ಅಗ್ರೇsಶ್ವಿಪುತ್ರಸಹಿತಃ ಸ ತು ಧರ್ಮ್ಮಸೂನುಃ ಪ್ರಾಯಾತ್ ಕುಲಾಲಗೃಹಮನ್ವಪಿ ಭೀಮಪಾರ್ತ್ಥೌ ।
ಭಿಕ್ಷೇತಿ ತೈರಭಿಹಿತೇ
ಪ್ರಜಗಾದ ಕುನ್ತೀ ಭುಙ್ಗ್ಧ್ವಂ ಸಮಸ್ತಶ ಇತಿ ಪ್ರ ದದರ್ಶ ಕನ್ಯಾಮ್ ॥೧೯.೧೪೨॥
ಧರ್ಮರಾಜ ನಕುಲ ಸಹದೇವರು ಮೊದಲು ಮನೆ ತಲುಪಿದರು ,
ಹಿಂದೆಯೇ ಭೀಮಾರ್ಜುನರು (ದ್ರೌಪದಿ ಕೂಡಾ )ಮನೆಗೆಬಂದರು .
ಅವರೆಲ್ಲರಿಂದ 'ಅಮ್ಮಾ ಭಿಕ್ಷೆ' ಅಂತ ಹೇಳಲ್ಪಡಲು ,
' ಎಲ್ಲರೂ ಸ್ವೀಕರಿಸಿ
' ಅಂತ ಕುಂತಿ
ಹೇಳಿದಳು ,
ಹಾಗಂದ ಮೇಲೆ ದ್ರೌಪದಿಯನ್ನು ನೋಡಿದಳು .
ಪ್ರಾಮಾದಿಕಂ ಚ ವಚನಂ ನ
ಮೃಷಾ ತಯೋಕ್ತಂ ಪ್ರಾಯೋ ಹಿ ತೇನ ಕಥಮೇತದಿತಿ ಸ್ಮ ಚಿನ್ತಾ ।
ತೇಷಾಂ ಬಭೂವ
ವಸುದೇವಸುತೋ ಹರಿಶ್ಚ ತತ್ರಾsಜಗಾಮ
ಪರಮೇಣ ಹಿ ಸೌಹೃದೇನ ॥೧೯.೧೪೩॥
ಕುಂತಿ ಪ್ರಮಾದದಿಂದ ಆಡಿದ ಆ ನುಡಿ ಸುಳ್ಳಾಗದು ,
ಹಾಗಾದರೆ ಅದು ನಡೆದು ಸತ್ಯವಾಗುವ ಬಗೆ ಯಾವುದು.
ಅದೇ ಸಮಯದಿ ಸ್ನೇಹದಿಂದ ಕೃಷ್ಣನ ಆಗಮನ ಆಗುವುದು.
ಸಮ್ಭಾಷ್ಯ ತೈಃ ಸ
ಭಗವಾನಮಿತಾತ್ಮಶಕ್ತಿಃ ಪ್ರಾಯಾನ್ನಿಜಾಂ ಪುರಮಮಾ ಯದುಭಿಃ ಸಮಸ್ತೈಃ ।
ಜ್ಞಾತುಂ ಚ ತಾನ್ ನಿಶಿ
ಸ ತು ದ್ರುಪದಃ ಸ್ವಪುತ್ರಂ ಪ್ರಾಸ್ಥಾಪಯತ್ ಸ ಚ ವಿಲೀನ ಇಮಾನಪಶ್ಯತ್ ॥೧೯.೧೪೪॥
ಕೊನೆಯಿರದ ಬಲದ ಗುಣಸಾಗರನಾದ ಕೃಷ್ಣ ಪಾಂಡವರೊಂದಿಗೆ ಮಾತಾಡಿದ ,
ತನ್ನ ಜನ ಯಾದವರ ಕೂಡಿಕೊಂಡವನಾಗಿ ತನ್ನ ಪಟ್ಟಣಕ್ಕೆ ಹಿಂತಿರುಗಿದ .
ಆ ಬ್ರಾಹ್ಮಣರು ಯಾರೆಂದು ತಿಳಿಯಲು ದ್ರುಪದ ,
ತನ್ನ ಮಗ ಧೃಷ್ಟದ್ಯುಮ್ನನನ್ನು ಅವರ ಬಳಿ ಕಳಿಸಿದ .
ಅವನು ಮರೆಯಲ್ಲಿದ್ದು ಅವರನ್ನೆಲ್ಲ ವೀಕ್ಷಿಸಿದ .
ಭಿಕ್ಷಾನ್ನಭೋಜಿನ ಉತೋ
ಭಗಿನೀಂ ನಿಜಾಂ ಚ ತತ್ರಾತಿತೃಪ್ತಹೃದಯಾಮಥ ಯುದ್ಧವಾರ್ತ್ತಾಮ್ ।
ತೇಷಾಂ ನಿಶಮ್ಯ ನದತಾಂ
ಘನವದ್ ಗಭೀರಾಂ ಕ್ಷತ್ರೋತ್ತಮಾ ಇತಿ ಮತಿಂ ಸ ಚಕಾರ ವೀರಃ ॥೧೯.೧೪೫॥
ಭಿಕ್ಷಾನ್ನ ಸ್ವೀಕಾರ ಮಾಡುವವರ ನೋಡಿದ ,
ತೃಪ್ತಳಾಗಿರುವ ದ್ರೌಪದಿಯನ್ನೂ ನೋಡಿದ .
ಗುಡುಗಿನಂತೆ ಗಂಭೀರ ಧ್ವನಿಯ ಮಾತ ಕೇಳಿದ ,
ಇವರು ಉತ್ತಮ ಕ್ಷತ್ರಿಯರೆಂದು ನಿಶ್ಚಯ ಮಾಡಿದ .
ಪ್ರಾತಸ್ತು ತಸ್ಯ
ಜನಿತುರ್ವಚಸಾ ಪುರೋಧಾಸ್ತಾನ್ ಪ್ರಾಪ್ಯ ಮನ್ತ್ರವಿಧಿನಾ ಮರುದಾತ್ಮಜೇನ ।
ಸಮ್ಪೂಜಿತೋsತಿವಿದುಷಾ ಪ್ರತಿಗೃಹ್ಯಁ ತಾಂಶ್ಚ ಪ್ರಾವೇಶಯನ್ನೃಪತಿಗೇಹಮಮೈವ ಮಾತ್ರಾ ॥೧೯.೧೪೬॥
ಮರು ಬೆಳಿಗ್ಗೆ ಧೃಷ್ಟದ್ಯುಮ್ನನ ತಂದೆಯಾದ ದ್ರುಪದ ,
ಪುರೋಹಿತರನ್ನು ಪಾಂಡವರಿದ್ದಲ್ಲಿಗೆ ಕಳುಹಿಸಿದ .
ಆತ ಮಹಾಜ್ಞಾನಿ ಭೀಮನಿಂದ ಸತ್ಕೃತನಾದವನಾದ ,
ಅವರೆಲ್ಲರನ್ನು , ತಾಯಿಯನ್ನು ಅರಮನೆ
ಸೇರಿಸಿದ .
ತಾನಾಗತಾನ್ ಸಮಭಿಪೂಜ್ಯ
ನಿಜಾತ್ಮಜಾಂ ಚ ವಿಪ್ರಾದಿಯೋಗ್ಯಪೃಥಗುಕ್ತಪದಾರ್ತ್ಥಜಾತೈಃ ।
ಪೂರ್ಣ್ಣಾನ್
ಗೃಹಾಂಶ್ಚತುರ ಏವ ದಿದೇಶ ರಾಜಾ ತತ್ರಾsಯುಧಾದಿಪರಿಪೂರ್ಣ್ಣಗೃಹಂ ಚ ತೇsಗುಃ ॥೧೯.೧೪೭॥
ಬಂದವರನ್ನು ತನ್ನ ಮಗಳನ್ನು ಸತ್ಕರಿಸಿದ ದ್ರುಪದ,
ನಾಕುವರ್ಣಯೋಗ್ಯ ಸಿದ್ಧ ಮನೆಗಳವರಿಗೆ ತೋರಿಸಿದ.
ಆಯುಧ ತುಂಬಿದ ಕ್ಷತ್ರಿಯ ಯೋಗ್ಯವಾದ ಮನೆ,
No comments:
Post a Comment
ಗೋ-ಕುಲ Go-Kula