Wednesday 21 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 40 - 43

ತದನ್ತರೇ ಸೋs ದದರ್ಶ ಭಾರ್ಗವಂ ಸಹಸ್ರಲಕ್ಷ್ಮಾಮಿತಭಾನುದೀಧಿತಿಮ್
ವಿಭಾಸಮಾನಂ ನಿಜರಶ್ಮಿಮಣ್ಡಲೇ ಧನುರ್ಧರಂ ದೀಪ್ತಪರಶ್ವಧಾಯುಧಮ್ .೪೦

ಅಯೋಧ್ಯಾ ಮಾರ್ಗದಲ್ಲಿ ದಶರಥಗೆ ಪರಶುರಾಮನ ದರ್ಶನ,
ಅಮಿತ ಕಾಂತಿಯ ಧನುರ್ಧಾರಿ ಕೊಡಲಿ ಹಿಡಿದ ರಾಮನ.

ಅಜಾನತಾಂ ರಾಘವಮಾದಿಪೂರುಷಂ ಸಮಾಗತಂ ಜ್ಞಾಪಯಿತುಂ ನಿದರ್ಶನೈಃ
ಸಮಾಹ್ವಯನ್ತಂ ರಘುಪಂ ಸ್ಪೃಧೇವ ನೃಪೋ ಯಯಾಚೇ ಪ್ರಣಿಪತ್ಯ ಭೀತಃ .೪೧

ಶ್ರೀರಾಮನೇ ಧರೆಗಿಳಿದ ಆದಿಪುರುಷನೆಂಬ ಸತ್ಯದ ದರ್ಶನ,
ಮಾಡಿಸಬೇಕಿತ್ತು ತಿಳಿಯದ ಸುಜನರಿಗೆ ತತ್ವದ ಮನನ.
ಸ್ಪರ್ಧೆಗೆ ಬಂದವನಂತೆ ಪರಶುರಾಮ ಕೊಟ್ಟ ರಾಮಗೆ ಯುದ್ಧಾವ್ಹಾನ,
ಭಯಭೀತನಾದ ದಶರಥನಿಂದ ಪರಶುರಾಮನಲ್ಲಿ ಪ್ರಾರ್ಥನ.

ಮೇ ಸುತಂ ಹನ್ತುಮಿಹಾರ್ಹಸಿ ಪ್ರಭೋ ವಯೋಗತಸ್ಯೇತ್ಯುದಿತಃ ಭಾರ್ಗವಃ
ಸುತತ್ರಯಂ ತೇ ಪ್ರದದಾಮಿ ರಾಘವಂ ರಣೇ ಸ್ಥಿತಂ ದ್ರಷ್ಟುಮಿಹಾsಗತೋsಸ್ಮ್ಯಹಮ್ .೪೨

ಭಯಗ್ರಸ್ತ ದಶರಥನಿಂದ ಪರಶುರಾಮನಲ್ಲಿ ಪುತ್ರಭಿಕ್ಷೆ,
ಕೊಡಲಿರಾಮ ಹೇಳುತ್ತಾನೆ ರಾಮ ತೊಡಲಿ ಯುದ್ಧದೀಕ್ಷೆ.
ಮುಪ್ಪಿನಿಂದ ಜರ್ಜರಿತನಾದ ನನಗೆ ಕೊಡಬೇಡ ಪುತ್ರವಿಯೋಗ,
ಮಿಕ್ಕ ಮೂವರ ಬಿಡುತ್ತೇನೆ ರಾಮ ಎದುರಿಸಲೀಗ ಯುದ್ಧಯೋಗ.

ಇತ್ಥಮುಕ್ತ್ವಾನೃಪತಿಂ ರಘೂತ್ತಮಂ ಭೃಗೂತ್ತಮಃ ಪ್ರಾಹ ನಿಜಾಂ ತನುಂ ಹರಿಃ
ಅಭೇದಮಜ್ಞೇಷ್ವಭಿದರ್ಶಯನ್ ಪರಂ ಪುರಾತನೋsಹಂ ಹರಿರೇಷ ಇತ್ಯಪಿ .೪೩

ರಾಮ ಪರಶುರಾಮರಲ್ಲಿಲ್ಲ ಯಾವ ಭೇದ,
ಇಬ್ಬರೂ ಹರಿಯ ರೂಪವೆಂಬುದು ಸತ್ಯವಾದ.
ಇದನ್ನ ತಿಳಿಸಬೇಕಿತ್ತು ಅಜ್ಞರಿಗೂ ಕೊಡಲಿರಾಮ,
ತನ್ನದೇ ಎರಡು ರೂಪಗಳು ನಾಟಕವಾಡಿದ ನೇಮ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula