Friday, 9 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 01 - 02


ಅಥಾಭ್ಯವರ್ಧಂಶ್ಚತುರಾಃ ಕುಮಾರಾ ನೃಪಸ್ಯ ಗೇಹೇ ಪುರುಷೋತ್ತಮಾದ್ಯಾಃ ।
ನಿತ್ಯಪ್ರವೃದ್ಧಸ್ಯ ಚ ತಸ್ಯ ವೃದ್ಧಿರಪೇಕ್ಷ್ಯ ಲೋಕಸ್ಯ ಹಿ ಮನ್ದದೃಷ್ಟಿಮ್ ॥೪.೦೧॥

ಅವತಾರಾ ನಂತರ ಪುರುಷೋತ್ತಮ ಶ್ರೀರಾಮ,
ತಮ್ಮಂದಿರೊಡಗೂಡಿ ಬೆಳವಣಿಗೆ ತೋರಿದ ಕ್ರಮ.
ನಿತ್ಯಪರಿಪೂರ್ಣನಿಗೆ ಅದೆಂಥಾ ಬೆಳವಣಿಗೆ,
ಪ್ರಾಕೃತರಿಗೆ ಅಪ್ರಾಕೃತನ ತೋರಿಕೆಯ ಮೆರೆವಣಿಗೆ .

ನಿರೀಕ್ಷ್ಯನಿತ್ಯಂ ಚತುರಃ ಕುಮಾರಾನ್  ಪಿತಾ ಮುದಂ ಸನ್ತತಮಾಪ ಚೋಚ್ಚಮ್ ।
ವಿಶೇಷತೋ ರಾಮಮುಖೇನ್ದುಬಿಮ್ಬಮವೇಕ್ಷ್ಯ ರಾಜಾ ಕೃತಕೃತ್ಯ ಆಸೀತ್  ॥೪.೦೨॥

ನಾಕೂ ಮಕ್ಕಳ ಅತ್ಯದ್ಭುತವಾದ ಬೆಳವಣಿಗೆ,
ದಶರಥಗೆ ಸಂದ ಆನಂದದ ತುಂಬು ತಳಿಗೆ.
ವಿಶೇಷ ಧನ್ಯತೆ ಕೊಟ್ಟ ಶ್ರೀರಾಮಚಂದ್ರ,
ಲೋಕವ ಬೆಳಗುವ ಮೂಲ ಪೂರ್ಣಚಂದ್ರ.
ಎಲ್ಲರಿಗೂ ಆನಂದ ನೀಡುವವ ಶ್ರೀರಾಮ,
ದಶರಥನಿಗಾದ ವಿಶೇಷವಾಗಿ ಆನಂದಧಾಮ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula