Sunday 18 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 179 - 182

 ತತ್ಕಾಲ ಏವ ವಸುದೇವಸುತಶ್ಚ ಕೃಷ್ಣೋ ವ್ಯಾಸಶ್ಚ ತಾನುಪಸಮೇತ್ಯ ದುರನ್ತಶಕ್ತೀ ।

ಆದಾಯ ಕುನ್ತಿಸಹಿತಾನ್ ವಿದುರೇಣ ಯುಕ್ತೌ ನಾಗಾಹ್ವಯಂ ಪುರಮಿತಾಂ ಸಹ ಭಾರ್ಯ್ಯಯೈವ ॥೧೯.೧೭೯॥

ಆ ಸಮಯದಲ್ಲೇ ಅನಂತಶಕ್ತಿಯ ವಸುದೇವ ಪುತ್ರ ಕೃಷ್ಣ ,

ವೇದವ್ಯಾಸರು, ಕುಂತಿ ಪಾಂಡವರು ವಿದುರನ ಸೇರೋಣ ,

ಎಲ್ಲ ಸೇರಿ ಕೃಷ್ಣೆಯೊಡನೆ ಸೇರಿದರು ಹಸ್ತಿನಪುರ ಪಟ್ಟಣ . 

 

ತೇಷ್ವಾಗತೇಷು ಸುಮಹಾನಭವತ್ ಪ್ರಹರ್ಷಃ ಪೌರಸ್ಯ ಜಾನಪದಿಕಸ್ಯ ಜನಸ್ಯ ಚೋಚ್ಚೈಃ ।

ಭೀಷ್ಮಾದಿಕಾಶ್ಚ ಮುದಿತಾಃ ಪ್ರತಿಪೂಜ್ಯ ಗೇಹಮಾವೇಶಯನ್ ಸಹ ನೃಪೇಣ ಮಹೋತ್ಸವೇನ ॥೧೯.೧೮೦॥

ಪಾಂಡವರು ಬರುತ್ತಿರಲು ಪಟ್ಟಣವಾಸಿಗರಿಗೆ ಹಳ್ಳಿಗರಿಗೆ ಎಲ್ಲರಿಗೆ ಆಯಿತು ಸಂತೋಷ ,

ಧೃತರಾಷ್ಟ್ರ ಭೀಷ್ಮಾದಿಗಳಿಗೆ ವಂದಿಸಿ ಉತ್ಸವದಿ ಪಾಂಡವರು ಮಾಡಿದರು ಅರಮನೆ ಪ್ರವೇಶ .

 

ಕೃಷ್ಣಾಮಪೂಜಯದತೀವ ಚ ಸೌಬಲೀ ಸಾ ದುರ್ಯ್ಯೋಧನಸ್ಯ ದಯಿತಾಸಹಿತಾsತ್ರ ತೇsಪಿ ।

ಊಷುಸ್ತತಶ್ಚ ನಿಜಪುತ್ರಕದುರ್ವಿನೀತ್ಯಾ ಕೃಷ್ಣಾನಿಮಿತ್ತಮುರುಭೀತಿತ ಆಹ  ಭೀಮಾತ್ ॥೧೯.೧೮೧॥

ಸೌಬಲೀ(ಗಾಂಧಾರಿ)ದುರ್ಯೋಧನ ಪತ್ನಿಯಿಂದ,

ದ್ರೌಪದಿಯ ಸತ್ಕಾರವಾಯಿತು ರಾಜವಿಧಿಯಿಂದ .

ನಂತರ ಪಾಂಡವರದು ಧೃತರಾಷ್ಟ್ರನ ಅರಮನೆಯಲ್ಲಿ ವಾಸ ,

ಗಾಂಧಾರಿಗೆ ಕಳವಳ-ದ್ರೌಪದಿ ರೂಪ -ದುರ್ಯೋಧನನ ದೋಷ .

ಕುಂತಿಗೆ ಹೇಳಿಸಿತು ಬರಲಿರುವ ಭೀಮದಂಡನದ ಭಯದ ಪಾಶ.

 

ಕುನ್ತಿ ಪ್ರಯಾಹಿ ಸಹಿತಾ ಸ್ನುಷಯಾ ಗೃಹಂ ಸ್ವಂ ಭೀಮಾದ್ ಬಿಭೇಮಿ ನಿಜಪುತ್ರಕದುರ್ವಿನೀತ್ಯಾ ।

ಕೃಷ್ಣಾತ್ರಿಲೋಕವನಿತಾಧಿಕರೂಪಸಾರಾ ಯಸ್ಮಾದಿತಿ ಸ್ಮ ಸಸುತಾ ಪ್ರಯಯೌ ಗೃಹಂ ಸಾ ॥೧೯.೧೮೨॥

ಓ ಕುಂತಿಯೇ, ನಿನ್ನ ಸೊಸೆಯೊಂದಿಗೆ ನಿನ್ನ ಅರಮನೆಗೆ ತೆರಳು,

ದ್ರೌಪದಿ ಮೂರ್ಲೋಕದಲ್ಲೇ ಎದ್ದುಕಾಣುವ ರೂಪರಾಶಿ ಕೇಳು

ಮೊದಲೇ ನನ್ನ ಮಗ ದುರ್ನೀತಿಯ ಲಂಪಟ,

ನನಗಾವರಿಸಿದೆ ಭೀಮಪ್ರತಿಕ್ರಿಯೆಯ ಆತಂಕ  ಭಯದಕಾಟ.

ಕೇಳಿದ ಕುಂತಿ ಮಕ್ಕಳೊಡನೆ ಹೊರಟಳು ತನ್ನ ಪತಿ ಮನೆಯತ್ತ.

No comments:

Post a Comment

ಗೋ-ಕುಲ Go-Kula