Friday 9 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 148 152

 ಚೇಷ್ಟಾಸ್ವರಾಕೃತಿವಿವಕ್ಷಿತವೀರ್ಯ್ಯಶೌರ್ಯ್ಯಪ್ರಾಗಲ್ಬ್ಯಪೂರ್ವಕಗುಣೈಃ ಕ್ಷಿತಿಭರ್ತ್ತೃಪುತ್ರಾನ್ ।

ವಿಜ್ಞಾಯ ತಾನ್ ದ್ರುಪದ ಏತ್ಯ ಚ ಧರ್ಮ್ಮಸೂನುಂ ಪಪ್ರಚ್ಛ ಕೋsಸಿ ನರವರ್ಯ್ಯ ವದಸ್ವಸತ್ಯಮ್ ॥೧೯.೧೪೮॥

ಅವರ ಶರೀರ ಆಕಾರ,ಶಾರೀರ ಕ್ರಿಯೆ,ಮಾತು , ವೀರ್ಯ,ಶೌರ್ಯ,ಪ್ರೌಢ ಗುಣಗಳಿಂದ ,

ಇವರು ಕ್ಷತ್ರಿಯೋತ್ತಮರ ಮಕ್ಕಳೇ ಎಂಬ ತೀರ್ಮಾನಕ್ಕೆ ದ್ರುಪದರಾಜ ಬಂದ .

ಧರ್ಮರಾಜನ ಬಳಿಬಂದು ಮನುಷ್ಯೋತ್ತಮಾ ಯಾರು ನೀನು ಸತ್ಯ ಹೇಳೆoದ .

 

ಸ ಪ್ರಾಹ ಮನ್ದಹಸಿತಃ ಕಿಮಿಹಾದ್ಯ ರಾಜನ್ ಪೂರ್ವಂ ಹಿ ವರ್ಣ್ಣವಿಷಯೇ ನ ವಿಶೇಷ ಉಕ್ತಃ ।

ಪುತ್ರೀಕೃತೇ ತವ ಸುತೇನ ತು ಲಕ್ಷವೇಧ ಉಕ್ತೋ ನರೇನ್ದ್ರಸಮಿತೌ ಸ ಕೃತೋsಪ್ಯನೇನ ॥೧೯.೧೪೯॥

ಧರ್ಮರಾಜ ನಸುನಗುತ್ತಾ ನುಡಿದ ,

ಪ್ರಯೋಜನವೇನು ಈಗ ಅದರಿಂದ .

ನಿನ್ನ ಮಗಳ ಸ್ವಯಂವರದಲ್ಲಿರಲಿಲ್ಲ ವರ್ಣ ನೀತಿ ,

ಅಲ್ಲಿ ಹೇಳಿದ್ದಿಷ್ಟೆ -ಲಕ್ಷ್ಯವೇಧ ಮಾಡುವ ಸ್ಥಿತಿ ಗತಿ .

ಅದು ಇವನಿಂದ ಮಾಡಿ ಸಾಧಿಸಲ್ಪಟ್ಟಿದೆ ಅದೇ ರೀತಿ .

 

ಏವಂ ಬ್ರುವಾಣಮಥ ತಂ ಪೃಥಯಾ ಸಹೈವ ರಾಜಾ ವದೇತಿ ಪುನರೇವ ಯಯಾಚ ಏಷಃ ।

ಸರ್ವಂ ಪೃಥಾsಪ್ಯವದತಾಂ ಸ ಚ ತೇನ ತುಷ್ಟೋ ವಾಚಂ ಜಗಾದ ಕೃತಕೃತ್ಯ ಇಹಾsಸಮದ್ಯ ॥೧೯.೧೫೦॥

ಹೀಗೆ ಹೇಳಿದ ಧರ್ಮರಾಜನ ಮತ್ತೆ ಕೇಳಿದ ದ್ರುಪದ ,

ಕುಂತಿಯ ಧರ್ಮನ ಬಾರಿ ಬಾರಿ ಕೇಳಿ ಸತ್ಯ ಬೇಡಿದ .

ಆಗವರು ತಿಳಿಸಿಕೊಟ್ಟರು ಎಲ್ಲಾ ಸಂಗತಿಗಳ ವಿವರ ,

ದ್ರುಪದನೆಂದ-ಸಾರ್ಥಕವಾಯಿತೆನ್ನ ಕನ್ಯಾದಾನಕಾರ್ಯ.

 

ಪಾರ್ತ್ಥಾರ್ತ್ಥಮೇವ ಹಿ ಮಯೈಷ ಕೃತಃ ಪ್ರಯತ್ನಸ್ತ್ವಂ ಫಲ್ಗುನೋsನ್ಯ ಉತವಾsದ್ಯ ಕರಂ ಸುತಾಯಾಃ ।

ಗೃಹ್ಣಾತ್ವಿತೀರಿತ ಇಮಂ ಸ ತು ಧರ್ಮ್ಮಸೂನುರಾಹ ಸ್ಮ ಸರ್ವ ಇತಿ ಮೇ ಮನಸಿ ಪ್ರರೂಢಮ್ ॥೧೯.೧೫೧॥

ದ್ರುಪದನೆಂದ -ನನ್ನ ಮಗಳಿಗಾಗಿ ಮೊದಲು ನನ್ನ ದೃಷ್ಟಿಯಲ್ಲಿದ್ದದ್ದು ಕೇವಲ ಅರ್ಜುನ ,

ಈಗ ನಿಮ್ಮಲ್ಲಿ ಯಾರವಳ ಮದುವೆಯಾದರೂ ಕೂಡಾ ನಮಗಿದೆ ಒಪ್ಪಿಗೆ ಸಮಾಧಾನ .

ಧರ್ಮರಾಜನೆಂದ ನನ್ನ ಸಂಕಲ್ಪ ಹೀಗಿದೆ - ಎಲ್ಲರೂ ಅವಳ ಮದುವೆಮಾಡಿಕೊಳ್ಳೋಣ .


 

ನಾತ್ರ ಪ್ರಮಾ ಮಮ ಹೃದಿ ಪ್ರತಿಭಾತ್ಯಥಾಪಿ ಧರ್ಮ್ಮಾಚಲಾ ಮಮ ಮತಿರ್ಹಿ ತದೇವ ಮಾನಮ್ ।

ಇತ್ಯುಕ್ತವತ್ಯಪಿ ಸಹೈವ ಸುತೇನ ರಾಜಾ ನೈವೈಚ್ಛದತ್ರ ಭಗವಾನಗಮಚ್ಚ ಕೃಷ್ಣಃ ॥೧೯.೧೫೨॥

ಧರ್ಮರಾಜ ಹೇಳುವ -ಈ ವಿಚಾರದಲ್ಲಿ ನನ್ನೆದೆಯಲ್ಲಿಲ್ಲ ಯಾವುದೇ ಪ್ರಮಾಣ ,

ನಾನು ನನ್ನಬುದ್ಧಿ ಧರ್ಮಮಾರ್ಗದಲ್ಲಿರುವುದೇ ಒಂದು ಬಲವಾದ ಪ್ರಮಾಣ .

ಈ ವಿಚಾರವನ್ನು ಒಪ್ಪಲಿಲ್ಲ ದ್ರುಪದ ಮತ್ತು ಧೃಷ್ಟದ್ಯುಮ್ನ,

ಆಗಾಯಿತು ಅಲ್ಲಿಗೆ ಗುಣಸಂಪನ್ನ ವೇದವ್ಯಾಸರ ಆಗಮನ.

No comments:

Post a Comment

ಗೋ-ಕುಲ Go-Kula