Saturday 10 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 03 - 05

ತನ್ಮಾತರಃ ಪೌರಜನಾ ಅಮಾತ್ಯಾ ಅನ್ತಃಪುರಾ ವೈಷಯಿಕಾಶ್ಚ ಸರ್ವೇ
ಅವೇಕ್ಷಮಾಣಾಃ ಪರಮಂ ಪುಮಾಂಸಂ ಸ್ವಾನನ್ದತೃಪ್ತಾ ಇವ ಸಮ್ಬಭೂವುಃ ೦೪-೦೩

ಶ್ರೀರಾಮನ ಅಮ್ಮಂದಿರು,ಅಯೋಧ್ಯಾವಾಸಿಗಳು,
ಮಂತ್ರಿ ಮೊದಲಾದವರು ,ಅಂತಃಪುರವಾಸಿಗಳು,
ಎಲ್ಲರೂ ಶ್ರೀರಾಮ ಸಖ್ಯ ದರ್ಶನದಿಂದ ತೃಪ್ತ,
ಆನಂದಿಗಳಾದರು ಮೋಕ್ಷವೇ ಆದಂತೆ ಪ್ರಾಪ್ತ.


ತತಃ ಸುವಂಶೇ ಶಶಿನಃ ಪ್ರಸೂತೋ ಗಾಧೀತಿ ಶಕ್ರಸ್ತನುಜೋsಸ್ಯ ಚಾsಸೀತ್
ವರೇಣ ವಿಪ್ರತ್ವಮವಾಪ ಯೋsಸೌ ವಿಶ್ವಸ್ಯ ಮಿತ್ರಂ ಇಹಾsಜಗಾಮ .೦೪

ಚಂದ್ರವಂಶದಿ ಇಂದ್ರ ಗಾಧಿರಾಜನಾಗಿ ಬಂದ,
ಬ್ರಹ್ಮವರದಿ ವಿಶ್ವಾಮಿತ್ರ ಮಗನಾಗಿ ಜನಿಸಿದ್ದ.
ವಿಶ್ವಕ್ಕೇ ಮಿತ್ರನಾದ ವಿಶ್ವಾಮಿತ್ರ ಅಯೋಧ್ಯೆಗೆ ಬಂದ.

ತೇನಾರ್ಥಿತೋ ಯಜ್ಞರಿರಕ್ಷಯೈವ ಕೃಚ್ಛ್ರೇಣ ಪಿತ್ರಾsಸ್ಯ ಭಯಾದ್ ವಿಸೃಷ್ಟಃ
ಜಗಾಮ ರಾಮಃ ಸಹ ಲಕ್ಷ್ಮಣೇನ ಸಿದ್ಧಾಶ್ರಮಂ ಸಿದ್ಧಜನಾಭಿವನ್ದ್ಯಃ .೦೫

ವಿಶ್ವಾಮಿತ್ರರ ದಶರಥನಲ್ಲಿಗೆ ಆಗಮನ,
ಯಜ್ಞರಕ್ಷಣೆಗೆ ರಾಮನ ಕೇಳುವ ಪ್ರಹಸನ.
ಅತಿಕಷ್ಟ -ಭಯದಿಂದ ಕಳಿಸಿಕೊಟ್ಟ ದಶರಥ,
ಸಿದ್ಧಾಶ್ರಮದತ್ತ ಹೊರಟಿತು ರಾಮಲಕ್ಷ್ಮಣರ ರಥ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula