Friday, 16 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 20 - 22

ಇತೀರಿತಾಂ ಮೇ ಗಿರಮಭ್ಯವೇತ್ಯ ದಿತೇಃ ಸುತಾ ದಾನವಯಕ್ಷರಾಕ್ಷಸಾಃ ।
ಸಮೇತ್ಯ ಭೂಪಾಶ್ಚ ಸಮೀಪಮಾಶು ಪ್ರಗೃಹ್ಯ ತಚ್ಚಾಲಯಿತುಂ ನ ಶೇಕುಃ ॥೪.೨೦॥

ಹೀಗೆಂದು ನಾನು ಮೇಲೆ ಮಾಡಿಯಾದ ನಂತರ ಘೋಷಣೆ,
ದೈತ್ಯ ಯಕ್ಷ ರಾಕ್ಷಸ ರಾಜರುಗಳ ವ್ಯರ್ಥ ಬಿಲ್ಲು ಪ್ರದಕ್ಷಿಣೆ.
ಯಾರೊಬ್ಬರೂ ಅದನ್ನೆತ್ತಲು ಆಗಲಿಲ್ಲ ಸಮರ್ಥ,
ಎಲ್ಲರ ಮಹಾಪ್ರಯತ್ನಗಳೂ ಆದವು ಬರೀ ವ್ಯರ್ಥ.

ಸಂಸ್ವಿನ್ನಗಾತ್ರಾಃ ಪರಿವೃತ್ತನೇತ್ರಾ ದಶಾನನಾದ್ಯಾಃ ಪತಿತಾ ವಿಮೂರ್ಛಿತಾಃ ।
ತಥಾsಪಿ ಮಾಂ ಧರ್ಷಯಿತುಂ ನ ಶೇಕುಃ ಸುತಾಕೃತೇ ತೇ ವಚನಾತ್ ಸ್ವಯಮ್ಭುವಃ ॥೪.೨೧॥

ರಾವಣ ಮೊದಲಾದವರೂ ಬೆವೆತು ಸೋತು ಬಿದ್ದರು,
ಬ್ರಹ್ಮವರವಿದ್ದುದರಿಂದ ಬಲಾತ್ಕರಿಸಲು ಅಶಕ್ಯರಾದರು.

ಪುರಾ ಹಿ ಮೇsಧಾತ್ ಪ್ರಭುರಬ್ಜಜೋ ವರಂ ಪ್ರಸಾದಿತೋ ಮೇ ತಪಸಾ ಕಥಞ್ಚನ ।
ಬಲಾನ್ನತೇ ಕಶ್ಚಿದುಪೈತಿ ಕನ್ಯಕಾಂ ತದಿಚ್ಛುಭಿಸ್ತೇ ನಚ ಧರ್ಷಣೇತಿ ॥೪.೨೨ ॥

ಜನಕನ ತಪಸ್ಸಿಗೊಲಿದ ಬ್ರಹ್ಮದೇವ ಇತ್ತ ವರ,
ಯಾರೂ ಹೊಂದಲಾರರು ಸೀತೆಯ ಮಾಡಿ ಬಲಾತ್ಕಾರ.
ಯಾರೊಬ್ಬನೂ ಅವಳನ್ನೂ ನಿನ್ನನ್ನೂ ಕುಟಿಲದಿ ಗೆಲ್ಲಲಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula