Thursday, 1 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 101 - 106

 [ಶ್ರೀಕೃಷ್ಣ ಹಸ್ತಿನಪುರಕ್ಕೆ ಬಂದ ಸಮಯದಲ್ಲಿ ದ್ವಾರಕಾಪಟ್ಟಣದಲ್ಲಿ ಪಿತೂರಿಯೊಂದು ನಡೆಯಿತು:]

ತಸ್ಯಾನ್ತರೇ ಹೃದಿಕಸೂನುರನನ್ತರಂ ಸ್ವಂ ಶ್ವಾಫಲ್ಕಿಬುದ್ಧಿಬಲಮಾಶ್ರಿತ ಇತ್ಯುವಾಚ ।

ಸತ್ರಾಜಿದೇಷ ಹಿ ಪುರಾ ಪ್ರತಿಜಜ್ಞ ಏನಾಮಸ್ಮತ್ಕೃತೇ ಸ್ವತನಯಾಂ ಮಣಿನಾ ಸಹೈವ ॥೧೯.೧೦೧॥

ಸರ್ವಾಂಶ್ಚ ನಃ ಪುನರಸಾವವಮತ್ಯ ಕೃಷ್ಣಾಯಾದಾತ್ ಸುತಾಂ ಜಹಿ ಚ ತಂ ನಿಶಿ ಪಾಪಬುದ್ಧಿಮ್ ।

ಆದಾಯ ರತ್ನಮುಪಯಾಹಿ ಚ ನೌ ವಿರೋಧೇ ಕೃಷ್ಣಸ್ಯ ದಾನಪತಿನಾ ಸಹ ಸಾಹ್ಯಮೇಮಿ ॥೧೯.೧೦೨॥

ಈಮಧ್ಯೆ ಅತ್ತ ದ್ವಾರಕೆಯಲ್ಲಿ ,

ಪಿತೂರಿಯೊಂದು ಜರುಗಿತಲ್ಲಿ .

ಕೃತವರ್ಮ ಅಕ್ರೂರನ ಮಾತ ಆಲಿಸಿ ತನ್ನ ತಮ್ಮ ಶತಧನ್ವಗೆ ಹೀಗೆ ಹೇಳಿದ ,

ಸತ್ರಾಜಿತ ಸತ್ಯಭಾಮೆ ಜೊತೆ ಮಣಿಯನ್ನೂ ನಮಗೆ ಕೊಡುವುದಾಗಿ ಹೇಳಿದ್ದ .

ಆದರೆ ನಮ್ಮನ್ನ ಕಡೆಗಣಿಸಿ ಮಗಳನ್ನು ಕೃಷ್ಣಗೆ ಕೊಟ್ಟ ,

ಅವನನ್ನು ರಾತ್ರಿವೇಳೆ ನೀ ಕೊಂದುಬಿಡು ಅವ ಪಾಪಿಷ್ಟ.

ಅವನನ್ನು ಕೊಂದುಬಿಟ್ಟು ಆ ಮಣಿಯನ್ನು ನೀನು ತಂದುಬಿಡು ,

ಕೃಷ್ಣ ವಿರೋಧಿಸಿದರೆ ಅಕ್ರೂರನೊಡನೆ ನಾನಿದ್ದೇನೆ ಚಿಂತೆ ಬಿಡು .

 

ಇತ್ಯುಕ್ತ ಆಶು ಕುಮತಿಃ ಸ ಹಿ ಪೂರ್ವದೇಹೇ ದೈತ್ಯೋ ಯತಸ್ತದಕರೋದಥ ಸತ್ಯಭಾಮಾ ।

ಆನನ್ದಸಂವಿದಪಿ ಲೋಕವಿಡಮ್ಬನಾಯ ತದ್ದೇಹಮಸ್ಯ ತಿಲಜೇ ಪತಿಮಭ್ಯುಪಾಗಾತ್ ॥೧೯.೧೦೩॥

ಇದನ್ನು ಕೇಳಿದ ಆ ಶತಧನ್ವ ಪೂರ್ವದಲ್ಲಿ ಒಬ್ಬ ದೈತ್ಯ ,

ಆ ಕೆಟ್ಟಬುದ್ಧಿಯವ ಮಾಡಿಬಿಟ್ಟ ಸತ್ರಾಜಿತನ ಹತ್ಯಾ .

