ಯವಸ್ಥೆಯನ್ನು ಮಾಡು ರಾಜಾ-ಸಾಕು ಉಪೇಕ್ಷ .
ಆನೀತಯೇ ಚ ವಿನಿಯುಜ್ಯ ಸುಸಾನ್ತ್ವಪೂರ್ವಮಾನೀಯ ಯೋಜಯ ನೃಪೈಷು ತಥಾsರ್ದ್ಧರಾಜ್ಯಮ್ ।
ಏವಂ ಕೃತಂ ತವ ಭವೇತ್ ಕುಲವೃದ್ಧಯೇ ಹಿ ಧರ್ಮ್ಮಾಯ ಚೋಭಯವಿನಾಶಕರೋsನ್ಯಥಾ ಸ್ಯಾಃ ॥೧೯.೧೭೭॥
ರಾಜನೇ ಅವರ ಕರೆತರಲು ರಾಯಭಾರಿಯ ಮಾಡು ನೇಮಕ ,
ಸಮಾಧಾನದಿ ಅರ್ಧರಾಜ್ಯ ಕೊಟ್ಟವರಿಗೆ ಮಾಡು ನೀ ಅಭಿಷೇಕ .
ಹೀಗಾದರೆ ನಿನ್ನ ಕುಲ ವೃದ್ಧಿ ಪುಣ್ಯ ವಿಶೇಷ ,
ಇಲ್ಲವಾದರೆ ಎರಡೂ ಇಲ್ಲ -ಎಲ್ಲಾ ಸರ್ವನಾಶ .
ಇತ್ಯುಕ್ತವತ್ಯನು ತಥೇತ್ಯವದನ್ನದೀಜೋ ದ್ರೋಣಃ ಕೃಪಶ್ಚ ವಿದುರಂ ಸ
ನೃಪೋsಪ್ಯುವಾಚ
।
ಯಾಹ್ಯಾನಯೇತಿ ಸ ಚ ವೇಗವತಾ ರಥೇನ ತತ್ರಾಗಮತ್ ತದನು ತೈರಭಿಪೂಜಿತಶ್ಚ
॥೧೯.೧೭೮॥
ಈ ಮಾತಾಯಿತು ಭೀಷ್ಮ ದ್ರೋಣ ಕೃಪಾಚಾರ್ಯಾದಿಗಳಿಗೆ ಸಮ್ಮತ ,
ಧೃತರಾಷ್ಟ್ರನಿಂದ ವಿದುರನೇ ಆದ ಅವರ ಕರೆತರಲು ನಿಯುಕ್ತ .
ವೇಗದ ರಥವೇರಿದ ವಿದುರ ಅಲ್ಲಿಗೆ ತೆರಳಿದ ,
ಪಾಂಡವರು ಮತ್ತು ದ್ರುಪದನಿಂದ ಸತ್ಕೃತನಾದ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula