ಪುರಾsತುಲೋ ನಾಮ ಮಹಾಸುರೋsಭವದ್ ವರಾತ್ ಸ ತು ಬ್ರಹ್ಮಣ ಆಪ ಲೋಕತಾಮ್ ।
ಪುನಶ್ಚ ತಂ ಪ್ರಾಹ ಜಗದ್ಗುರುರ್ಯದಾ ಹರಿರ್ಜಿತಃ ಸ್ಯಾದ್ಧಿ ತದೈವ ವಧ್ಯಸೇ ॥೪.೫೫॥
ಹಿಂದೊಬ್ಬನಿದ್ದ ಅತುಲನೆಂಬ ಮಹಾದೈತ್ಯ ,
ಪಡೆದಿದ್ದ ಬ್ರಹ್ಮವರದಿಂದ ಲೋಕಮಯತ್ವ.
ಯಾವಾಗ ಹರಿಯಾಗುವನೋ ಪರಾಜಿತ,
ಆ ಕ್ಷಣದಲ್ಲೇ ಆಗುವ ಅವನು ಮೃತ.
ಅತೋ ವಧಾರ್ಥಂ ಜಗದನ್ತಕಸ್ಯ ಸರ್ವಾಜಿತೋsಹಂ ಜಿತವದ್ ವ್ಯವಸ್ಥಿತಃ ।
ಇತೀರಿತೇ ಲೋಕಮಯೇ ಸ ರಾಘವೋ ಮುಮೋಚ ಬಾಣಂ ಜಗದನ್ತಕೇsಸುರೇ ॥೪.೫೬॥
ಆಗಲೇಬೇಕಾಗಿದೆ ಲೋಕಕಂಟಕನ ಕೊನೆ,
ಅದಕ್ಕಾಗಿ ಸೋತಂತೆ ತೋರಿಸಿಕೊಂಡಿದ್ದೇನೆ.
ಪರಶುರಾಮ ರಾಮಗೆ ತಿಳಿಹೇಳಿದ ಪ್ರಸಂಗ,
ರಾಮನಿಂದಾಯ್ತು ಅತುಲನೆಡೆ ಬಾಣಪ್ರಯೋಗ.
ಪುರಾ ವರೋsನೇನ ಶಿವೋಪಲಮ್ಭಿತೋ ಮುಮುಕ್ಷಯಾ ವಿಷ್ಣುತನುಪ್ರವೇಶನಮ್ ।
ಸ ತೇನ ರಾಮೋದರಗೋ ಬಹಿರ್ಗತಸ್ತದಾಜ್ಞಯೈವಾsಶು ಬಭೂವ ಭಸ್ಮಸಾತ್ ॥೪.೫೭॥
ಮೋಕ್ಷೇಚ್ಛೆಯಿಂದ ವಿಷ್ಣುಶರೀರ ಪ್ರವೇಶಿಸಿದ್ದ ಅತುಲ,
ಶಿವವರದಿಂದ ಪರಶುರಾಮನ ಉದರವಾಗಿತ್ತವನ ಬಿಲ.
ಬರುತಿದೆ ನನ್ನ ಹೊಟ್ಟೆಯತ್ತ ರಾಮಬಾಣ,
ಹೊರಬಂದು ಉಳಿಸಿಕೋ ನಿನ್ನ ಪ್ರಾಣ.
ಭಾರ್ಗವನ ಆಜ್ಞೆಯಂತೆ ಅತುಲ ಹೊರಬಂದ,
ರಾಮಬಾಣಕೆ ಸಿಲುಕಿ ಸುಟ್ಟು ಬೂದಿಯಾದ.
ಇತೀವ ರಾಮಾಯ ಸ ರಾಘವಃ ಶರಂ ವಿಕರ್ಷಮಾಣೋ ವಿನಿಹತ್ಯ ಚಾಸುರಮ್।
ತಪಸ್ತದೀಯಂ ಪ್ರವದನ್ ಮುಮೋದ ತದೀಯಮೇವ ಹ್ಯಭವತ್ ಸಮಸ್ತಮ್ ॥೪.೫೮॥
ಪರಶುರಾಮನಿಗೇ ಎಂಬಂತೆ ಶ್ರೀರಾಮ ಹೂಡಿದ್ದ ಬಾಣ ,
ಎಲ್ಲದರ ಹಿಂದಿನ ಶಕ್ತಿ ಅವನಲ್ಲವೇ ನಾರಾಯಣ.
ರಾಮ ಮಾಡಿದ ಪರಶುರಾಮನ ತಪಸ್ಸು ನಾಶ,
ಎಲ್ಲರಂತರ್ಯಾಮಿಯ ಆಟದ ವಿವಿಧ ವೇಷ.
