ಉದ್ವಾಹ್ಯ ತತ್ರ ನಿವಸತ್ಸು ಚ ಪಾಣ್ಡವೇಷು ಶ್ರುತ್ವೈವ ರಾಮಸಹಿತಃ ಸಹ ಯಾದವೈಶ್ಚ ।
ಆದಾಯ ಪಾರಿಬರ್ಹಂ ಬಹುಲಂ ಸ ಕೃಷ್ಣ ಆಯಾನ್ಮುದೈವ ಪೃಥಯಾ ಸಹಿತಾಂಶ್ಚ
ಪಾರ್ತ್ಥಾನ್ ॥೧೯.೧೬೦॥
ಮದುವೆಯ ನಂತರ ಪಾಂಡವರು ಮಾವನ ಮನೆಯಲ್ಲಿ ಮಾಡುತ್ತಿದ್ದರು ವಾಸ ,
ಆ ಸುದ್ದಿ ಕೇಳಿದ ಕೃಷ್ಣ ಬಲರಾಮ ಯಾದವರಿಗೆ ಆಯಿತು ಅತ್ಯಂತ ಸಂತಸ .
ಎಲ್ಲರೊಂದಿಗೆ ಕೃಷ್ಣ ಉಡುಗೊರೆ ಕಾಣಿಕೆಗಳೊಂದಿಗೆ ,
ಆನಂದದಿಂದ ಬಂದ ಕುಂತೀಸಮೇತ ಪಾಂಡವರಿದ್ದಲ್ಲಿಗೆ .
ದೃಷ್ಟ್ವೈವ ತಂ
ಮುಮುದುರಾಶು ಕುರುಪ್ರವೀರಾ ಆಶ್ಲಿಷ್ಯ ಕೃಷ್ಣಮಥ ನೇಮುರಸೌ ಚ ಕೃಷ್ಣಾಮ್ ।
ದೃಷ್ಟ್ವಾ ಪ್ರದಾಯ
ಗೃಹಯೋಗ್ಯಸಮಸ್ತಭಾಣ್ಡಂ ಸೌವರ್ಣ್ಣಮೇಭ್ಯ ಉರುಭೂಷಣಮಚ್ಯುತೋsದಾತ್ ॥೧೯.೧೬೧॥
ಕೃಷ್ಣನ ಕಂಡ ಪಾಂಡವರಿಗೆ ಆದ ಸಂತೋಷ ಅಪಾರ ,
ಕೃಷ್ಣನ ಆಲಂಗಿಸಿ ಮಾಡಿದರೆಲ್ಲರೂ ಅವಂಗೆ ನಮಸ್ಕಾರ .
ಕೃಷ್ಣನಿಂದ ದ್ರೌಪದಿಗೆ ಗೃಹೋಪಯೋಗಿ ಸ್ವರ್ಣ ಪಾತ್ರೆಗಳ ಪ್ರದಾನ ,
ಅಷ್ಟಲ್ಲದೇ ಎಲ್ಲರಿಗೂ ನೀಡಿದ ಅನೇಕಾನೇಕ ಬಂಗಾರದ ಆಭರಣ .
ದೇವಾಙ್ಗಯೋಗ್ಯಶುಭಕುಣ್ಡಲಹಾರಮೌಲಿಕೇಯೂರವಸ್ತ್ರಸಹಿತಾನ್ಯುರುಭೂಷಣಾನಿ
।
ಷಣ್ಣಾಂ ಪೃಥಕ್ಪೃಥಗದಾತ್
ಪೃಥಗೇವ ಯೋಗ್ಯಾನ್ಯನ್ಯದ್ ದದಾವಥ ಪಿತೃಷ್ವಸುರಾತ್ಮಯೋಗ್ಯಮ್ ॥೧೯.೧೬೨॥
ದೇವತೆಗಳಿಗೆ ಒಪ್ಪುವಂಥ ಕುಂಡಲ,ಹಾರ,ಕಿರೀಟ,ತೋಳ್ಬಂದಿ, ವಸ್ತ್ರಗಳು,
ಕೃಷ್ಣನಿಂದ ಎಲ್ಲರಿಗೂ ಪ್ರತ್ಯೇಕವಾಗಿ ಕೊಡಲ್ಪಟ್ಟ ವಿಶೇಷ
ಉಡುಗೊರೆಗಳು .
ಸೋದರತ್ತೆ ಕುಂತಿಗೂ ಕೊಡಲ್ಪಟ್ಟವು ಅವಳಿಗೆ ಯೋಗ್ಯವಾದ ಆಭರಣಗಳು .
ರತ್ನಾನಿ ಗಾ
ಗಜತುರಙ್ಗರಥಾನ್ ಸುವರ್ಣ್ಣಭಾರಾನ್ ಬಹೂನಪಿ ದದಾವಥ ಚಾsಶಿಷೋsಗ್ರ್ಯಾಃ
।
ವ್ಯಾಸೋsಪ್ಯದಾದಿಹ ಪರತ್ರ ಚ ಪಾರ್ಷತೋsಪಿ ಭೂಷಾರಥಾಶ್ವಗಜರತ್ನಸುಕಾಞ್ಚನಾನಿ ॥೧೯.೧೬೩॥
ಅಷ್ಟಲ್ಲದೇ ಮತ್ತೆ ಮುತ್ತುರತ್ನ,ಗೋವು,ಆನೆ,ತುರಗ,ರಥಗಳು,
ಬಂಗಾರಗಟ್ಟಿಗಳು ಬಹಳಷ್ಟು ಅನೇಕಾನೇಕ ಉಡುಗೊರೆಗಳು .
ಆನಂತರ ವೇದವ್ಯಾಸರಿಂದ ಎಲ್ಲರಿಗೂ ದಿವ್ಯ ಶುಭಾಶೀರ್ವಾದ ,
ಆಭರಣ,ಕುದುರೆ,ಆನೆ,ರತ್ನ,ಸುವರ್ಣ ಕಾಣಿಕೆ ಕೊಟ್ಟ ದ್ರುಪದ .
ದಾಸೀಶ್ಚ ದಾಸಸಹಿತಾಃ
ಶುಭರೂಪವೇಷಾಃ ಸಾಹಸ್ರಶೋ ದದತುರತ್ರ ಹರಿರ್ನ್ನೃಪಶ್ಚ ।
ತಾಸಾಂ
ವಿಚಿತ್ರವಸನಾನ್ಯುರುರತ್ನಮಾಲಾಃ ಪ್ರತ್ಯೇಕಶೋ ದದತುರಪ್ಯುರುಭೂಷಣಾನಾಮ್ ॥೧೯.೧೬೪॥
ಮಂಗಳವೇಷಭೂಷಣಯುಕ್ತ ಸಾವಿರಾರು ದಾಸ ದಾಸಿಯರು ,
ಭಗವಂತ ಮತ್ತು ದ್ರುಪದರಾಜನಿಂದ ಅವರಿಗೆಲ್ಲ ಕೊಡಲ್ಪಟ್ಟರು.
ವಿಶೇಷವಾದ ಬಟ್ಟೆಬರೆ ರತ್ನದ ಹಾರಗಳು ,
ಪ್ರತ್ಯೇಕ ಇಬ್ಬರಿಂದ ಕೊಡಲ್ಪಟ್ಟ ಕೊಡುಗೆಗಳು.
ಮಾಸಾನ್ ಬಹೂನಪಿ
ವಿಹೃತ್ಯ ಸಹೈವ ಪಾರ್ತ್ಥೈಃ ಕೃಷ್ಣೋ ಯಯೌ ಯದುಪುರೀಂ ಸಹಿತೋsಗ್ರಜೇನ ।
ಅನ್ತರ್ಹಿತೇ ಭಗವತಿ
ಪ್ರತತೋರುಶಕ್ತೌ ವ್ಯಾಸೇ ಚ ವತ್ಸರಮಿಹೋಷುರಿಮೇ ತು ಪಾರ್ತ್ಥಾಃ ॥೧೯.೧೬೫॥
ಕೃಷ್ಣ ಕೆಲತಿಂಗಳು ಪಾಂಡವರೊಂದಿಗೆ ಸಂತಸದಿಂದಿದ್ದ,
ನಂತರ ಬಲರಾಮನೊಂದಿಗೆ ದ್ವಾರಕೆಗೆ ಹಿಂತಿರುಗಿದ.
ಕೃಷ್ಣನ ನಿರ್ಗಮನಾನಂತರ ಸರ್ವಶಕ್ತ ವೇದವ್ಯಾಸರಾದರು ಅದೃಶ್ಯ,
No comments:
Post a Comment
ಗೋ-ಕುಲ Go-Kula