Sunday 4 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 113- 117

 ಪಾರ್ತ್ಥೇನ ಸನ್ಧರ್ಷಿತಃ ಶರಣಂ ಜಗಾಮ ಧರ್ಮ್ಮಾತ್ಮಜಂ ತಮಪಿ ಸೋsಥ ನಿಜಾಸ್ತ್ರಮುಗ್ರಮ್ ।

ಸಞ್ಜಹ್ರ ಏವ ತತ ಆಸ ಚ ನಾಮತೋsಸಾವಙ್ಗಾರವರ್ಣ್ಣ ಇತಿ ವರ್ಣ್ಣವಿಪರ್ಯ್ಯಯೇಣ ॥೧೯.೧೧೩॥

ಪಾರ್ಥನಿಂದ ಸೋತು ಶಿಕ್ಷೆಗೊಳಗಾದ ಚಿತ್ರಸೇನ ಗಂಧರ್ವ ,

ಧರ್ಮರಾಜನಲ್ಲಿ ಶರಣಾಗಿ ಬಂದನವ ತಗ್ಗಿದಮೇಲೆ ಗರ್ವ .

ಆಗ ಅರ್ಜುನ ಮಾಡಿದ ತಾ ಬಿಟ್ಟ ಆಗ್ನೇಯಾಸ್ತ್ರದ ಉಪಸಂಹಾರ .

ಈ ಘಟನೆಯಿಂದ ಬದಲಾಯಿತವನ ಮೈಬಣ್ಣ ,

ಅಂದಿನಿಂದಾಯಿತವನ ಹೆಸರು ಅಂಗಾರವರ್ಣ .

 

ಗನ್ಧರ್ವ ಉಲ್ಬಣಸುರಕ್ತತನುಃ ಸ ಭೂತ್ವಾ ಸ್ವರ್ಣ್ಣಾವದಾತ ಉತ ಪೂರ್ವಮುಪೇತ್ಯ ಸಖ್ಯಮ್ ।

ಪಾರ್ತ್ಥೇನ ದುರ್ಲ್ಲಭಮಹಾಸ್ತ್ರಮಿದಂ ಯಯಾಚೇ ಜಾನನ್ನಪಿ ಸ್ಮ ನಹಿ ತಾದೃಶಮೇಷ ವೇದ ॥೧೯.೧೧೪ ॥

ಗಂಧರ್ವಗೆ ಮೊದಲಿದ್ದದ್ದು ಬಂಗಾರದ ಬಣ್ಣ ,

ಬೆಂಕಿಗೆ ಸುಟ್ಟಿದ್ದರಿಂದ ಆದದ್ದು ಅದು ಕೆಂಬಣ್ಣ .

ಅರ್ಜುನನ ಸಖ್ಯ ಬೆಳೆಸಿದ ಗಂಧರ್ವ ಬೇಡಿದ ಆಗ್ನೇಯಾಸ್ತ್ರ ,

ಅದವನಲ್ಲಿದ್ದರೂ ಅರ್ಜುನನಂತೆ ತಿಳಿದಿರಲಿಲ್ಲ ಅಸ್ತ್ರತಂತ್ರ .

 

ವಿದ್ಯಾ ಸುಶಿಕ್ಷಿತತಮಾ ಹಿ ಸುರೇಶಸೂನೌ ತಾಮಸ್ಯ ಚಾವದದಸಾವಪಿ ಕಾಲತೋsಸ್ಮೈ ।

ಗನ್ಧರ್ವಗಾಮವದದನ್ವಗದೃಶ್ಯವಿದ್ಯಾಂ ಪಶ್ಚಾದಿತಿ ಸ್ಮ ಪುರುಹೂತಸುತಸ್ಯ ವಾಕ್ಯಾತ್ ॥೧೯.೧೧೫॥

ತನಗೆ ಸಿದ್ಧಿಯಾಗಿದ್ದ ಅಸ್ತ್ರವಿದ್ಯೆಯನ್ನು ಅರ್ಜುನ ,

ಚಿತ್ರಸೇನ ಗಂಧರ್ವಗೆ ತಿಳಿಸಿ ಮಾಡಿದ ಪ್ರದಾನ .

ಗಂಧರ್ವ ಅದೃಶ್ಯವಿದ್ಯೆಯೊಂದಿತ್ತು ಆ ಚಿತ್ರಸೇನನಲ್ಲಿ ,

ಪಾರ್ಥನಿಚ್ಛೆಯಂತೆ ಅದನವನಿಗಿತ್ತ  ಕಾಲಾಂತರದಲ್ಲಿ.

 

ಆಧಿಕ್ಯತಃ ಸ್ವಗತಸಂವಿದ ಏವ ಸಾಮ್ಯೇ ನೈವೇಚ್ಛತಿ ಸ್ಮ ನಿಮಯಂ ಸ ಧನಞ್ಜಯೋsತ್ರ ।

ಧರ್ಮಾರ್ತ್ಥಮೇವ ಸ ತು ತಾಂ ಪರಿದಾಯ ತಸ್ಮೈ ಕಾಲೇನ ಸಂವಿದಮಮುಷ್ಯ ಚ ಧರ್ಮ್ಮತೋsಯಾತ್ ॥೧೯.೧೧೬॥

ಅರ್ಜುನನಲ್ಲಾಗಲೇ ಇತ್ತು ವಿದ್ಯೆ ಜ್ಞಾನದ ಆಧಿಕ್ಯ ,

ವಿದ್ಯಾವಿನಿಮಯ ಕೂಡಾ ಆಗಿರಲಿಲ್ಲ ಅಲ್ಲಿ ಶಕ್ಯ .

ಸೌಜನ್ಯ ಮತ್ತು ಗಂಧರ್ವಗೆ ತಂದುಕೊಡಲು ಪುಣ್ಯ ,

ಮುಂದೆ ಧರ್ಮದಿ ಗಂಧರ್ವವಿದ್ಯೆ ಪಡೆದ ಕಾರಣ .

 

ಪಾರ್ತ್ಥೇನ ಸೋsಪಿ ಬಹುಲಾಶ್ಚ ಕಥಾಃ ಕಥಿತ್ವಾ ಧೌಮ್ಯಸ್ಯ ಸಙ್ಗ್ರಹಣಮಾಹ ಪುರೋಹಿತತ್ವೇ ।

ದಾಸ್ಯಾಮಿ ದಿವ್ಯತುರಗಾನಿತಿ ಸೋsರ್ಜ್ಜುನಾಯಾ ವಾಚಂ ನಿಗದ್ಯ ದಿವಮಾರುಹದಪ್ಯಗುಸ್ತೇ ॥೧೯.೧೧೭॥

ಹೀಗೆ ಅರ್ಜುನನೊಂದಿಗೆ ಗೆಳೆತನ ಬೆಳೆಸಿದ ಗಂಧರ್ವ ಚಿತ್ರಸೇನ ,

ಕಥೆಗಳಿಂದ ಹೇಳಿದ ಧೌಮ್ಯರ ಪೌರೋಹಿತ್ಯ ಹೊಂದುವ ಕಾರಣ .

ಅರ್ಜುನನಿಗಾಗಿ ದೇವಲೋಕದ ಕುದುರೆಗಳ ಕೊಡುಗೆ ,

ಕೊಡುವೆನೆಂದ ಗಂಧರ್ವ ಹಾರಿದ ಅಂತರಿಕ್ಷದ ಕಡೆಗೆ .

ಆನಂತರ ಪ್ರಾರಂಭ ಪಾಂಡವರ ಮುಂದಿನ ನಡಿಗೆ .

No comments:

Post a Comment

ಗೋ-ಕುಲ Go-Kula