ನಿರನ್ತರಾನನ್ತವಿಬೋಧಸಾರಃ ಸ ಜಾನಮಾನೋsಖಿಲಮಾದಿಪೂರುಷಃ ।
ವದನ್ ಶೃಣೋತೀವ ವಿನೋದತೋ ಹರಿಃ ಸ ಏಕ ಏವ ದ್ವಿತನುರ್ಮುಮೋದ ॥೪.೫೯॥
ಅಪರಿಮಿತ ಕುಂದಿಲ್ಲದ ಜ್ಞಾನದ ಆದಿಪುರುಷ,
ಏನಾಶ್ಚರ್ಯ ಧರಿಸಿದ ತಾನೇ ಎರಡೆರಡು ವೇಷ.
ಹೇಳುವವನೂ ಕೇಳುವವನೂ ಎರಡೂ ಒಬ್ಬನೇ,
ಸರ್ವಮೂಲ ಅವನು ಸದಾ ಆನಂದಧಾಮ ತಾನೇ.
ಸ ಚೇಷ್ಟಿತಂ ಚೈವ ನಿಜಾಶ್ರಯಸ್ಯ ಜನಸ್ಯ ಸತ್ತತ್ತ್ವವಿಬೋಧಕಾರಣಮ್ ।
ವಿಮೋಹಕಂ ಚಾನ್ಯತಮಸ್ಯ ಕುರ್ವನ್ ಚಿಕ್ರೀಡ ಏಕೋsಪಿ ನರಾನ್ತರೇ ಯಥಾ ॥೪.೬೦॥
ಏಕಮೇವ ಭಗವಂತನ ಎರಡು ವೇಷದ ಆಟ,
ಸ್ವಭಾವಕ್ಕನುಸಾರ ಬಡಿಸಿದ ತಕ್ಕ ಜ್ಞಾನದೂಟ.
ಸಜ್ಜನ ಭಕ್ತ ಸಾಧಕರಿಗೆ ನೈಜ ತತ್ವಜ್ಞಾನ,
ದುರ್ಜನ ರಕ್ಕಸರಿಗೆ ಸಂದ ಮಿಥ್ಯಾಜ್ಞಾನ.
ತತಃ ಸ ಕಾರುಣ್ಯನಿಧಿರ್ನಿಜೇ ಜನೇ ನಿತಾನ್ತಮೈಕ್ಯಂ ಸ್ವಗತಂ ಪ್ರಕಾಶಯನ್ ।
ದ್ವಿಧೇವ ಭೂತ್ವಾ ಭೃಗುವರ್ಯ ಆತ್ಮನಾ ರಘೂತ್ತಮೇನೈಕ್ಯಮಗಾತ್ ಸಮಕ್ಷಮ್ ॥೪.೬೧॥
ಕರುಣೆಯಿಂದ ತನ್ನ ಭಕ್ತರಿಗೆ ಕೊಟ್ಟ ನಿಶ್ಚಯಜ್ಞಾನ,
ಬೇರಾಗಿ ನಿಂತಿದ್ದ ಭಾರ್ಗವ ರಾಮನಲ್ಲಾದ ಲೀನ.
ಸಮೇತ್ಯ ಚೈಕ್ಯಂ ಜಗತೋsಭಿಪಶ್ಯತಃ ಪ್ರಣುದ್ಯಶಙ್ಕಾಮಖಿಲಾಂ ಜನಸ್ಯ ।
ಪ್ರದಾಯ ರಾಮಾಯ ಧನುರ್ವರಂ ತದಾ ಜಗಾಮ ರಾಮಾನುಮತೋ ರಮಾಪತಿಃ ॥೪.೬೨॥
ಜಗ ನೋಡುತ್ತಿರುವಂತೆ ರಾಮನಲ್ಲಿ ಐಕ್ಯವಾದ ಕೊಡಲಿರಾಮ,
ಸಂದೇಹ ಪರಿಹರಿಸಿ ಮತ್ತೆ ಬೇರೆಯಾದಂತೆ ತೋರಿದ ನೇಮ.
ಕೊಡಲಿರಾಮನಿಂದ ರಾಮನಿಗೆ ಆ ಧನುಸ್ಸು ಪ್ರದಾನ,
ರಾಮನ ಅನುಮತಿ ಪಡೆದ ಕೊಡಲಿರಾಮನ ನಿರ್ಗಮನ.[Contributed by Shri Govind Magal]
No comments:
Post a Comment
ಗೋ-ಕುಲ Go-Kula