Monday 5 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 118 - 122

 ತೇ ಧೌಮ್ಯಮಾಪ್ಯ ಚ ಪುರೋಧಸಮುತ್ತಮಜ್ಞಂ ವಿಪ್ರಾತ್ಮಜೋಪಮತಯಾ ವಿವಿಶುಃ ಪುರಂ ಚ ।

ಪಾಞ್ಚಾಲಕಸ್ಯ ನಿಖಿಲಾಂ ದದೃಶುಶ್ಚ ತತ್ರ ಮೂರ್ದ್ಧಾವಸಿಕ್ತಸಮಿತಂ ಸಮಲಙ್ಕೃತಾಂ ಚ ॥೧೯.೧೧೮॥

ಬಂದಿತು ಪಾಂಡವರು ಧೌಮ್ಯರ ಪುರೋಹಿತರನ್ನಾಗಿ ಪಡೆದ ಸನ್ನಿವೇಶ ,

ಮಾಡಿದರೆಲ್ಲ ವಿಪ್ರಕುಮಾರರಂತೆ ಪಾಂಚಾಲಪಟ್ಟಣದ ಪ್ರವೇಶ .

ನಗರವ ತುಂಬಿತ್ತು ಸಡಗರ ಸಂಭ್ರಮಾಚರಣೆ ,

ಕಂಡರು ಅಲಂಕೃತ ನೇಮಿತ ರಾಜರ ಜಮಾವಣೆ .

 

ರಾಜನ್ಯಮಣ್ಡಲಮುದೀಕ್ಷ್ಯ ಸುಪೂರ್ಣ್ಣಮತ್ರ ಕೃಷ್ಣಾಂ ಪ್ರಗೃಹ್ಯ ಸಹಜಃ ಪ್ರಗೃಹೀತಮಾಲಾಮ್ ।

ತೇಷಾಂ ಚ ಮದ್ಧ್ಯಮಗಮತ್ ಕುಲವೀರ್ಯ್ಯಸಮ್ಪದ್ಯುಕ್ತಾಂ ವಿಭೂತಿಮಥ ಚಾsಹ ಸಮಸ್ತರಾಜ್ಞಾಮ್ ॥೧೯.೧೧೯॥

ಮಾಲೆ ಹಿಡಿದ ದ್ರೌಪದಿಯನ್ನು ಕರೆದುಕೊಂಡು ಧೃಷ್ಟದ್ಯುಮ್ನ ಬಂದ ,

ಕ್ಷತ್ರಿಯ ಸಮೂಹದ ಮಧ್ಯ ದ್ರೌಪದಿಗೆ ರಾಜರ ಪರಿಚಯ ನೀಡಿದ .

 

ತಾಂಶ್ಚಪ್ರದರ್ಶ್ಯ ಸಕಲಾನ್ ಸ ಹುತಾಶನಾಂಶಶ್ಚಾಪಂ ಚ ತತ್ ಪ್ರತಿನಿಧಾಯ ಸಪಞ್ಚಬಾಣಮ್ ।

ಆಹಾಭಿಭಾಷ್ಯ ಸಕಲಾನ್ ನೃಪತೀನಥೋಚ್ಚೈರ್ದ್ದೀಪ್ಯದ್ಧುತಾಶನವಪುರ್ಘನತುಲ್ಯಘೋಷಃ ॥೧೯.೧೨೦॥

ಉರಿವ ಬೆಂಕಿಯ ಮೈಕಾಂತಿ ಗುಡುಗಿನ ಧ್ವನಿಯುಳ್ಳ ಧೃಷ್ಟದ್ಯುಮ್ನ ,

ಪರಿಚಯಾನಂತರ ಬಾಣ ಬಿಲ್ಲನಿಟ್ಟು ನುಡಿದ ಉದ್ದೇಶಿಸಿ ಎಲ್ಲರನ್ನ .

 

ಏತೇನ ಕಾರ್ಮ್ಮುಕವರೇಣ ತರೂಪರಿಸ್ಥಂ ಮತ್ಸ್ಯಾವಭಾಸಮುದಕೇ ಪ್ರತಿವೀಕ್ಷ್ಯ ಯೇನ ।

ಏತೈಃ ಶರೈಃ ಪ್ರತಿಹತೋ ಭವತೀಹ ಮತ್ಸ್ಯಃ ಕೃಷ್ಣಾsನುಯಾಸ್ಯತಿ ತಮದ್ಯ ನರೇನ್ದ್ರವೀರಾಃ ॥೧೯.೧೨೧ ॥

ವೀರರಾಜರೇ ಈ ಬಿಲ್ಲಿಗೆ ಪಂಚ ಬಾಣಗಳ ಹೂಡಿ ,

ಮರದ ಮೇಲಿರುವ ಮೀನಗೊಂಬೆಯ ಗುರಿಮಾಡಿ ,

ಯಾವ ರಾಜನಿಂದ ಆ ಮೀನು ಕೆಡವಲ್ಪಡುವುದು ,

ದ್ರೌಪದಿಯಾಗುವಳು ಗೆಲುವು ಕಂಡ ರಾಜನ ವಧು .

 

ಇತ್ಯಸ್ಯ ವಾಕ್ಯಮನು ಸರ್ವನರೇನ್ದ್ರಪುತ್ರಾ ಉತ್ತಸ್ಥುರುದ್ಧತಮದಾಶ್ಚಲಕುಣ್ಡಲಾಸ್ಯಾಃ ।

ಅಸ್ತ್ರಂ ಬಲಂ ಚ ಬಹು ನೈಜಮಭೀಕ್ಷಮಾಣಾಃ ಸ್ಪರ್ದ್ಧನ್ತ ಏವ ಚ ಮಿಥಃ ಸಮಲಙ್ಕೃತಾಙ್ಗಾಃ ॥೧೯.೧೨೨॥

ಈ ತೆರನಾಗಿ ಧೃಷ್ಟದ್ಯುಮ್ನ ವಿವರಿಸಿ ಹೇಳಿದಾಗ ,

ಅಲಂಕೃತ ಕುಂಡಲಧಾರಿಗಳಾದ ರಾಜರುಗಳಾಗ ,

ಎಲ್ಲರಿಗೂ ತಮ್ಮ ಅಸ್ತ್ರ ಬಾಹುಬಲದ ಬಗ್ಗೆ ಪೊಗರು ,

ಪರಸ್ಪರ ಸ್ಪರ್ಧಾಭಾವದಿಂದ ಎಲ್ಲರೂ ಎದ್ದು ನಿಂತರು.

No comments:

Post a Comment

ಗೋ-ಕುಲ Go-Kula