ಕೋಶಸ್ಯ ಚಾರ್ದ್ಧಸಹಿತಾಸ್ತು ಯದೈವ ಪಾರ್ತ್ಥಾ ಗಚ್ಛನ್ತಿ
ತಾನನುಯಯುರ್ನ್ನಿಖಿಲಾಶ್ಚ ಪೌರಾಃ ।
ಊಚುಶ್ಚ ಹಾ ಬತ ಸುಯೋಧನ ಏಷ ಪಾಪೋ ದೂರೇ ಚಕಾರ ನನು ಪಾಣ್ಡುಸುತಾನ್
ಗುಣಾಢ್ಯಾನ್ ॥೧೯.೨೧೪॥
ಅರ್ಧಕೋಶವ ತೆಗೆದುಕೊಂಡು ಪಾಂಡವರು ತೆರಳುತ್ತಿರಲು,
ಅವರನ್ನು ಅನುಸರಿಸಿ ಹೊರಟರು ನಗರದ ಎಲ್ಲಾ ಪ್ರಜೆಗಳು,
ಅಲ್ಲಿ ಪಾಪಿಷ್ಠ ದುರ್ಯೋಧನ ಪಾಂಡವರ ದೂರ ಮಾಡಿದ ಗೋಳು.
ಭೀಮಪ್ರತಾಪಮವಲಮ್ಬ್ಯ Lಕಲಿಙ್ಗಬನ್ಧಾನ್ಮುಕ್ತಃ ಸುತಾಮಪಿ ಹಿ ತಸ್ಯ ಪುರಂ ನಿನಾಯ ।
ದ್ವೇಷ್ಟ್ಯೇವಮಪ್ಯತಿಬಲಾನ್ ಹಿ ಸದೈವ ಪಾರ್ತ್ಥಾನ್ ಯಾಮೋ ವಯಂ
ಗುಣಿಭಿರದ್ಯ ಸಹೈವ ಪಾರ್ತ್ಥೈಃ ॥೧೯.೨೧೫॥
ಭೀಮನ ಬಲದಿಂದಲೇ ಕಲಿಂಗಬಂಧನದಿಂದ ಮುಕ್ತನಾದ,
ಕಲಿಂಗರಾಜ ಪುತ್ರಿಯ ತನ್ನ ಪಟ್ಟಣಕೆ ಮದುವೆಗೆ ತಂದ.
ಆದರೂ ಶಕ್ತ ಪಾಂಡವರ ಮೇಲೆ ಅವನ ದ್ವೇಷ -ಸೇಡು,
ಜನರೆಂದರು-ಹಿಡಿಯಬೇಕು ಸಾತ್ವಿಕ ಪಾಂಡವರ ಜಾಡು.
ಆಜ್ಞಾಪಯತ್ಯಪಿ ಸ ಭೇರಿರವೇಣ ಪಾರ್ತ್ಥಾನ್ ನೈವಾನುಗಚ್ಛತ ಯದಿ
ವ್ರಜಥಾನು ವೋsದ್ಯ ।
ವಿತ್ತಂ ಹರಿಷ್ಯ ಇಹ ಸರ್ವಮಪೀತಿ ತಚ್ಚ ಪಾಪಃ ಕರೋತು ನ ವಯಂ ವಿಜಹಾಮ
ಪಾರ್ತ್ಥಾನ್॥೧೯.೨೧೬॥
ನ ಪಾಂಡವರ ಅನುಸರಿಸುತ್ತಿರುವುದ ಕೇಳಿದ ದುರ್ಯೋಧನ ಹೊಡೆಸಿದ ಡಂಗೂರ,
ನೀವು ಪಾಂಡವರ ಹಿಂದೆ ಹೊರಟಿರಾದರೆ ನಿಮ್ಮ ಆಸ್ತಿ ವಶಮಾಡಿಕೊಳ್ಳತ್ತೆ
ರಾಜ್ಯಾಧಿಕಾರ.
ಜನರೆಂದರು-ಪಾಪಿಷ್ಟ ಅವನೇನಾದರೂ ಮಾಡಲಿ, ನಮ್ಮದು ಪಾಂಡವರ ಬಿಡದ ನಿರ್ಧಾರ.
ಸದ್ಭಿರ್ಹಿ ಸಙ್ಗತಿರಿಹೈವ ಸುಖಸ್ಯ ಹೇತುರ್ಮ್ಮೋಕ್ಷ್ಯೈಕಹೇತುರಥ
ತದ್ವಿಪರೀತಮನ್ಯತ್ ।
ತಸ್ಮಾದ್ ವ್ರಜೇಮ ಸಹ ಪಾಣ್ಡುಸುತೈರ್ಹಿ ಶಕ್ರಪ್ರಸ್ಥಂ ತ್ವಿತಿ ಸ್ಮ
ಧೃತಚೇತಸ ಆಹ ಧಾರ್ಮ್ಮಃ ॥೧೯.೨೧೭॥
ಸಜ್ಜನರ ಸಹವಾಸ ಇಹಲೋಕದ ಸುಖಕ್ಕೆ ಕಾರಣ,
ಇಹ ತ್ಯಜಿಸಿದ ಮೇಲೆ ಮೋಕ್ಷಕ್ಕೂ ಅದುವೇ ಹೂರಣ.
ದುರ್ಜನರ ಸಹವಾಸ ಅದಕ್ಕೆ ತದ್ವಿರುದ್ಧ,
ಎರಡೂ ಕಡೆಯ ದುಃಖಕ್ಕೆ ಅದು ಬದ್ಧ.
ಹಾಗಾಗಿ ಪಾಂಡವರೊಡನೆ ಇಂದ್ರಪ್ರಸ್ಥಕ್ಕೆ ಹೋಗೋಣವೆಂದು ಜನರ ನಿರ್ಧಾರ,
ಇದನ್ನೆಲ್ಲ ಗಮನಿಸಿ ಜನರನ್ನುದ್ದೇಶಿಸಿ ನುಡಿದ ಯಮಪುತ್ರ ಯುಧಿಷ್ಠಿರ.
ಪ್ರೀತಿರ್ಯ್ಯದಿ ಸ್ಮ ಭವತಾಂ ಮಯಿ ಸಾನುಜೇsಸ್ತಿ ತಿಷ್ಠಧ್ವಮತ್ರ ಪಿತುರೇವ ಹಿ ಶಾಸನೇ ಮೇ ।
ಕೀರ್ತ್ತಿರ್ಹಿ ವೋsನುಗಮನಾತ್ ಪಿತುರತ್ಯಯೇನ ನಶ್ಯೇನ್ನ ಇತ್ಯನುಸರಧ್ವಮಿಹಾsಮ್ಬಿಕೇಯಮ್ ॥೧೯.೨೧೮॥
ನಿಮ್ಮೆಲ್ಲರಿಗೂ ನನ್ನಲ್ಲಿ, ನಮ್ಮೆಲ್ಲರಲ್ಲಿ ಇರುವುದೇ ಆದರೆ ಪ್ರೀತಿ,
ನೀವು ನನ್ನ ದೊಡ್ಡಪ್ಪ ಧೃತರಾಷ್ಟ್ರನ ಆಳ್ವಿಕೆಯಲ್ಲಿರುವುದು ನೀತಿ.
ನೀವು ಅದನ್ನನುಸರಿಸದಿದ್ದರೆ ನಾಶವಾಗುತ್ತದೆ ಧೃತರಾಷ್ಟ್ರನ ಕೀರ್ತಿ.
ಈರೀತಿಯ ಚಿಂತನೆಯಲ್ಲಿರಲಿ ನಿಮ್ಮ ಯೋಚನೆಯ ದಾರಿ,
ಧೃತರಾಷ್ಟ್ರನ ರಾಜನಾಗಿ ಒಪ್ಪಿಕೊಂಡು ಅವನಾಳ್ವಿಕೆಯಲ್ಲಿ ಇರಿ.
ಇತ್ಯೇವ ತೈಃ ಪುರಜನಾ ನಿಖಿಲೈರ್ನ್ನಿಷಿದ್ಧಾಃ ಕೃಚ್ಛ್ರೇಣ ತಸ್ಥುರಪಿ
ತಾನ್ ಮನಸಾsನ್ವಗಚ್ಛನ್
।
ಪ್ರಾಪ್ಯಾಥ ಶಕ್ರಪುರಮಸ್ಮರತಾಂ ಚ ಕೃಷ್ಣೌ ದೇವೇಶವರ್ದ್ದಕಿಮಥಾsಗಮದತ್ರ ಸೋsಪಿ
॥೧೯.೨೧೯॥
ಯುಧಿಷ್ಠಿರನ ಮಾತು ಕೇಳಿ ಪ್ರಜೆಗಳು ಅಲ್ಲೇ ನಿಂತರೂ,
ಮಾನಸಿಕವಾಗಿ ಅವರನನುಸರಿಸಿ ಅವರೊಡನೆ ಇದ್ದರು.
ಪಾಂಡವರು ಖಾಂಡವ ಪ್ರಸ್ಥಕ್ಕೆ ಸೇರಿದರು,
ವ್ಯಾಸಕೃಷ್ಣರು ದೇವಬಡಗಿಯ ನೆನೆದರು,
ನೆನೆದೊಡನೆ ವಿಶ್ವಕರ್ಮ ಬಂದದ್ದ ಕಂಡರು.
No comments:
Post a Comment
ಗೋ-ಕುಲ Go-Kula