Sunday 11 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 06 - 08

ಅನುಗ್ರಹಾರ್ಥಂ ಋಷೇರವಾಪ ಸಲಕ್ಷ್ಮಣೋsಸ್ತ್ರಂ ಮುನಿತೋ ಹಿ ಕೇವಲಮ್

ವವನ್ದಿರೇ ಬ್ರಹ್ಮಮುಖಾಃ ಸುರೇಶಾಸ್ತಮಸ್ತ್ರರೂಪಾಃ ಪ್ರಕಟಾಃ ಸಮೇತ್ಯ .೦೬

ವಿಶ್ವಾಮಿತ್ರರಿಂದ ರಾಮಲಕ್ಷ್ಮಣರ ಅಸ್ತ್ರ ಸ್ವೀಕಾರ,
ತನ್ಮೂಲಕ ವಿಶ್ವಾಮಿತ್ರರನ್ನು ಅನುಗ್ರಹಿಸೋ ವ್ಯಾಪಾರ.
ಅಸ್ತ್ರಾಭಿಮಾನಿಗಳಾದ ಬ್ರಹ್ಮಾದಿ ದೇವತಾವೃಂದ,
ಪ್ರತ್ಯಕ್ಷರಾಗಿ ವಂದಿಸಿದರು ರಾಮನ ಆನಂದದಿಂದ.

ಅಥೋ ಜಘಾನಾsಶು ಶರೇಣ ತಾಟಕಾಂ ವರಾದ್ ವಿಧಾತುಸ್ತದನನ್ಯವಧ್ಯಾಮ್
ರರಕ್ಷ ಯಜ್ಞಂಚ ಮುನೇರ್ನಿಹತ್ಯ ಸುಬಾಹುಮೀಶಾನಗಿರಾ ವಿಮೃತ್ಯುಮ್ .೦೭

ರಾಮನ ಹೊರತು ಅನ್ಯರಿಂದ ಅವಧ್ಯಳೆಂದು ತಾಟಕೆಗೆ ವರ,
ಒಂದೇ ಬಾಣದಲ್ಲಿ ಮಾಡಿದ ರಾಮ ತಾಟಕೆಯ ಸಂಹಾರ.
ರುದ್ರವರದಿಂದ ಉನ್ಮತ್ತ ಸುಬಾಹುವಿನ ಸಂಹರಣ,
ಹಾಗೇ ಮಾಡಿದ ವಿಶ್ವಾಮಿತ್ರರ ಯಜ್ಞದ ಸಂರಕ್ಷಣ.

ಶರೇಣ ಮಾರೀಚಮಥಾರ್ಣವೇsಕ್ಷಿಪದ್ ವಚೋ ವಿರಿಞ್ಚಸ್ಯ ತು ಮಾನಯಾನಃ
ಅವಧ್ಯತಾ ತೇನ ಹಿ ತಸ್ಯ ದತ್ತಾ ಜಘಾನ ಚಾನ್ಯಾನ್ ರಜನೀಚರಾನಥ .೦೮

ಬ್ರಹ್ಮವರದಿಂದ ಅವಧ್ಯನಾಗಿದ್ದ ಮಾರೀಚನೆಂಬ ರಾಕ್ಷಸ,
ಮಗನ ವರ ಮನ್ನಿಸಿ ಮಾರೀಚನ ಸಮುದ್ರಕ್ಕೆಸೆದ ನಿರಾಯಾಸ.
ಉಳಿದ ರಾಕ್ಷಸರನ್ನೂ ಸಂಹರಿಸಿದ ರಾಮ ಬೀರಿದ ಮಂದಹಾಸ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula