ಪೂರ್ವಂ ಹರೇಶ್ಚಕ್ರಮಭೂದ್ಧಿ ದುರ್ಗಾ ತಮಃ ಸ್ಥಿತಾ ಶ್ರೀರಿತಿ ಯಾಂ
ವದನ್ತಿ ।
ಸತ್ತ್ವಾತ್ಮಿಕಾ ಶಙ್ಖಮಥೋ ರಜಸ್ಥಾ ಭೂರ್ನಾಮಿಕಾ ಪದ್ಮಮಭೂದ್ಧರೇರ್ಹಿ
॥೩.೭೩॥
ಮೊದಲು
ತಮೋಗುಣಾಭಿಮಾನಿ ದುರ್ಗಾ,
ಶ್ರಿಹರಿಯ
ಚಕ್ರಾಭಿಮಾನಿಯಾದ ಭಾಗ್ಯ.
ಸತ್ವಾಭಿಮಾನಿ
ಶ್ರೀದೇವಿ ಶಂಖಾಭಿಮಾನಿ.
ರಜೋಭಿಮಾನಿ ಭೂದೇವಿ
ಪದ್ಮಾಭಿಮಾನಿ.
ಗದಾ ತು ವಾಯುರ್ಬಲಸಂವಿದಾತ್ಮಾ ಶಾರ್ಙ್ಗಶ್ಚ ವಿದ್ಯೇತಿ ರಮೈವ ಖಡ್ಗಃ
।
ದುರ್ಗಾತ್ಮಿಕಾ ಸೈವ ಚ ಚರ್ಮನಾಮ್ನೀ ಪಞ್ಚಾತ್ಮಕೋ ಮಾರುತ ಏವ ಬಾಣಾಃ
॥೩.೭೪॥
ಬಲ ಜ್ಞಾನಗಳ
ಮುಖ್ಯಪ್ರಾಣ ಗದಾಭಿಮಾನಿ.
ವಿದ್ಯಾನಾಮದ ರಮೆಯೇ
ಶಾರ್ಙ್ಗದಭಿಮಾನಿ.
ದುರ್ಗಾರೂಪದ ರಮೆ
ಖಡ್ಗಕ್ಕಭಿಮಾನಿ.
ಅವಳೇ ಚರ್ಮಾಭಿಮಾನಿ
-ಗುರಾಣಿ.
ಪಂಚರೂಪಿಯಾದ ವಾಯು
ಬಾಣಾಭಿಮಾನಿ.
ಏವಂ ಸ್ಥಿತೇಷ್ವೇವ ಪುರಾತನೇಷು ವರಾದ್ ರಥಾಙ್ಗತ್ವಮವಾಪ ಕಾಮಃ ।
ತತ್ಸೂನುತಾಮಾಪ ಚ ಸೋsನಿರುದ್ಧೋ
ಬ್ರಹ್ಮೋದ್ಭವಃ ಶಙ್ಖತನುಃ ಪುಮಾತ್ಮಾ ॥೩.೭೫॥
ಹೀಗೆ ಹಳಬರು
ಆಯುಧಾಭಿಮಾನಿಗಳಾಗಿರುವಾಗ,
ಕಾಮನು ಕೂಡಾ ಚಕ್ರಾಭಿಮಾನಿಯಾದನಾಗ.
ಬ್ರಹ್ಮನಿಂದ
ಹುಟ್ಟಿದ ಅನಿರುದ್ಧನೇಂಬ ದೇವತೆ,
ಕಾಮನ ಮಗನಾಗಿ
ಶಂಖಾಭಿಮಾನಿ ಆದನಂತೆ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula