ಸ ಮೈಥಿಲೇನಾತಿತರಾಂ ಸಮರ್ಚಿತೋ ವಿವಾಹಯಾಮಾಸ ಸುತಂ ಮುದಮ್ಬರಃ ।
ಪುರೋಹಿತೋ ಗಾಧಿಸುತಾನುಮೋದಿತೋ ಜುಹಾವ ವಹ್ನಿಂ ವಿಧಿನಾ ವಸಿಷ್ಠಃ ॥೪.೩೨॥ದಶರಥಗೆ ಜನಕನ ಆದರದ ವೈಭವಯುತ ಸತ್ಕಾರ,
ನಡೆಯಿತು ಶಾಸ್ತ್ರೋಕ್ತ ಸೀತಾರಾಮರ ಕಲ್ಯಾಣ ಕಾರ್ಯ.
ವಸಿಷ್ಠ ವಿಶ್ವಾಮಿತ್ರರ ವಿಶೇಷ ಯಜಮಾನಿಕೆ,
ವಿಧಿಬದ್ಧ ಹೋಮಗಳಿಂದ ದೈವಯಜ್ಞ ಪೂರೈಕೆ.
ತದಾ ವಿಮಾನಾವಲಿಭಿರ್ನಭಸ್ತಳಂ ದಿದೃಕ್ಷತಾಂ ಸಙ್ಕುಲಮಾಸ ನಾಕಿನಾಂ ।
ಸುರಾನಕಾ ದುನ್ದಭಯೋ ವಿನೇದಿರೇ ಜಗುಶ್ಚ ಗನ್ಧರ್ವವರಾಃ ಸಹಸ್ರಶಃ ॥೪.೩೩॥
ದೇವತೆಗಳ ವಿಮಾನಗಳಿಂದ ತುಂಬಿದ ಆಗಸ,
ನಗಾರಿ ಭೇರಿಗಳು ಮೊಳಗಿ ತಂದ ಹಿರಿಸಂತಸ.
ಗಂಧರ್ವರ ಸುಶ್ರಾವ್ಯ ಗಾಯನ,
ವಿಜೃಂಭಿಸಿತು ಸಂತಸದ ನರ್ತನ.
ವಿಜಾನಮಾನಾ ಜಗತಾಂ ಹಿ ಮಾತರಂ ಪುರಾSರ್ಥಿತುಂ ನಾsಯಯುರತ್ರ ದೇವತಾಃ ।
ತದಾ ತು ರಾಮಂ ರಮಯಾ ಯುತಂ ಪ್ರಭುಂ ದಿದೃಕ್ಷವಶ್ಚಕ್ರುರಲಂ ನಭಸ್ಥಳಮ್ ॥೪.೩೪॥
ದೇವತೆಗಳಿಗಿತ್ತು ಸೀತೆ ಜಗನ್ಮಾತೆ ಎಂಬ ಅರಿವು,
ಅವರುಗಳು ಸ್ಪರ್ಧಾರ್ಥಿಗಳಲ್ಲವೆಂಬ ಸ್ಪಷ್ಟ ಸುಳಿವು.
ಅವರಿಗೆ ಬೇಕಿತ್ತು ಜಗದ್ ಮಾತಾಪಿತರ ದರ್ಶನ,
ಅದ ಬಯಸಿ ಮಾಡಿದರು ಆಕಾಶದ ಅಲಂಕರಣ.
ಯಥಾ ಪುರಾ ಸಾಗರಜಾಸ್ವಯಮ್ಬರೇ ಸುಮಾನಸಾನಾಮಭವತ್ ಸಮಾಗಮಃ ।
ತಥಾ ಹ್ಯಭೂತ್ ಸರ್ವದಿವೌಕಸಾಂ ತದಾ ತಥಾ ಮುನೀನಾಂ ಸಹಭೂಭೃತಾಂ ಭುವಿ ॥೪.೩೫॥
ಸಮುದ್ರಮಥನ ಕಾರ್ಯದಲ್ಲಿ ಲಕ್ಷ್ಮೀನಾರಾಯಣರ ಸಂಗಮ,
ದೇವಾನುದೇವತೆಗಳೆಲ್ಲರದೂ ಆಗಿತ್ತಲ್ಲಿ ಸಂಭ್ರಮದ ಸಮಾಗಮ.
ಹಾಗೇ ಸೀತಾಸ್ವಯಂರದಲ್ಲಿ ಎಲ್ಲರ ಮಿಲನ,
ದೇವತೆ ಮುನಿ ರಾಜರುಗಳ ಭುವಿಯ ಸಮ್ಮೇಳನ.
ಪ್ರಗೃಹ್ಯ ಪಾಣಿಂ ಚ ನೃಪಾತ್ಮಜಾಯಾ ರರಾಜ ರಾಜೀವಸಮಾನನೇತ್ರಃ ।
ಯಥಾ ಪುರಾ ಸಾಗರಜಾಸಮೇತಃ ಸುರಾಸುರಾಣಾಮಮೃತಾಬ್ಧಿಮನ್ಥನೇ ॥೪.೩೬॥
ಹಿಂದಾಗಿದ್ದಾಗ ಅಮೃತ ಮಥನ ಕಾರ್ಯ,
ಶ್ರೀಹರಿ ಶೋಭಿಸಿದ್ದ ಕೂಡಿ ತನ್ನ ಭಾರ್ಯ.
ಈಗಾಯಿತು ಸೀತಾರಾಮರ ಭವ್ಯ ಕಲ್ಯಾಣ,
ಕಮಲನೇತ್ರ ಉಣಿಸಿದ ಸಂತಸದ ಹೂರಣ.
ಸ್ವಲಙ್ಕೃತಾಸ್ತತ್ರ ವಿಚೇರುರಙ್ಗನಾ ವಿದೇಹರಾಜಸ್ಯ ಚ ಯಾ ಹಿ ಯೋಷಿತಃ ।
ಮುದಾ ಸಮೇತಂ ರಮಯಾ ರಮಾಪತಿಂ ವಿಲೋಕ್ಯ ರಾಮಾಯಾ ದದೌ ಧನಂ ನೃಪಃ ॥೪.೩೭॥
ರಾಣೀವಾಸದವರ ಸುಮಂಗಲಿಯರ ವಿಶೇಷ ಅಲಂಕಾರ ,
ಅಲಂಕರಿಸಿಕೊಂಡು ಸಂಭ್ರಮದಿಂದ ನಗರದಲ್ಲಿ ಸಂಚಾರ.
ಎಲ್ಲರನು ಸಂತಸಪಡಿಸಿದ ರಮಾರಮಣ,
ಹರುಷದಿಂದ ಜನಕ ಮಾಡಿದ ಧನಾರ್ಪಣ.
ಪ್ರಿಯಾಣಿ ವಸ್ತ್ರಾಣಿ ರಥಾನ್ ಸಕುಞ್ಜರಾನ್ ಪರಾರ್ಧ್ಯರತ್ನಾನ್ಯಖಿಲಸ್ಯ ಚೇಶಿತುಃ ।
ದದೌ ಚ ಕನ್ಯಾತ್ರಯಮುತ್ತಮಂ ಮುದಾ ತದಾ ಸ ರಾಮಾವರಜೇಭ್ಯ ಏವ ॥೪.೩೮॥
ವಿಶ್ವದೊಡೆಯನಿಗೆ ಧನ ಕನಕ ವಸ್ತ್ರ ಸಮರ್ಪಣ,
ರಥ ಆನೆಗಳಾದಿಯಾಗಿ ವೈಭವೋಪೇತ ತೋರಣ.
ಲಕ್ಷ್ಮಣ ,ಭರತ ,ಶತ್ರುಘ್ನರಿಗೂ ಬಂತು ವಿವಾಹ ಯೋಗ ,
ಊರ್ಮಿಳ,ಮಾಂಡವಿ,ಶ್ರುತಕೀರ್ತಿಯರು ಪತ್ನಿಯರಾದರಾಗ.
ಮಹೋತ್ಸವಂ ತಂ ತ್ವನುಭೂಯ ದೇವತಾ ನರಾಶ್ಚ ಸರ್ವೇ ಪ್ರಯಯುರ್ಯಥಾಗತಮ್ ।
ಪಿತಾ ಚ ರಾಮಸ್ಯ ಸುತೈಃ ಸಮನ್ವಿತೋ ಯಯಾವಯೋಧ್ಯಾಂ ಸ್ವಪುರೀಂ ಮುದಾ ತತಃ ॥೪.೩೯॥
ಹೇಗಾಗಿತ್ತೋ ದೇವತೆಗಳ ಇನ್ನಿತರರ ಉತ್ಸವಕ್ಕೆ ಆಗಮನ,
ಹಾಗೆಯೇ ಕಲ್ಯಾಣ ಮುಗಿಸಿದ ಆನಂದದಿಂದ ನಿರ್ಗಮನ.
ದಶರಥನೂ ಕೈಗೊಂಡ ಎಲ್ಲರೊಡನೆ ಅಯೋಧ್ಯೆಗೆ ಪಯಣ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula