Saturday, 24 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 50 - 54

ಧನುರ್ಯದನ್ಯದ್ಧರಿಹಸ್ತಯೋಗ್ಯಂ ತತ್ ಕಾರ್ಮುಕಾತ್ ಕೋಟಿಗುಣಂ ಪುನಶ್ಚ ।
ವರಂ ಹಿ ಹಸ್ತೇ ತದಿದಂ ಗೃಹೀತಂ ಮಯಾ ಗೃಹಾಣೈತದತೋ ಹಿ ವೈಷ್ಣವಮ್ ॥೪.೫೦॥

ಅಂದು ನಾರಾಯಣ ಧರಿಸಿದ ಬಿಲ್ಲು,
ಶಿವ ಧರಿಸಿದ ಪಿನಾಕಗಿಂತ ಬಲು ಮಿಗಿಲು.
ಅದನ್ನೇ ಇಂದು ಧರಿಸಿರುವೆ ನಾನು,
ಆ ವಿಷ್ಣು ಧನುಸ್ಸಿನ ಹೆದೆಯೇರಿಸು ನೀನು.

ಯದೀದಮಾಗೃಹ್ಯ ವಿಕರ್ಷಸಿ ತ್ವಂ ತದಾ ಹರಿರ್ನಾತ್ರ ವಿಚಾರ್ಯಮಸ್ತಿ ।
ಇತಿ ಬ್ರುವಾಣಃ ಪ್ರದದೌ ಧನುರ್ವರಂ ಪ್ರದರ್ಶಯನ್ ವಿಷ್ಣುಬಲಂ ಹರಾದ್ ವರಮ್ ॥೪.೫೧॥

ಈ ಬಿಲ್ಲನ್ನು ಹೆದೆಯೇರಿಸಿದರೆ ನೀ ನಾರಾಯಣ,
ಖಚಿತವಾಗುವುದು ಸಂಶಯಗಳು ದೂರಾದ ಕಾರಣ.
ಹರಬಲಕ್ಕಿಂತ ಹರಿಬಲ ಮೇಲೆಂದು ನಿರೂಪಿಸುವ ಭಾರ್ಗವ ಚಿತ್ತ,
ಅದನ್ನೇ ತೋರಲು ಪರಶುರಾಮ ಆ ಬಿಲ್ಲನ್ನು ರಾಮನ ಕೈಗಿತ್ತ.


ಪ್ರಗೃಹ್ಯ ತಚ್ಚಾಪವರಂ ಸ ರಾಘವಶ್ಚಕಾರ ಸಜ್ಯಂ ನಿಮಿಷೇಣ ಲೀಲಯಾ ।
ಚಕರ್ಷ ಸನ್ಧಾಯ ಶರಂ ಚ ಪಶ್ಯತಃ ಸಮಸ್ತಲೋಕಸ್ಯ ಚ ಸಂಶಯಂ ನುದನ್ ॥೫೨॥

ಶ್ರೀರಾಮ ಕ್ಷಣಾರ್ಧದಲ್ಲಿ ಬಿಲ್ಲ ಹೆದೆಯೇರಿಸಿದ ಕಾರಣ,
ಆಯಿತು ಸಮಸ್ತ ಸುಜನರ ಸಂಶಯ ನಿವಾರಣ.


ಪ್ರದರ್ಶಿತೇ ವಿಷ್ಣುಬಲೇ ಸಮಸ್ತತೋ ಹರಾಚ್ಚ ನಿಃಸಙ್ಖ್ಯತಯಾ ಮಹಾಧಿಕೇ ।
ಜಗಾದ ಮೇಘೌಘಗಭೀರಯಾ ಗಿರಾ ಸ ರಾಘವಂ ಭಾರ್ಗವ ಆದಿಪೂರುಷ ॥೪.೫೩॥

ಶಿವ ರಮಾ ಬ್ರಹ್ಮಾದಿಗಳಿಗಿಂತಲೂ ಶ್ರೇಷ್ಠ ವಿಷ್ಣುಬಲ,
ಶ್ರೀರಾಮ ಖಚಿತಪಡಿಸಿ ತೋರಿಸಿದ ಅಂದಿನ ಕಾಲ.
ಕೇಳಿಬಂತಾಗ ಮೇಘಘರ್ಜನೆಯ ನಾದ,
ಕೊಡಲಿರಾಮ ರಾಮಗೆ ಮಂಡಿಸಿದ ವಾದ.

ಅಲಂ ಬಲಂ ತೇ ಜಗತೋsಖಿಲಾದ್ ವರಂ ಪರೋsಸಿ ನಾರಾಯಣ ಏವ ನಾನ್ಯಥಾ ।
ವಿಸರ್ಜಯಸ್ವೇಹ ಶರಂ ತಪೋಮಯೇಮಹಾಸುರೇ ಲೋಕಮಯೇ ವರಾದ್ ವಿಭೋಃ ॥ ೫೪ ॥

ನೀನು ಸಂಪೂರ್ಣ -ಬಲಪೂರ್ಣ,
ನೀನು ಸರ್ವೋತ್ತಮ ನಾರಾಯಣ.
ಬ್ರಹ್ಮವರದಿಂದ ಲೋಕವ್ಯಾಪ್ತನಾದೊಬ್ಬ ಅಸುರ,
ತಪೋಮಯನಾದ ಅವನು ಸೇರಿರುವ ನನ್ನುದರ.
ಅವನ ನಿವಾರಣೆಗೆ ಬಂದಿದೆ ಈಗ ಯೋಗ,
ಆಗಲಿ ನೀ ಹೂಡಿದ ಬಾಣದ ಪ್ರಯೋಗ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula