ಬ್ರಹ್ಮೋದ್ಭವಃ ಸೋಮ ಉತಾಸ್ಯಸೂನೋರತ್ರೇರಭೂತ್ ಸೋsಙ್ಗದ ಏವ
ಜಾತಃ ।
ಬೃಹಸ್ಪತಿಸ್ತಾರ ಉತೋ ಶಚೀ ಚ ಶಕ್ರಸ್ಯ ಭಾರ್ಯೈವ ಬಭೂವ ತಾರಾ ॥೩.೬೮॥
ಬ್ರಹ್ಮಪುತ್ರ ಸೋಮ
ನಂತರ ಅತ್ರಿಯ ಪುತ್ರನಾದ,
ಅವನೇ ಕಪಿಸೈನ್ಯದ
ಪ್ರಮುಖನಾಗಿ ಬಂದ ಅಂಗದ.
ಬೃಹಸ್ಪತಿ
ತಾರನಾಗಲು ಇಂದ್ರಪತ್ನಿ ಶಚಿ ತಾರಾ ಆದಳು.
ಬೃಹಸ್ಪತಿರ್ಬ್ರಹ್ಮಸುತೋsಪಿ ಪೂರ್ವಂ ಸಹೈವ ಶಚ್ಯಾ
ಮನಸೋsಭಿಜಾತಃ ।
ಬ್ರಹ್ಮೋದ್ಭವಸ್ಯಾಙ್ಗಿರಸಃ ಸುತೋsಭೂನ್ಮಾರೀಚಜಸ್ಯೈವ ಶಚೀ
ಪುಲೋಮ್ನಃ ॥೩.೬೯॥
ಬೃಹಸ್ಪತಿ ಶಚಿಯರದು
ಬ್ರಹ್ಮಮನಸ್ಸಿನಿಂದ ಹುಟ್ಟು,
ಆದರೂ
ಅಂಗಿರಸಪುತ್ರನಾಗಿ ಮಾಡಿದ ಭುವಿಯ ಮೆಟ್ಟು.
ಶಚಿಯೂ ಪುಲೋಮನಲ್ಲಿ
ಪೌಲೋಮಿಯಾಗಿ ಬಂದ ಗುಟ್ಟು.
ಸ ಏವ ಶಚ್ಚ್ಯಾ ಸಹ ವಾನರೋsಭೂತ್ ಸ್ವಸಮ್ಭವೋ
ದೇವಗುರುರ್ಬೃಹಸ್ಪತಿಃ ।
ಅಭೂತ್ ಸುಷೇಣೋ ವರುಣೋsಶ್ವಿನೌ ಚ ಬಭೂವತುಸ್ತೌ
ವಿವಿದಶ್ಚ ಮೈನ್ದಃ ॥೩.೭೦॥
ಆ ದೇವಗುರು
ಬೃಹಸ್ಪತಿ ಕಪಿಯಾಗಿ ಬಂದ,
ಜೊತೆಯಾಗಿ
ಶಚಿಯನ್ನೂ ತಂಗಿಯಾಗಿ ತಂದ.
ತಾರಾ ತಂಗಿಯಾದರೆ
ತಾರ ಅಣ್ಣನಾದ.
ಸುಷೇಣನೆಂಬ
ಕಪಿಯಾಗಿ ಬಂದ ವರುಣ,
ಅಶ್ವಿದೇವತೆಗಳು
ವಿವಿದ ಮೈಂದರಾಗಿ ಅವತರಣ.
ಬ್ರಹ್ಮೋದ್ಭವೌ ತೌ ಪುನರೇವ ಸೂರ್ಯಾದ್ ಬಭೂವತುಸ್ತತ್ರ ಕನೀಯಸಸ್ತು ।
ಆವೇಶ ಐನ್ದ್ರೋ ವರದಾನತೋsಭೂತ್ ತತೋ ಬಲೀಯಾನ್
ವಿವಿದೋ ಹಿ ಮೈನ್ದಾತ್ ॥೩.೭೧॥
ಅಶ್ವಿದೇವತೆಗಳು
ಬ್ರಹ್ಮನಮೂಗಿನಿಂದ ಹುಟ್ಟಿದವರು,
ಅಶ್ವರೂಪದ ಸೂರ್ಯ
ಸಂಜ್ಞರಲ್ಲಿ ಮರುಹುಟ್ಟು ಪಡೆದರು.
ವಿವಿದನಲ್ಲಿತ್ತು
ವರದಾನದ ಇಂದ್ರನಾವೇಷ,
ಹಾಗೇ ಅವನಲ್ಲಿ
ಮೈಂದಗಿಂತ ಹೆಚ್ಚು ಬಲದ ವಿಶೇಷ.
ನೀಲೋsಗ್ನಿರಾಸೀತ್ ಕಮಲೋದ್ಭವೋತ್ಥಃ ಕಾಮಃ ಪುನಃ ಶ್ರೀರಮಣಾದ್ ರಮಾಯಾಮ್ ।
ಪ್ರದ್ಯುಮ್ನನಾಮsಭವದೇವಮೀಶಾತ್ ಸ ಸ್ಕನ್ದತಾಮಾಪ ಸ ಚಕ್ರತಾಂ ಚ ॥೩.೭೨॥
ಬ್ರಹ್ಮಮುಖೋದ್ಭವ
ಅಗ್ನಿ ನೀಲನೆಂಬ ಕಪಿಯಾದ.
ಬ್ರಹ್ಮನಮನಸ್ಸಿನಿಂದ
ಉದ್ಭವಿಸಿ ಬಂದ ಕಾಮ,
ಲಕ್ಷ್ಮಿನಾರಾಯಣರಲ್ಲಿ
ಹುಟ್ಟಿ ತಾನಾದ ಪ್ರದ್ಯುಮ್ನ.
ಹೀಗೇ ಶಿವನಿಂದ
ಜನಿಸಿ ಸ್ಕಂದನಾದ,
ಅವನೇ ಚಕ್ರಾಭಿಮಾನಿ
ಸುದರ್ಶನನಾದ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula