Monday 12 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 166 - 170

 [ದ್ರೌಪದಿ  ಸ್ವಯಮ್ಬರದ ನಂತರ, ಶ್ರೀಕೃಷ್ಣ ಉಡುಗೊರೆಯೊಂದಿಗೆ ಕಾಮ್ಪಿಲ್ಯನಗರಕ್ಕೆ ಮರಳಿ ಬರುವುದಕ್ಕೂ ಮೊದಲೇ ನಡೆದ ಘಟನೆಯನ್ನು ಇಲ್ಲಿ ವಿವರಿಸುತ್ತಾರೆ. ಸ್ವಯಮ್ಬರದಲ್ಲಿ ಮುಖಭಂಗಹೊಂದಿ, ಸೋತು ಹಿಂತಿರುಗಿ ಬಂದಿದ್ದ ದುರ್ಯೋಧನಾದಿಗಳು, ಮತ್ತೆ ಎಲ್ಲರನ್ನೂ ಸೇರಿಸಿಕೊಂಡು, ಸೈನ್ಯದೊಂದಿಗೆ ದ್ರುಪದನನ್ನು ಕೊಲ್ಲಬೇಕೆಂದು ಅವನ ಪಟ್ಟಣದಮೇಲೆ ದಾಳಿ ಮಾಡುತ್ತಾರೆ. ಸ್ವಯಮ್ಬರದ ನಂತರ ಶ್ರೀಕೃಷ್ಣ ದ್ವಾರಕೆಗೆ ಹಿಂತಿರುಗಿ ಬಂದಿದ್ದರಿಂದ, ಈ ಸಮಯದಲ್ಲಿ ಶ್ರೀಕೃಷ್ಣ ಕಾಮ್ಪಿಲ್ಯನಗರದಲ್ಲಿರಲಿಲ್ಲ].

ವೈಚಿತ್ರವೀರ್ಯ್ಯ ತನಯಾಃ ಸಹ ಸೌಬಲೇನ ಕರ್ಣ್ಣೇನ ಸಿನ್ಧುಪತಿನಾ ರಥಹಸ್ತಿಯೌಧೈಃ ।

ಭೂರಿಶ್ರವಃಪ್ರಭೃತಿಭಿಶ್ಚ ಸಹೈವ ಹನ್ತುಂ ಪಾಞ್ಚಾಲರಾಜಮಗುರೇತ್ಯ ಪುರೀಂ ಪುನಸ್ತೇ ॥೧೯.೧೬೬॥

ಇತ್ತ ದುರ್ಯೋಧನ , ಶಕುನಿ , ಕರ್ಣ , ಜಯದ್ರಥ, ಭೂರಿಶ್ರವ ಮುಂತಾದವರ ಲೆಕ್ಕಾಚಾರ ,

ರಥ , ಆನೆ , ಸೈನ್ಯದೊಂದಿಗೆ ದ್ರುಪದ ಪಟ್ಟಣವ ಆಕ್ರಮಿಸಿ ಅವನನ್ನು ಕೊಲ್ಲುವ ಹುನ್ನಾರ .

 

ತೈರರ್ದ್ದಿತೇ ಸ್ವಪುರ ಆಶು ಸ ಸೋಮಕಾನಾಂ ರಾಜಾ ಸುತೈಃ ಸಹ ಸಸೈನಿಕ ಉದ್ಗತೋsಭೂತ್ ।

ತೇಷಾಂ ಚ ತಸ್ಯ ಚ ಬಭೂವ ಮಹಾನ್ ವಿಮರ್ದ್ದಃ ಪುತ್ರೌ ಚ ತಸ್ಯ ನಿಹತೌ ವಿಧುತಾಶ್ಚ ಸೇನಾಃ ॥೧೯.೧೬೭॥

ಆ ವಿರೋಧಿಗಳಿಂದ ದ್ರುಪದ ಪಟ್ಟಣವಾಗುತ್ತಿರಲು ಹಾಳು ,

ಮಕ್ಕಳು,ಸೈನ್ಯದೊಂದಿಗೆ ಹೊರಬಂದ ದ್ರುಪದ ಎದುರಿಸಲು .

ಹೀಗೆ ದ್ರುಪದ ದುರ್ಯೋಧನಾದಿಗಳ ಮಧ್ಯೆ ನಡೆಯಿತು ಕದನ ,

ದ್ರುಪದಪುತ್ರರಿಬ್ಬರು ಸತ್ತು ಅವನ ಸೈನ್ಯ ಮಾಡಿತು ಪಲಾಯನ .

 

ಚಿತ್ರೇ ಹತೇ ಸಮರ ಆಶು ಸಚಿತ್ರಕೇತೌ ಧಾವತ್ಸು ಸೈನಿಕವರೇಷು ಚ ಪಾರ್ಷತಸ್ಯ ।

ಪಾರ್ತ್ಥಾ ರಥೈರಭಿಯಯುರ್ದ್ಧೃತಚಾಪಬಾಣಾ ವೈಚಿತ್ರವೀರ್ಯ್ಯತನಯಾನ್ ರವಿಸೂನುಯುಕ್ತಾನ್ ॥೧೯.೧೬೮॥

ದ್ರುಪದಪುತ್ರ ಚಿತ್ರ , ಚಿತ್ರಕೇತುಗಳದಾಯಿತು ಯುದ್ಢದಿ ಮರಣ ,

ದ್ರುಪದನ ಸೈನಿಕರೆಲ್ಲಾ ಸೋತು ಮಾಡುತ್ತಿರಲು ಪಲಾಯನ ,

ಆಗ ಪಾಂಡವರು ರಥವೇರಿ ಬಿಲ್ಲು ಬಾಣಗಳೊಂದಿಗೆ ಬಂದರು ,

ಕರ್ಣ , ದುರ್ಯೋಧನ ಮೊದಲಾದವರ ಎದುರಾಗಿ ಬಂದರು .

 

ತೈಸ್ತೇಷು ಪಞ್ಚಸು ಸಮಂ ಪ್ರತಿಯೋಧಯತ್ಸು ಭೂರಿಶ್ರವಾಃ ಸರವಿಜೋ ವಿರಥಂ ಚಕಾರ ।

ಶಕ್ರಾತ್ಮಜಂ ತದನು ಪರ್ವತಸನ್ನಿಕಾಶಂ ದೋರ್ಭ್ಯಾಂ ತು ಮಾರುತಿರುರುಂ ತರುಮುದ್ಬಬರ್ಹ ॥೧೯.೧೬೯॥

ಪಾಂಡವರೊಡನೆ ಯುದ್ಧದಿ ಕರ್ಣ ಭೂರಿಶ್ರವರು ಅರ್ಜುನನ ಮಾಡಿದರು ರಥಹೀನ,

ತನ್ನೆರಡು ಕೈಗಳಿಂದ ಬಲು ಎತ್ತರದ ದೊಡ್ಡ ಮರವೊಂದನ್ನು ಕಿತ್ತು ನಿಂತ ಭೀಮಸೇನ .

 

ಆಯಾನ್ತಮೀಕ್ಷ್ಯ ತರುಹಸ್ತಮಿಮಂ ಸಮೀರಸೂನುಂ ಸುಯೋಧನಮುಖಾ ನಿಖಿಲಾಃ ಸಕರ್ಣ್ಣಾಃ ।

ಭೂರಿಶ್ರವಾಃ ಶಕುನಿಭೂರಿಜಯದ್ರಥಾಶ್ಚ ಸರ್ವೇsಪಿ ದುದ್ರುವುರಥೋ ವಿವಿಶುಃ ಪುರಂ ಸ್ವಮ್ ॥೧೯.೧೭೦॥

ಆ ಮರವನ್ನು ಹಿಡಿದು ಧಾವಿಸಿ ಬರುತ್ತಿರಲು ಭೀಮಸೇನ ,

ಭೂರಿಶ್ರವ ಶಕುನಿ ಭೂರಿ ಜಯದ್ರಥ ಮತ್ತು ದುರ್ಯೋಧನ ,

ಹೆದರಿಕೊಂಡು ಮಾಡಿದರು ತಮ್ಮ ಪಟ್ಟಣದತ್ತ ಪಲಾಯನ

No comments:

Post a Comment

ಗೋ-ಕುಲ Go-Kula