ಎಲ್ಲ ಬಲ್ಲ ಸತ್ಯಭಾಮೆ ಲೋಕಾನುಸರಣೆಗಾಗಿ ತಂದೆ ಶವವ ಎಣ್ಣೆಯಲ್ಲಿಟ್ಟಳು ,

ಸತ್ರಾಜಿತನ ಶವರಕ್ಷಣೆ ಮಾಡಿ ತಾನು ಗಂಡ ಶ್ರೀಕೃಷ್ಣನ ಬಳಿಗೆ ಹೊರಟಳು .

 

ಶ್ರುತ್ವಾ ತದೀಯವಚನಂ ಭಗವಾನ್ ಪುರೀಂ ಸ್ವಾಮಾಯಾತ ಏವ ತು ನಿಶಮ್ಯ ಮಹೋತ್ಸವಂ ತಮ್ ।

ಪಾಞ್ಚಾಲರಾಜಪುರುಷೋದಿತಮಾಶು ವೃಷ್ಣಿವರ್ಯ್ಯೈರಗಾನ್ಮುಸಲಿನಾ ಸಹ ತತ್ಪುರೀಂ ಚ ॥೧೯.೧೦೪॥

ಸತ್ಯಭಾಮೆಯ ಮಾತ ಕೇಳಿದ ಶ್ರೀಕೃಷ್ಣ ತನ್ನ ಪಟ್ಟಣದತ್ತ ಹೊರಟ ,

ಆ ಹೊತ್ತಿಗೆ ದ್ರೌಪದೀ ಸ್ವಯಂವರದ ಸುದ್ದಿ ತಂದ ಪಾಂಚಾಲದೂತ .

ಆಗ ಯಾದವರು ಬಲರಾಮನಿಂದ ಕೂಡಿದವನಾಗಿ ,

ಹೊರಟ ತಾನು ಪಾಂಚಾಲಪಟ್ಟಣದ ಕಡೆಗೆ ತಿರುಗಿ .

 

ಭೀಮೋsಪಿ ರುದ್ರವರರಕ್ಷಿತರಾಕ್ಷಸಂ ತಂ ಹತ್ವಾ ತೃಣೋಪಮತಯಾ ಹರಿಭಕ್ತವನ್ದ್ಯಃ ।

ಉಷ್ಯಾಥ ತತ್ರ ಕತಿಚಿದ್ದಿನಮಚ್ಯುತಸ್ಯ ವ್ಯಾಸಾತ್ಮನೋ ವಚನತಃ ಪ್ರಯಯೌ ನಿಜೈಶ್ಚ ॥೧೯.೧೦೫॥

ಇತ್ತ ರುದ್ರವರ ರಕ್ಷಿತ ಬಕನ ಭೀಮ ಹುಲ್ಲಿನಂತೆ ಸೀಳಿ ಕೊಂದ ,

ದೈವಭಕ್ತರಿಂದ ವಂದ್ಯನಾಗಿ ಕೆಲಕಾಲ ಭೀಮ ಅಲ್ಲೇ ವಾಸಿಸಿದ .

ನಂತರ ವೇದವ್ಯಾಸರ ಮಾತನ್ನು ಅನುಸರಿಸಿ ,

ತನ್ನವರೊಡನೆ ಹೊರಟ ಪಾಂಚಾಲನಗರ ಅರಸಿ .

 

ಮಙ್ಗಲ್ಯಮೇತದತುಲಂ ಪ್ರತಿ ಯಾತ ಶೀಘ್ರಂ ಪಾಞ್ಚಾಲಕಾನ್  ಪರಮಭೋಜನಮತ್ರ ಸಿದ್ಧ್ಯೇತ್ ।

ವಿಪ್ರೈರಿತಸ್ತತ ಇತೀರಿತವಾಕ್ಯಮೇತೇ ಶೃಣ್ವನ್ತ ಏವ ಪರಿ ಚಕ್ರಮುರುತ್ತರಾಶಾಮ್ ॥೧೯.೧೦೬॥

ನಡೆದಿದೆ ಅಲ್ಲಿ ಮಂಗಳಕರವಾದ ಮದುವೆಯ ಹಬ್ಬ ,

ಪಾಂಚಾಲದಲ್ಲಿ ಒಳ್ಳೆಯ ಊಟತಿಂಡಿಗಳವು ಲಭ್ಯ .

ಹೀಗಿತ್ತು ಅಲ್ಲಲ್ಲಿ ಸಿಕ್ಕ ಬ್ರಾಹ್ಮಣರೆಲ್ಲರ ಮಾತು ,

ಕೇಳಿದವರು ಹೊರಟರು ಉತ್ತರದಿಕ್ಕನ್ನು ಕುರಿತು.

No comments:

Post a Comment

ಗೋ-ಕುಲ Go-Kula