Monday, 5 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 123 - 129

 ಕೇಚಿನ್ನಿರೀಕ್ಷ್ಯಧನುರೇತ್ಯ ನ ಮೇ ಸುಶಕ್ಯಮಿತ್ಯೇವ ಚಾಪಯಯುರನ್ಯ ಉತ ಪ್ರಚಾಲ್ಯ ।

ತತ್ರಾsಸಸಾದ ಶಿಶುಪಾಲ ಉರುಪ್ರತಾಪಃ ಸಙ್ಗೃಹ್ಯ ತತ್ ಸಮನುರೋಪಣಯತ್ನ ಆಸೀತ್ ॥೧೯.೧೨೩॥

ಕೆಲಮಂದಿ ಬಿಲ್ಲ ನೋಡಿಯೇ ಇದಾಗದ ಮಾತೆಂದು ಹೊರಟರು ,

ಕೆಲವರು ಅಲ್ಲಾಡಿಸಿ ನೋಡಿ ಏನೂ ಮಾಡಲಾಗದೇ ನಡೆದರು .

ಆಗ ಬಲಶಾಲಿ ಶಿಶುಪಾಲನಿಂದ ಹೆದೆಯೇರೀಸುವ ಯತ್ನ ಜೋರು .

 

ಮಾಷಾನ್ತರಾಯ ಸ ಚಕರ್ಷ ಯದೈವ ಕೋಟ್ಯಾ ಉನ್ನಮ್ಯ ತತ್ ಪ್ರತಿಜಘಾನ ತಮೇವ ಚಾsಶು ।

ಅನ್ಯತ್ರ ಫಲ್ಗುನತ ಏತದಶಕ್ಯಮೇವೇತ್ಯಞ್ಜೋ ಗಿರೀಶವರತಃ ಸ ಯಯೌ ಚ ಭಗ್ನಃ ॥೧೯.೧೨೪॥

ಶಿಶುಪಾಲ ಬಿಲ್ಲನೆತ್ತಿ ಇನ್ನೇನು ಹೆದೆಯೇರಿಸಲು ಇದ್ದದ್ದು ಉದ್ದಿನಕಾಳ ಅಂತರ ,

ಆಗದೇ ಸೆಟೆದು ಹೊಡೆಯಿತು -ಅರ್ಜುನನ ಬಿಟ್ಯಾರಿಗೂ ಅಸಾಧ್ಯವೆಂದು ರುದ್ರವರ.

ಈ ತೆರನಾಗಿ ಸೋತುಹೋದ ಶಿಶುಪಾಲ ಅಲ್ಲಿಂದ ನಿರ್ಗಮನ ಮಾಡಿದ ವ್ಯಾಪಾರ .

 

ಮದ್ರೇಶ ಏತ್ಯ ಚಕೃಷೇ ಸ್ಥವಿರೋsಪಿ ವೀರ್ಯ್ಯಾಚ್ಚೇದೀಶತೋsಪ್ಯಧಿಕಮೇವ ಸ ಮುದ್ಗಮಾತ್ರೇ ।

ಶಿಷ್ಟೇsಮುನಾ ಪ್ರತಿಹತಃ ಸ ಯಯಾವಶಕ್ಯಂ ಮತ್ವಾssತ್ಮನಸ್ತದನು ಭೂಪತಯೋ ವಿಷಣ್ಣಾಃ ॥೧೯.೧೨೫॥

ಮಾದ್ರ ದೇಶದ ರಾಜ ಶಲ್ಯ ಆಗಿದ್ದರೂ ವೃದ್ಧ ,

ವೀರ್ಯ ಪರಾಕ್ರಮದಿಂದ ಬಿಲ್ಲೇರಿಸಲು ಬಂದ .

ಶಿಶುಪಾಲಗೂ ಮಿಗಿಲಾಗಿ ಹೆಸರುಕಾಳ ಅಂತರದವರೆಗೂ ಎಳೆದ ,

ಬಿಲ್ಲು ಸೆಟೆದು ಏಟು ತಿಂದು ಶಲ್ಯರಾಜ ತಾನು  ಹಿಂಬದಿಗೆ ಸರಿದ .

ಇದನ್ನೆಲ್ಲಾ ನೋಡಿದ ಅನೇಕ ರಾಜರುಗಳಿಗೆ ಆವರಿಸಿತು ವಿಷಾದ .

 

ಸನ್ನೇಷು ಭೂಪತಿಷು ಮಾಗಧ ಆಸಸಾದ ಸೋsವಜ್ಞಯೈವ ಬಲವೀರ್ಯ್ಯಮದೇನ ದೃಪ್ತಃ ।

ಚಾಪಂ ಚಕರ್ಷ ಚಲಪಾದತಳೋ ಬಲೇನ ಶಿಷ್ಟೇ ಸ ಸರ್ಷಪಮಿತೇsಭಿಹತೋsಮುನೈವ ॥೧೯.೧೨೬॥

ಹೀಗೆ ಎಲ್ಲಾ ರಾಜರು ಸೋಲಲು ಬಂದ ಜರಾಸಂಧ ,

ಮೊದಲೇ ದರ್ಪ ಉಡಾಫೆಗಳು ತುಂಬಿದ ಮದಾಂಧ .

ಸರಿಯಾಗಿ ಕಾಲೂರಿ ನಿಲ್ಲದೇ ಬಿಲ್ಲನ್ನು ಸೆಳೆದ ,

ಸಾಸಿವೆಯಷ್ಟು ಅಂತರವಿರಲು ಏಟಿಗೆ ಒಳಗಾದ .

 

ಜಾನುನ್ಯಮುಷ್ಯ ಧರಣೀಂ ಯಯತುಸ್ತದೈವ ದರ್ಪ್ಪೇಣ ಚಾಸ್ಥಿರಪದಸ್ಥಿತಿಮಾತ್ರಹೇತೋಃ ।

ರೌದ್ರಾದ್ ವರಾತ್ ಸ ಜಳತಾಂ ಗಮಿತೋsಥ ರಾಜಾ ರಾಜ್ಞಾಂ ಮುಖಾನ್ಯನಭಿವೀಕ್ಷ್ಯ ಯಯೌ ಸ್ವರಾಷ್ಟ್ರಮ್ ॥೧೯.೧೨೭॥

ದರ್ಪದಿ ಗಟ್ಟಿನಿಲ್ಲದೇ ಮೊಣಕಾಲು ನೆಲಕ್ಕೆ ತಾಗಿ ಬಿದ್ದ ,

ರುದ್ರವರಬಲದ ತಾಕತ್ತಿನೆದುರು ಕುಗ್ಗಿ ನಿಷ್ಕ್ರಿಯನಾದ .

ನಂತರ ಯಾರ ಮುಖವ ನೋಡದೇ ಹೊರಟುಹೋದ .

 

ಪ್ರಾಯೋ ಗತಾಸ್ತಮನು ಭೂಪತಯೋsಥ ಕರ್ಣ್ಣೋ ದುರ್ಯ್ಯೋಧನಾರ್ತ್ಥಮನುಗೃಹ್ಯ ಧನುಶ್ಚಕರ್ಷ ।

ರಾಮಾದುಪಾತ್ತಶುಭಶಿಕ್ಷಿತಮಾತ್ರತೋsಸೌ ರೋಮಾವಶಿಷ್ಟಮಕರೋದ್ ಧನುಷೋsನ್ತಮಾಶು ॥೧೯.೧೨೮॥

ಜರಾಸಂಧನ ಅನುಸರಿಸಿತು ಹೆಚ್ಚಿನ ರಾಜರ ಪಡೆ ,

ಕರ್ಣನಿಂದ ದುರ್ಯೋಧನನಿಗಾಗಿ ಬಿಲ್ಲಸೆಳೆವ ನಡೆ .

ಪರಶುರಾಮರ ಶಿಕ್ಷಣದ ಪ್ರಭಾವದಿಂದ ,

ಕೂದಲೆಳೆ ಅಂತರದವರೆಗೂ ಬಿಲ್ಲ ಸೆಳೆದ .

 

ತಸ್ಮಿಂಶ್ಚ ತೇನ ವಿಹತೇ ಪ್ರತಿಸನ್ನಿವೃತ್ತೇ ಭೀಮಾರ್ಜ್ಜುನೌ ದ್ವಿಜಸದಸ್ಯುಪಸನ್ನಿವಿಷ್ಟೌ ।

ಉತ್ತಸ್ಥತೂ ರವಿಶಶಿಪ್ರತಿಮಾನರೂಪೌ ವಿಪ್ರೇಷು ತತ್ರ ಚ ಭಿಯಾ ವಿನಿವಾರಯತ್ಸು ॥೧೯.೧೨೯॥

ಕರ್ಣನೂ ಬಿಲ್ಲೇಟನ್ನು ತಿಂದು ಹಿಂತಿರುಗಲು ಆಗ ,

ವಿಪ್ರರ ಮಧ್ಯ ಭೀಮಾರ್ಜುನರು ಹೊಳೆಯುತಿದ್ದರಾಗ .

ವಿಪ್ರತಡೆಯಿದ್ದರೂ ಸೂರ್ಯಚಂದ್ರರಂತೆ ಎದ್ದರಾಗ .

No comments:

Post a Comment

ಗೋ-ಕುಲ Go-Kula