ತತೋ ನೃಪೋsತ್ಯರ್ಥಮುದಾsಭಿಪೂರಿತಃ ಸುತೈಃ ಸಮಸ್ತೈಸ್ವಪುರೀಮವಾಪ ಹ ।
ರೇಮೇsಥ ರಾಮೋsಪಿ ರಮಾಸ್ವರೂಪಯಾತಯೈವ ರಾಜಾತ್ಮಜಯಾ ಹಿ ಸೀತಯಾ ॥೪.೬೩॥
ಯಥಾ ಪುರಾ ಶ್ರೀರಮಣಃ ಶ್ರಿಯಾ ತಯಾ ರತೋ ನಿತಾನ್ತಂ ಹಿ ಪಯೋಬ್ಧಿಮಧ್ಯೇ ।
ತಥಾ ತ್ವಯೋಧ್ಯಾಪುರಿಗೋ ರಘೂತ್ತಮೋsಪ್ಯುವಾಸ ಕಾಲಂ ಸುಚಿರಂ ರತಸ್ತಯಾ ॥೪.೬೪॥
ದಶರಥಗೆ ಒದಗಿದ ವಿಪತ್ತು ಆಗಿತ್ತು ಪರಿಹಾರ,
ಸೇರಿದ ತನ್ನ ಪರಿವಾರದೊಂದಿಗೆ ಅಯೋಧ್ಯಾಪುರ.
ಶುರುವಾಯಿತು ಜಗದ್ ಮಾತಾಪಿತರ ಸಂಸಾರ ,
ರಾಮ ರಮೆಯರ ಸುಖಮಯ ಕ್ರೀಡಾವಿಹಾರ.
ಲಕ್ಷ್ಮೀರಮಣ ಲಕ್ಷ್ಮಿಯೊಡನೆ ಕ್ಷೀರಸಮುದ್ರದಲ್ಲಿದ್ದಂತೆ,
ಅಯೋಧ್ಯೆಯಲ್ಲಿ ರಮೆಯೊಡನೆ ಬಹುಕಾಲ ಕಳೆದನಂತೆ.
ಇಮಾನಿ ಕರ್ಮಾಣಿ ರಘೂತ್ತಮಸ್ಯ ಹರೇರ್ವಿಚಿತ್ರಾಣ್ಯಪಿ ನಾದ್ಭುತಾನಿ ।
ದುರನ್ತಶಕ್ತೇರಥ ಚಾಸ್ಯ ವೈಭವಂ ಸ್ವಕೀರ್ಯಕರ್ತವ್ಯತಯಾsನುವರ್ಣ್ಯತೇ ॥೪.೬೫॥
ರಾಮನ ಈ ಎಲ್ಲಾ ಕಾರ್ಯಗಳೂ ನಮಗೆ ವಿಚಿತ್ರ,
ದೇವರಿಗೆ ಎಲ್ಲವೂ ಕೇವಲ ಲೀಲಾವಿನೋದ ಮಾತ್ರ.
ಎಣೆಯಿರದ ಶಕ್ತಿಯ ನಾರಾಯಣನ ವೈಭವದ ವರ್ಣನೆ,
ಕರ್ತವ್ಯವಿಧಿಯಂತೆ ಕಿಂಚಿತ್ ಭಗವತ್ ಕಥಾ ನಿವೇದನೆ.
॥ ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯನಿರ್ಣಯೇ ರಾಮಾವತಾರೇ ಅಯೋಧ್ಯಾಪ್ರವೇಶೋ ನಾಮ ಚತುರ್ಥೋsಧ್ಯಾಯಃ ॥
ಶ್ರೀಮದಾನಂದತೀರ್ಥ ಭಗವತ್ ಪಾದರಿಂದ,
ಶ್ರೀಮಹಾಭಾರತ ತಾತ್ಪರ್ಯ ನಿರ್ಣಯ ವಾದ,
ರಾಮಾವತಾರ ಅಯೋಧ್ಯಾಪ್ರವೇಶದ ವಿವರಣ ,
ನಾಕನೆ ಅಧ್ಯಾಯ ರೂಪದಿಂದಾಯ್ತು ಕೃಷ್ಣಾರ್ಪಣ.[Contributed by Shri Govind Magal]
No comments:
Post a Comment
ಗೋ-ಕುಲ Go-Kula