Friday, 30 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 03 -04


ತದ್ವಾಕ್ಯಾತ್ ಕೈಕೇಯೀ ಸಾ ಪತಿಗವರಬಲಾದಾಜಹಾರೈವ ರಾಜ್ಯಂ
ರಾಮಸ್ತದ್ಗೌರವೇಣ ತ್ರಿದಶಮುನಿಕೃತೇsರಣ್ಯಮೇವಾsವಿವೇಶ ।
ಸೀತಾಯುಕ್ತೋsನುಜೇನ ಪ್ರತಿದಿನಸುವಿವೃದ್ಧೋರುಭಕ್ತ್ಯಾಸಮೇತಃ
ಸಂಸ್ಥಾಪ್ಯಾಶೇಷಜನ್ತೂನ್ ಸ್ವವಿರಹಜಶುಚಾ ತ್ಯಕ್ತಸರ್ವೇಷಣಾರ್ಥಾನ್ ॥೫.೦೩॥

ಮಂಥರೆಯ ದುರ್ಬೋಧನೆಯಿಂದ ಕೈಕೇಯಿಯ ಹಳೆಯ ವರಗಳ ಬೇಡಿಕೆ,
ಮರ್ಯಾದಾಪುರುಷೋತ್ತಮ ರಾಮನ ಉದಾರತೆ ದುರ್ಬಳಕೆಯಿಂದ ರಾಜ್ಯ ಕಬಳಿಕೆ.
ಎಲ್ಲರ ಸಮಾಧಾನ ಪಡಿಸಿ ಸೀತಾಲಕ್ಷ್ಮಣ ಸಮೇತ ಕಾಡಿಗೆ ಹೊರಟ ರಾಮ,
ತನ್ನ ವಿಯೋಗದಿಂದ ದುಃಖಿತರಾದರೆಲ್ಲರನ್ನೂ ಸಂತೈಸಿದ ಆನಂದಧಾಮ.

ವೃಕ್ಷಾನ್ ಪಶ್ವಾದಿಕೀಟಾನ್ ಪಿತರಮಥ ಸಖೀನ್ ಮಾತೃಪೂರ್ವಾನ್ ವಿಸೃಜ್ಯ
ಪ್ರೋತ್ಥಾಂ ಗಙ್ಗಾಂ ಸ್ವಪಾದಾದ್ಧರ ಇವ ಗುಹೇನಾರ್ಚಿತಃ ಸೋsಥ ತೀರ್ತ್ ವಾ।
ದೇವಾರ್ಚ್ಯಸ್ಯಾಪಿ ಪುತ್ರಾದೃಷಿಗಣಸಹಿತಾತ್ ಪ್ರಾಪ್ಯಪೂಜಾಂ ಪ್ರಯಾತಃ
ಶೈಲೇಶಂ ಚಿತ್ರಕೂಟಂ ಕತಿಪಯದಿನಾನ್ಯತ್ರ ಮೋದನ್ನುವಾಸ ॥೫.೦೫॥

ತನ್ನನನುಸರಿಸಿದ ಮರ ಪಶುಪಕ್ಷಿ ಆನೆ ಕೀಟ ಹೆತ್ತವರು ಗೆಳೆಯರು ಅಪಾರ,
ಬಿಟ್ಟು ನಡೆದ ರಘುರಾಮ ಎಲ್ಲಾ ಆತ್ಮೀಯರನ್ನೂ ತಮಸಾನದಿಯ ತೀರ.
ದಾರಿಯಲಿ ಗುಹನಿಂದ ಆದ ಶ್ರೀರಾಮ ಪೂಜಿತ,
ಷಣ್ಮುಖನಿಂದ ಕೈಲಾಸಪತಿ ಶಿವ ಆದಂತೆ ಅರ್ಚಿತ.
ದಾಟಿದ ತನ್ನ ಪಾದೋದ್ಭವೆಯಾದ ಗಂಗಾತೀರ,
ಸ್ವೀಕರಿಸಿದ ಭರದ್ವಾಜಾದಿ ಮುನಿಗಳಿಂದ ಸತ್ಕಾರ.
ಸೇರಿ ಚಿತ್ರಕೂಟ ಹೂಡಿದ ಅಲ್ಲಿ ಸಂತಸದಿ ಬಿಡಾರ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 01 - 02

ಇತ್ಥಂ ವಿಶ್ವೇಶ್ವರೇsಸ್ಮಿನ್ನಖಿಲ ಜಗದವಸ್ಥಾಪ್ಯ ಸೀತಾಸಹಾಯೇ
ಭೂಮಿಷ್ಠೇ ಸರ್ವಲೋಕಾಸ್ತುತುಷುರನುದಿನಂ ವೃದ್ಧಭಕ್ತ್ಯಾನಿತಾನ್ತಮ್ ।
ರಾಜಾ ರಾಜ್ಯಾಭಿಷೇಕೇ ಪ್ರಕೃತಿಜನವಚೋ ಮಾನಯನ್ನಾತ್ಮನೋsರ್ಥ್ಯಂ
ದಧ್ರೇ ತನ್ಮನ್ಥರಾಯಾಃ ಶ್ರುತಿಪಥಮಗಮದ್ ಭೂಮಿಗಾಯಾ ಅಲಕ್ಷ್ಮ್ಯಾಃ ॥೫.೦೧॥

ಹೀಗೆ ನಡೆದಿತ್ತು ಅಯೋಧ್ಯೆಯಲ್ಲಿ ಸೀತಾ ರಾಮರ ಸಂಸಾರ,
ಸಜ್ಜನರ ಭಕ್ತರ ಪ್ರಜಾಜನಗಳ ಸಂತಸಪಡಿಸುವ ವ್ಯಾಪಾರ.
ದಶರಥ ಮಾಡಿದ ರಾಮಗೆ ರಾಜ್ಯಾಭಿಷೇಕದ ತೀರ್ಮಾನ,
ಈ ಸುದ್ದಿ ಭುವಿಯಲಿ ಹುಟ್ಟಿದ ಅಲಕ್ಷ್ಮಿ ಕಿವಿಗೆ ಬಿತ್ತು ಆ ಕ್ಷಣ.

ಪೂರ್ವಂ ಕ್ಷೀರಾಬ್ಧಿಜಾತಾ ಕಥಮಪಿ ತಪಸೈವಾಪ್ಸರಸ್ತ್ವಂಪ್ರಯಾತಾ
ತಾಂ ನೇತುಂ ತತ್ತಮೋsನ್ಧಂ ಕಮಲಜನಿರುವಾಚಾsಶು ರಾಮಾಭಿಷೇಕಮ್ ।
ಭೂತ್ವಾ ದಾಸೀ ವಿಲುಮ್ಪ ಸ್ವಗತಿಮಪಿ ತತಃ ಕರ್ಮಣಾ ಪ್ರಾಪ್ಸ್ಯಸೇ ತ್ವಂ
ಸೇತ್ಯುಕ್ತಾ ಮನ್ಥರಾssಸೀತ್ ತದನು ಕೃತವತ್ಯೇವ ಚೈತತ್ ಕುಕರ್ಮ ॥೫.೦೨॥

ಅಲಕ್ಷ್ಮಿ ಮೊದಲಿಗೆ ಕ್ಷೀರಸಮುದ್ರದಿಂದ ಬಂದವಳು,
ತಪಸ್ಸು ಮಾಡಿ ಅಪ್ಸರಾಸ್ತ್ರೀತ್ವವನ್ನು ಹೊಂದಿದವಳು.
ಬ್ರಹ್ಮದೇವಗೆ ಅವಳಿಗೆ ಅರ್ಹ ಗತಿ ಪಾಲಿಸುವ ಉದ್ದೇಶ,
ದಾಸಿಯಾಗಿ ಹುಟ್ಟಿ ರಾಮಾಭಿಷೇಕ ಕೆಡಿಸೆಂಬ ಆದೇಶ.
ಅದರಂತೆ ಅಲಕ್ಷ್ಮಿ ಮಂಥರೆಯಾಗಿ ಬಂದ ಪ್ರಸಂಗ,
ಕುಕೃತ್ಯವೆಸಗಿ ಮಾಡಿದಳು ಪಟ್ಟಾಭಿಷೇಕದ ಭಂಗ.
[Contributed by Shri Govind Magal]

Sunday, 25 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 63 - 65

ತತೋ ನೃಪೋsತ್ಯರ್ಥಮುದಾsಭಿಪೂರಿತಃ ಸುತೈಃ ಸಮಸ್ತೈಸ್ವಪುರೀಮವಾಪ
ರೇಮೇs ರಾಮೋsಪಿ ರಮಾಸ್ವರೂಪಯಾತಯೈವ ರಾಜಾತ್ಮಜಯಾ ಹಿ ಸೀತಯಾ .೬೩

ಯಥಾ ಪುರಾ ಶ್ರೀರಮಣಃ ಶ್ರಿಯಾ ತಯಾ ರತೋ ನಿತಾನ್ತಂ ಹಿ ಪಯೋಬ್ಧಿಮಧ್ಯೇ
ತಥಾ ತ್ವಯೋಧ್ಯಾಪುರಿಗೋ ರಘೂತ್ತಮೋsಪ್ಯುವಾಸ ಕಾಲಂ ಸುಚಿರಂ ರತಸ್ತಯಾ .೬೪

ದಶರಥಗೆ ಒದಗಿದ ವಿಪತ್ತು ಆಗಿತ್ತು ಪರಿಹಾರ,
ಸೇರಿದ ತನ್ನ ಪರಿವಾರದೊಂದಿಗೆ ಅಯೋಧ್ಯಾಪುರ.
ಶುರುವಾಯಿತು ಜಗದ್ ಮಾತಾಪಿತರ ಸಂಸಾರ ,
ರಾಮ ರಮೆಯರ ಸುಖಮಯ  ಕ್ರೀಡಾವಿಹಾರ.
ಲಕ್ಷ್ಮೀರಮಣ ಲಕ್ಷ್ಮಿಯೊಡನೆ ಕ್ಷೀರಸಮುದ್ರದಲ್ಲಿದ್ದಂತೆ,
ಅಯೋಧ್ಯೆಯಲ್ಲಿ ರಮೆಯೊಡನೆ ಬಹುಕಾಲ ಕಳೆದನಂತೆ.

ಇಮಾನಿ ಕರ್ಮಾಣಿ ರಘೂತ್ತಮಸ್ಯ ಹರೇರ್ವಿಚಿತ್ರಾಣ್ಯಪಿ ನಾದ್ಭುತಾನಿ
ದುರನ್ತಶಕ್ತೇರಥ ಚಾಸ್ಯ ವೈಭವಂ ಸ್ವಕೀರ್ಯಕರ್ತವ್ಯತಯಾsನುವರ್ಣ್ಯತೇ .೬೫

ರಾಮನ ಎಲ್ಲಾ ಕಾರ್ಯಗಳೂ ನಮಗೆ ವಿಚಿತ್ರ,
ದೇವರಿಗೆ ಎಲ್ಲವೂ ಕೇವಲ ಲೀಲಾವಿನೋದ ಮಾತ್ರ.
ಎಣೆಯಿರದ ಶಕ್ತಿಯ ನಾರಾಯಣನ ವೈಭವದ ವರ್ಣನೆ,
ಕರ್ತವ್ಯವಿಧಿಯಂತೆ ಕಿಂಚಿತ್ ಭಗವತ್ ಕಥಾ ನಿವೇದನೆ.

 ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯನಿರ್ಣಯೇ ರಾಮಾವತಾರೇ ಅಯೋಧ್ಯಾಪ್ರವೇಶೋ ನಾಮ ಚತುರ್ಥೋsಧ್ಯಾಯಃ

ಶ್ರೀಮದಾನಂದತೀರ್ಥ ಭಗವತ್ ಪಾದರಿಂದ,
ಶ್ರೀಮಹಾಭಾರತ ತಾತ್ಪರ್ಯ ನಿರ್ಣಯ ವಾದ,
ರಾಮಾವತಾರ ಅಯೋಧ್ಯಾಪ್ರವೇಶದ ವಿವರಣ ,
ನಾಕನೆ ಅಧ್ಯಾಯ ರೂಪದಿಂದಾಯ್ತು  ಕೃಷ್ಣಾರ್ಪಣ.
[Contributed by Shri Govind Magal]


ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 55 - 62

ಪುರಾsತುಲೋ ನಾಮ ಮಹಾಸುರೋsಭವದ್ ವರಾತ್ ತು ಬ್ರಹ್ಮಣ ಆಪ ಲೋಕತಾಮ್
ಪುನಶ್ಚ ತಂ ಪ್ರಾಹ ಜಗದ್ಗುರುರ್ಯದಾ ಹರಿರ್ಜಿತಃ ಸ್ಯಾದ್ಧಿ ತದೈವ ವಧ್ಯಸೇ .೫೫

ಹಿಂದೊಬ್ಬನಿದ್ದ ಅತುಲನೆಂಬ ಮಹಾದೈತ್ಯ ,
ಪಡೆದಿದ್ದ ಬ್ರಹ್ಮವರದಿಂದ ಲೋಕಮಯತ್ವ.
ಯಾವಾಗ ಹರಿಯಾಗುವನೋ ಪರಾಜಿತ,
ಕ್ಷಣದಲ್ಲೇ  ಆಗುವ ಅವನು ಮೃತ.

ಅತೋ ವಧಾರ್ಥಂ ಜಗದನ್ತಕಸ್ಯ ಸರ್ವಾಜಿತೋsಹಂ ಜಿತವದ್ ವ್ಯವಸ್ಥಿತಃ
ಇತೀರಿತೇ ಲೋಕಮಯೇ ರಾಘವೋ ಮುಮೋಚ ಬಾಣಂ ಜಗದನ್ತಕೇsಸುರೇ .೫೬

ಆಗಲೇಬೇಕಾಗಿದೆ ಲೋಕಕಂಟಕನ ಕೊನೆ,
ಅದಕ್ಕಾಗಿ ಸೋತಂತೆ ತೋರಿಸಿಕೊಂಡಿದ್ದೇನೆ.
ಪರಶುರಾಮ ರಾಮಗೆ ತಿಳಿಹೇಳಿದ ಪ್ರಸಂಗ,
ರಾಮನಿಂದಾಯ್ತು ಅತುಲನೆಡೆ ಬಾಣಪ್ರಯೋಗ.

ಪುರಾ ವರೋsನೇನ ಶಿವೋಪಲಮ್ಭಿತೋ ಮುಮುಕ್ಷಯಾ ವಿಷ್ಣುತನುಪ್ರವೇಶನಮ್
ತೇನ ರಾಮೋದರಗೋ ಬಹಿರ್ಗತಸ್ತದಾಜ್ಞಯೈವಾsಶು ಬಭೂವ ಭಸ್ಮಸಾತ್ .೫೭

ಮೋಕ್ಷೇಚ್ಛೆಯಿಂದ ವಿಷ್ಣುಶರೀರ ಪ್ರವೇಶಿಸಿದ್ದ ಅತುಲ,
ಶಿವವರದಿಂದ ಪರಶುರಾಮನ ಉದರವಾಗಿತ್ತವನ ಬಿಲ.
ಬರುತಿದೆ ನನ್ನ ಹೊಟ್ಟೆಯತ್ತ ರಾಮಬಾಣ,
ಹೊರಬಂದು ಉಳಿಸಿಕೋ ನಿನ್ನ ಪ್ರಾಣ.
ಭಾರ್ಗವನ ಆಜ್ಞೆಯಂತೆ ಅತುಲ ಹೊರಬಂದ,
ರಾಮಬಾಣಕೆ ಸಿಲುಕಿ ಸುಟ್ಟು ಬೂದಿಯಾದ.

ಇತೀವ ರಾಮಾಯ ರಾಘವಃ ಶರಂ ವಿಕರ್ಷಮಾಣೋ ವಿನಿಹತ್ಯ ಚಾಸುರಮ್
ತಪಸ್ತದೀಯಂ ಪ್ರವದನ್ ಮುಮೋದ ತದೀಯಮೇವ ಹ್ಯಭವತ್ ಸಮಸ್ತಮ್ .೫೮

ಪರಶುರಾಮನಿಗೇ ಎಂಬಂತೆ ಶ್ರೀರಾಮ ಹೂಡಿದ್ದ ಬಾಣ ,
ಎಲ್ಲದರ ಹಿಂದಿನ ಶಕ್ತಿ ಅವನಲ್ಲವೇ ನಾರಾಯಣ.
ರಾಮ ಮಾಡಿದ ಪರಶುರಾಮನ ತಪಸ್ಸು ನಾಶ,
ಎಲ್ಲರಂತರ್ಯಾಮಿಯ ಆಟದ ವಿವಿಧ ವೇಷ.

ನಿರನ್ತರಾನನ್ತವಿಬೋಧಸಾರಃ ಜಾನಮಾನೋsಖಿಲಮಾದಿಪೂರುಷಃ
ವದನ್ ಶೃಣೋತೀವ ವಿನೋದತೋ ಹರಿಃ ಏಕ ಏವ ದ್ವಿತನುರ್ಮುಮೋದ .೫೯

ಅಪರಿಮಿತ ಕುಂದಿಲ್ಲದ ಜ್ಞಾನದ ಆದಿಪುರುಷ,
ಏನಾಶ್ಚರ್ಯ ಧರಿಸಿದ ತಾನೇ ಎರಡೆರಡು ವೇಷ.
ಹೇಳುವವನೂ ಕೇಳುವವನೂ ಎರಡೂ ಒಬ್ಬನೇ,
ಸರ್ವಮೂಲ ಅವನು ಸದಾ ಆನಂದಧಾಮ ತಾನೇ.

ಚೇಷ್ಟಿತಂ ಚೈವ ನಿಜಾಶ್ರಯಸ್ಯ ಜನಸ್ಯ ಸತ್ತತ್ತ್ವವಿಬೋಧಕಾರಣಮ್
ವಿಮೋಹಕಂ ಚಾನ್ಯತಮಸ್ಯ ಕುರ್ವನ್ ಚಿಕ್ರೀಡ ಏಕೋsಪಿ ನರಾನ್ತರೇ ಯಥಾ .೬೦

ಏಕಮೇವ ಭಗವಂತನ ಎರಡು ವೇಷದ ಆಟ,
ಸ್ವಭಾವಕ್ಕನುಸಾರ ಬಡಿಸಿದ ತಕ್ಕ ಜ್ಞಾನದೂಟ.
ಸಜ್ಜನ ಭಕ್ತ ಸಾಧಕರಿಗೆ ನೈಜ ತತ್ವಜ್ಞಾನ,
ದುರ್ಜನ ರಕ್ಕಸರಿಗೆ ಸಂದ ಮಿಥ್ಯಾಜ್ಞಾನ.

ತತಃ ಕಾರುಣ್ಯನಿಧಿರ್ನಿಜೇ ಜನೇ ನಿತಾನ್ತಮೈಕ್ಯಂ ಸ್ವಗತಂ ಪ್ರಕಾಶಯನ್
ದ್ವಿಧೇವ ಭೂತ್ವಾ ಭೃಗುವರ್ಯ ಆತ್ಮನಾ ರಘೂತ್ತಮೇನೈಕ್ಯಮಗಾತ್ ಸಮಕ್ಷಮ್ .೬೧

ಕರುಣೆಯಿಂದ ತನ್ನ ಭಕ್ತರಿಗೆ ಕೊಟ್ಟ ನಿಶ್ಚಯಜ್ಞಾನ,
ಬೇರಾಗಿ ನಿಂತಿದ್ದ ಭಾರ್ಗವ ರಾಮನಲ್ಲಾದ ಲೀನ.

ಸಮೇತ್ಯ ಚೈಕ್ಯಂ ಜಗತೋsಭಿಪಶ್ಯತಃ ಪ್ರಣುದ್ಯಶಙ್ಕಾಮಖಿಲಾಂ ಜನಸ್ಯ
ಪ್ರದಾಯ ರಾಮಾಯ ಧನುರ್ವರಂ ತದಾ ಜಗಾಮ ರಾಮಾನುಮತೋ ರಮಾಪತಿಃ .೬೨

ಜಗ ನೋಡುತ್ತಿರುವಂತೆ ರಾಮನಲ್ಲಿ ಐಕ್ಯವಾದ ಕೊಡಲಿರಾಮ,
ಸಂದೇಹ ಪರಿಹರಿಸಿ ಮತ್ತೆ ಬೇರೆಯಾದಂತೆ ತೋರಿದ ನೇಮ.
ಕೊಡಲಿರಾಮನಿಂದ ರಾಮನಿಗೆ ಧನುಸ್ಸು ಪ್ರದಾನ,
ರಾಮನ ಅನುಮತಿ ಪಡೆದ ಕೊಡಲಿರಾಮನ ನಿರ್ಗಮನ.
[Contributed by Shri Govind Magal]