Thursday 15 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 17 - 19

ತಪೋ ಮಯಾ ಚೀರ್ಣಮುಮಾಪತೇಃ ಪುರಾ ವರಾಯುಧಾವಾಪ್ತಿಧೃತೇನ ಚೇತಸಾ
ಮೇ ದದೌ ದಿವ್ಯಮಿದಂ ಧನುಸ್ತದಾ ಕಥಞ್ಚನಾಚಾಲ್ಯಮೃತೇ ಪಿನಾಕಿನಮ್ .೧೭

ಆಯುಧಾರ್ಥವಾಗಿ ಮಾಡಿದ್ದೆ ಹಿಂದೆ ತಪಸ್ಸು,
ಶಿವನೊಲಿದು ಕರುಣಿಸಿದ ದಿವ್ಯ ಧನುಸ್ಸು.
ಮುಕ್ಕಣ್ಣ ಮಾತ್ರ ಅದನ್ನೆತ್ತಬಲ್ಲ,
ಅವನ ಹೊರತು ಇನ್ಯಾರೂ ಶಕ್ಯರಲ್ಲ.
ಪಿನಾಕಿನಿ ಧನುಸ್ಸು ಜನಕನ ಪೂರ್ವಜರಿಗಿತ್ತ ವರ,
ತಪಸಾನಂತರ ಪುನಃ ಪಡೆದ ಶತ್ರುಸಂಹಾರಕ್ಕೋಸ್ಕರ.


ದೇವದೈತ್ಯೋರಗದೇವಗಾಯಕಾ ಅಲಂ ಧನುಶ್ಚಾಲಯಿತುಂ ಸವಾಸವಾಃ
ಕುತೋ ನರಾಸ್ತದ್ವರತೋ ಹಿ ಕಿಙ್ಕರಾ ಸಹಾನಸೈವಾತ್ರ ಕೃಷನ್ತಿ ಕೃಚ್ಛ್ರತಃ .೧೮

ಇಂದ್ರಾದಿದೇವತೆಗಳಲಾಗಲೀ,
ಮಹಾಮಹಾ ದೈತ್ಯರಾಗಲೀ,
ಸರ್ಪಶೂರ ,ಗಂಧರ್ವರಾಗಲೀ,
ಅಲುಗಾಡಿಸಲೂ ಶಕ್ಯವಿಲ್ಲವಿಲ್ಲಿ.
ಇನ್ನು ಮನುಷ್ಯಮಾತ್ರರಿಗೆ ಹೇಗೆ ಸಾಧ್ಯ,
ಅದನೆಳೆವವರಿಗೂ ಶಿವನ ವರವೇ ಬಾಧ್ಯ.

ಅಧಾರ್ಯಮೇತದ್ ಧನುರಾಪ್ಯ ಶಙ್ಕರಾದಹಂ ನೃಣಾಂ ವೀರ್ಯಪರೀಕ್ಷಣೇ ಧೃತಃ
ಸುತಾರ್ಥಮೇತಾಂ ಚಕರ ಪ್ರತಿಜ್ಞಾಂ ದದಾಮಿ ಕನ್ಯಾಂ ಇದಂ ಹಿ ಪೂರಯೇತ್ .೧೯

ಯಾರೂ ಧರಿಸಲಾಗದ ಧನುಸ್ಸನ್ನು ಶಿವನ ವರದಿಂದ ಪಡೆದೆ,
ಹಾಗೇ ಮಗಳಿಗಾಗಿ ಒಂದು ವಿಶೇಷ ಪ್ರತಿಜ್ಞೆಯನ್ನು ಮಾಡಿದೆ.
ಬಿಲ್ಲನ್ನ ಎತ್ತಿ ಹೆದೆಯೇರಿಸುವ ಮಹಾಶೂರ,
ಸೀತೆ ಅವನ ಸತಿಯಾಗಿ ಹಾಕುತ್ತಾಳವನಿಗೆ ಹಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula