Wednesday 7 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 130 135

 

ವಿಪ್ರಾಶ್ಚ ಕೇಚಿದತಿಯುಕ್ತಮಿಮೌ ಹಿ ವೀರೌ ದೇವೋಪಮಾವಿತಿ ವಚೋ ಜಗದುಸ್ತತಸ್ತೌ ।

ದೃಷ್ಟ್ವೈವ ಕೃಷ್ಣಮುಖಪಙ್ಕಜಮಾಶು ಚಾಪಸಾನ್ನಿದ್ಧ್ಯಮಾಯಯತುರುತ್ತಮವೀರ್ಯ್ಯಸಾರೌ ॥೧೯.೧೩೦॥

ಭೀಮಾರ್ಜುನರು ಎದ್ದುನಿಂತಾಗ ಕೆಲವು ಬ್ರಾಹ್ಮಣರು ,

ಇವರು ದೇವತೆಗಳ ಸಮವೀರರು-ವಿಹಿತವಿದೆಂದರು .

ಎದ್ದ ಭೀಮಾರ್ಜುನರು ದೃಷ್ಟಿಯಲ್ಲೇ ಪಡೆದರು ಕೃಷ್ಣನ ಒಪ್ಪಿಗೆ ,

ಕೃಷ್ಣನ ಸಮ್ಮತಿ ಪಡೆದವರು ನಡೆದು ಬಂದರು ಬಿಲ್ಲಿನ ಬಳಿಗೆ .

 

ತತ್ರಾರ್ಜ್ಜುನಃ ಪವನಜಾತ್ ಪ್ರಿಯತೋsಪ್ಯನುಜ್ಞಾಮಾದಾಯ ಕೇಶವಮಜಂ ಮನಸಾ ಪ್ರಣಮ್ಯ ।

ಕೃತ್ವಾ ಗುಣಾನ್ವಿತಮದೋ ಧನುರಶ್ರಮೇಣ ಯನ್ತ್ರಾನ್ತರೇಣ ಸ ಶರೈರಧುನೋಚ್ಚ ಲಕ್ಷಮ್ ॥೧೯.೧೩೧॥

ಅರ್ಜುನ ತನ್ನ ಅತ್ಯಂತ ಪ್ರಿಯನಾದ ಭೀಮನ ಆಣತಿ ಪಡೆದ ,

ಎಂದೂ ಹುಟ್ಟದ ನಾರಾಯಣಗೆ ಮನದಲ್ಲೇ ನೆನೆದು ನಮಿಸಿದ .

ಪಾರ್ಥ ಕಷ್ಟವಿಲ್ಲದೇ ಬಿಲ್ಲ ಹೆದೆಯೇರಿಸಿದ ,

ಬಾಣಗಳಿಂದ ಹೇಳಿದ ಗುರಿಯ ಭೇದಿಸಿದ .

 

ಕೃಷ್ಣಾ ತದಾsಸ್ಯ ವಿದಧೇ ನವಕಞ್ಜಮಾಲಾಂ ಮದ್ಧ್ಯೇ ಚ ತಾಂ ಪ್ರತಿವಿಧಾಯ ನರೇನ್ದ್ರಪುತ್ರೌ ।

ಭೀಮಾರ್ಜ್ಜುನೌ ಯಯತುರಚ್ಯುತಮಾಭಿನಮ್ಯ ಕ್ಷುಬ್ಧಂ[1] ತದಾ ನೃಪವರಾಬ್ಧಿರಿಮಾವಧಾವತ್ ॥೧೯.೧೩೨॥

ದ್ರೌಪದಿಯಿಂದ ಅರ್ಜುನನ ಕೊರಳಿಗೆ ಬಿತ್ತು ಹೊಸ ತಾವರೆಯ ಹಾರ ,

ರಾಜಕುವರ ಭೀಮಾರ್ಜುನರಿಂದ ದ್ರೌಪದಿಯ ಕೂಡಿ  ಕೃಷ್ಣಗೆ ನಮಸ್ಕಾರ .

ಆವರೆಗೆ ತಟಸ್ಥವಾಗಿದ್ದ ಕ್ಷತ್ರಿಯರು ,

ಇವರಿಬ್ಬರಿದ್ದೆಡೆಗೆ ಧಾವಿಸಿ ಬಂದರು .

 

ದ್ರಷ್ಟುಂ ಹಿ ಕೇವಲಗತಿರ್ನ್ನತು ಕನ್ಯಕಾಯಾ ಅರ್ತ್ಥೇ ನ ಚಾಪಮಿಹ ವೃಷ್ಣಿವರಾಃ ಸ್ಪೃಶನ್ತು ।

ಇತ್ಯಾಜ್ಞಯೈವ ವರಚಕ್ರಧರಸ್ಯ ಲಿಪ್ಸಾಮಪ್ಯತ್ರ ಚಕ್ರುರಿಹ ನೈವ ಯದುಪ್ರವೀರಾಃ ॥೧೯.೧೩೩॥

ಕೃಷ್ಣ ಹೇಳಿದ್ದ-ನಮ್ಮವರದೆಲ್ಲಾ ಇರಬೇಕು ಕೇವಲ ನೋಟ ,

ಯಾರೂ ಕನ್ಯೆಗಾಗಿ ಆಡಕೂಡದು ಸ್ವಯಂವರದ ಆ ಆಟ .

ಹೀಗಿತ್ತದು ಶ್ರೀಕೃಷ್ಣನ ಆಜ್ಞೆಯ ಮಾತಿನ ಕುಣಿಕೆ ,

ಯಾದವರ್ಯಾರೂ ತೋರಲಿಲ್ಲ ಬಿಲ್ಲೆತ್ತುವ ಬಯಕೆ.

 

ಭೀಮಸ್ತು ರಾಜಸಮಿತಿಂ ಪ್ರತಿಸಮ್ಪ್ರಯಾತಾಂ ದೃಷ್ಟ್ವೈವ ಯೋಜನದಶೋಚ್ಛ್ರಯಮಾಶು ವೃಕ್ಷಮ್ ।

ಆರುಜ್ಯ ಸರ್ವನೃಪತೀನಭಿತೋsಪ್ಯತಿಷ್ಠದ್ ದೃಷ್ಟ್ವಾಪಲಾಯನಪರಾಶ್ಚ ಬಭೂವುರೇತೇ ॥೧೯.೧೩೪॥

ಭೀಮ ತನ್ನೆದುರು ನುಗ್ಗಿ ಬರುತ್ತಿರುವ ರಾಜರ ಕಂಡ ,

ಎತ್ತರದ ಮರವೊಂದನ್ನು ಕಿತ್ತು ರಾಜರೆದುರು ನಿಂದ .

ನೋಟ ಕಂಡ ಕೆಲವರನುಸರಿಸಿದರು ಪಲಾಯನವಾದ .

 

ಭೀಮೋsಯಮೇಷ ಪುರುಹೂತಸುತೋsನ್ಯ ಏತೇ ಪಾರ್ತ್ಥಾ ಇತಿ ಸ್ಮ ಹಲಿನೇ ಹರಿರಭ್ಯವೋಚತ್ ।

ದೃಷ್ಟ್ವೈವ ಸೋsಪಿ ಮುದಮಾಪ ಶಿನೇಶ್ಚ ಪೌತ್ರಃ ಖಡ್ಗಂ ಪ್ರಗೃಹ್ಯ ಹರ್ಷಾತ್ ಪರಿಪುಪ್ಲುವೇsತ್ರ ॥೧೯.೧೩೫॥

ಬಲರಾಮಗೆ ಕೃಷ್ಣ ಹೇಳಿದ ಇವನು ಭೀಮ,ಇವನು ಅರ್ಜುನ ಮಿಕ್ಕವರು ಕುಂತೀಮಕ್ಕಳು ,

ಸಾತ್ಯಕಿ ಕತ್ತಿ ಹಿಡಿದು ಕುಣಿದಾಡಿದರೆ, ಬಲರಾಮನ ಮುಖದಲ್ಲಿ ಸಂತಸದ ಹೊನಲು .

[Contributed by Shri Govind Magal]

No comments:

Post a Comment

ಗೋ-ಕುಲ Go-Kula