Sunday 18 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 183 - 187

 ಕುನ್ತಿ ಪ್ರಯಾಹಿ ಸಹಿತಾ ಸ್ನುಷಯಾ ಗೃಹಂ ಸ್ವಂ ಭೀಮಾದ್ ಬಿಭೇಮಿ ನಿಜಪುತ್ರಕದುರ್ವಿನೀತ್ಯಾ ।

ಕೃಷ್ಣಾತ್ರಿಲೋಕವನಿತಾಧಿಕರೂಪಸಾರಾ ಯಸ್ಮಾದಿತಿ ಸ್ಮ ಸಸುತಾ ಪ್ರಯಯೌ ಗೃಹಂ ಸಾ ॥೧೯.೧೮೨॥

ಓ ಕುಂತಿಯೇ, ನಿನ್ನ ಸೊಸೆಯೊಂದಿಗೆ ನಿನ್ನ ಅರಮನೆಗೆ ತೆರಳು,

ದ್ರೌಪದಿ ಮೂರ್ಲೋಕದಲ್ಲೇ ಎದ್ದುಕಾಣುವ ರೂಪರಾಶಿ ಕೇಳು

ಮೊದಲೇ ನನ್ನ ಮಗ ದುರ್ನೀತಿಯ ಲಂಪಟ,

ನನಗಾವರಿಸಿದೆ ಭೀಮಪ್ರತಿಕ್ರಿಯೆಯ ಆತಂಕ  ಭಯದಕಾಟ.

ಕೇಳಿದ ಕುಂತಿ ಮಕ್ಕಳೊಡನೆ ಹೊರಟಳು ತನ್ನ ಪತಿ ಮನೆಯತ್ತ.

 

ಊಷುಸ್ತಥೈವ ಪರಿವತ್ಸರಪಞ್ಚಕಂ ತೇ ಪಾಣ್ಡೋರ್ಗ್ಗೃಹೇ ಸುಸುಖಿನೋsಖಿಲಭೋಗಯುಕ್ತಾಃ ।

ಕೃಷ್ಣಾ ಚ ತೇಷು ಪೃಥಗೇವ ಚತುಃಸ್ವರೂಪಾ ರೇಮೇ ತಥೈಕತನುರಪ್ಯಭಿಮಾನಿಭೇದಾತ್ ॥೧೯.೧೮೩॥

ಹೀಗೆ ಪಾಂಡವರದು ತಂದೆಯಾದ ಪಾಂಡುವಿನ ಮನೆಯಲ್ಲಿ ವಾಸ,

ಸುಖ ಭೋಗದಲ್ಲಿ ಕಳೆದದ್ದು ಅವರು ಅಲ್ಲಿ ಸುಮಾರು ಐದು ವರುಷ.

ದ್ರೌಪದೀ ದೇವಿಯಲ್ಲಿ ನಾಕು ಭಿನ್ನ ಸ್ವರೂಪ ದೇವಿಯರ ಕೂಟ,

ಏಕದೇಹವಾದರೂ ಅಭಿಮಾನ ಭೇದದಿಂದ ಪ್ರತೇಕ ದಾಂಪತ್ಯದಾಟ.

 

ಕನ್ಯೈವ ಸಾsಭವದತಃ ಪ್ರತಿವಾಸರಂ ಚ ಜನ್ಮಾಭವದ್ಧ್ಯಭಿಮತೇಃ ಪೃಥಗೇವ ನಾಶಾತ್ ।

ಪ್ರಾಯೋ ಹಿ ನಾಭಿಮತಿನಾಶಮವಾಪ ವಾಣೀ ತಸ್ಮಾನ್ಮರುಚ್ಚ ಸಕಲೇಷ್ವಭಿವಿಷ್ಟ ಆಸೀತ್ ॥೧೯.೧೮೪॥

ಪ್ರತಿದಿನವೂ ಅಭಿಮಾನದ ಮರಣ ಮತ್ತೆ ಜನನ,

ಕಾರಣ ಅವಳು ಕನ್ಯೆಯಾಗಿರುತ್ತಿದ್ದಳು ಅನುದಿನ.

ಭಾರತೀದೇವಿಗಿಲ್ಲ ಬಹುತೇಕ ಸಮಯದಲ್ಲಿ ಅಭಿಮಾನದ ನಾಶ,

ಹಾಗಿದ್ದರೂ ಲೇಪವಿಲ್ಲ ಇಂದ್ರ ಯಮಾದಿಗಳಿಗೆ ಅವಳ ಸಂಗದೋಷ.

ಉಳಿದ ನಾಲ್ವರು ಪಾಂಡವರಲ್ಲೂ ಇದ್ದೇ ಇದೆ ಮುಖ್ಯಪ್ರಾಣನ ಆವೇಶ.

 

ಧರ್ಮ್ಮಾತ್ಮಜಾದಿಷು ಮರುತ್ ಪ್ರತಿವಿಷ್ಟ ಏಷಾಂ ಬುದ್ಧಿಂ ವಿಮೋಹ್ಯ ರಮತೇ ಸತತಂ ತಯಾ ಯತ್ ।

ಶುದ್ಧೈವ ಸಾ ಹಿ ತತ ಏವ ದಿನೇದಿನೇ ಚ ಸಮ್ಮೋಹತೋ ಮರಣವದ್ ಭವತೀಹ ಕನ್ಯಾ ॥೧೯.೧೮೫॥

ಧರ್ಮರಾಜ ಮೊದಲಾದವರಲ್ಲಿ ಪ್ರವೇಶಿಸಿದ ಮುಖ್ಯಪ್ರಾಣ,

ಅವರನ್ನು ತನ್ನಂಕೆಲ್ಲಿರಿಸಿ ಮಾಡುತ್ತಿದ್ದವರ ಮಾಯಾಧೀನ.

ಆಗ ಮುಖ್ಯಪ್ರಾಣನದು ಭಾರತಿಯೊಂದಿಗೆ ರಮಣಕ್ರೀಡೆ,

ಮೋಹರಹಿತ ಸಾವಿನ ಸ್ಥಿತಿಯಿಂದ ಶಾಶ್ವತ ಕನ್ಯತ್ವಕ್ಕಿಲ್ಲ ತಡೆ.

 

ನೋಸುಪ್ತಿವತ್ ತ್ವಿದಮತೋsನ್ಯವಶತ್ವತೋ ಹಿ ದೇಹಸ್ಯ ಸಂಸ್ಮೃತಿತ ಏವ ಹರೇರ್ನ್ನ ಮೋಹಃ ।

ನಾsವೇಶವಚ್ಚ ತತ ಏವ ಮೃತೇಃ ಸ್ವರೂಪಮೇತತ್ ತ್ವತಃ ಪ್ರತಿದಿನಂ ಜನನಾದ್ಧಿ ಕನ್ಯಾ ॥೧೯.೧೮೬॥

ಈ ಕ್ರಿಯೆ ಸುಪ್ತಿಯಲ್ಲ ಯಾಕೆಂದರೆ ದೇಹವಾಗುತ್ತಿತ್ತು ಅನ್ಯರ ವಶ,

ಮೋಹವೂ ಅಲ್ಲ-ನಿಲ್ಲದ ಭಗವತ್ಸ್ಮರಣೆ ಇದ್ದು ಇರದ ಆವೇಶ.

ಬೇರಾವುದೂ ಅಲ್ಲದ ಒಂದು ರೀತಿಯ ಮರಣ,

ಪ್ರತಿದಿನದ ಹೊಸಹುಟ್ಟು -ಕನ್ಯತ್ವಕ್ಕದು ಕಾರಣ.

 

ಏವಂ ಸ ವಾಯುರನುವಿಷ್ಟಯುಧಿಷ್ಠಿರಾದಿಭೀಮಾತ್ಮನೈವ ರಮತೇ ಸತತಂ ತಯೈಕಃ ।

ಅನ್ಯಾದೃಶಾ ಹಿ ಸುರಭುಕ್ತಿರತೋsನ್ಯರೂಪಾ ಮಾನುಷ್ಯಭುಕ್ತಿರಿತಿ ನಾತ್ರ ವಿಚಾರ್ಯ್ಯಮಸ್ತಿ ॥೧೯.೧೮೭॥

ಹೀಗೆ ಮುಖ್ಯಪ್ರಾಣನದು ಯುಧಿಷ್ಠಿರ ಮೊದಲಾದವರಲ್ಲಿ ಪ್ರವೇಶ,

ನಿರಂತರ ಕ್ರೀಡೆ ನಡೆಸುತ್ತಿದ್ದದ್ದು ಅದು ದೇವಗುಹ್ಯದ ಒಂದು ವಿಶೇಷ.

ಬೇರೆಯೇ ಅದು ದೇವತಾಕ್ರೀಡೆ ಮತ್ತು ಸಂಪರ್ಕ,

ಮಾನುಷ ಸಂಭೋಗ ಯೋಚನೆಗೆಟುಕದ ತರ್ಕ.

ಇಲ್ಲಿ ಬೇಕಾಗಿಲ್ಲ ಹೆಚ್ಚಿನ ತರ್ಕವಿಚಾರ,

ಅದು ಮನಕ್ಕೆಟುಕದ ದೈವೀವ್ಯಾಪಾರ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula