Friday 30 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 01 - 02

ಇತ್ಥಂ ವಿಶ್ವೇಶ್ವರೇsಸ್ಮಿನ್ನಖಿಲ ಜಗದವಸ್ಥಾಪ್ಯ ಸೀತಾಸಹಾಯೇ
ಭೂಮಿಷ್ಠೇ ಸರ್ವಲೋಕಾಸ್ತುತುಷುರನುದಿನಂ ವೃದ್ಧಭಕ್ತ್ಯಾನಿತಾನ್ತಮ್ ।
ರಾಜಾ ರಾಜ್ಯಾಭಿಷೇಕೇ ಪ್ರಕೃತಿಜನವಚೋ ಮಾನಯನ್ನಾತ್ಮನೋsರ್ಥ್ಯಂ
ದಧ್ರೇ ತನ್ಮನ್ಥರಾಯಾಃ ಶ್ರುತಿಪಥಮಗಮದ್ ಭೂಮಿಗಾಯಾ ಅಲಕ್ಷ್ಮ್ಯಾಃ ॥೫.೦೧॥

ಹೀಗೆ ನಡೆದಿತ್ತು ಅಯೋಧ್ಯೆಯಲ್ಲಿ ಸೀತಾ ರಾಮರ ಸಂಸಾರ,
ಸಜ್ಜನರ ಭಕ್ತರ ಪ್ರಜಾಜನಗಳ ಸಂತಸಪಡಿಸುವ ವ್ಯಾಪಾರ.
ದಶರಥ ಮಾಡಿದ ರಾಮಗೆ ರಾಜ್ಯಾಭಿಷೇಕದ ತೀರ್ಮಾನ,
ಈ ಸುದ್ದಿ ಭುವಿಯಲಿ ಹುಟ್ಟಿದ ಅಲಕ್ಷ್ಮಿ ಕಿವಿಗೆ ಬಿತ್ತು ಆ ಕ್ಷಣ.

ಪೂರ್ವಂ ಕ್ಷೀರಾಬ್ಧಿಜಾತಾ ಕಥಮಪಿ ತಪಸೈವಾಪ್ಸರಸ್ತ್ವಂಪ್ರಯಾತಾ
ತಾಂ ನೇತುಂ ತತ್ತಮೋsನ್ಧಂ ಕಮಲಜನಿರುವಾಚಾsಶು ರಾಮಾಭಿಷೇಕಮ್ ।
ಭೂತ್ವಾ ದಾಸೀ ವಿಲುಮ್ಪ ಸ್ವಗತಿಮಪಿ ತತಃ ಕರ್ಮಣಾ ಪ್ರಾಪ್ಸ್ಯಸೇ ತ್ವಂ
ಸೇತ್ಯುಕ್ತಾ ಮನ್ಥರಾssಸೀತ್ ತದನು ಕೃತವತ್ಯೇವ ಚೈತತ್ ಕುಕರ್ಮ ॥೫.೦೨॥

ಅಲಕ್ಷ್ಮಿ ಮೊದಲಿಗೆ ಕ್ಷೀರಸಮುದ್ರದಿಂದ ಬಂದವಳು,
ತಪಸ್ಸು ಮಾಡಿ ಅಪ್ಸರಾಸ್ತ್ರೀತ್ವವನ್ನು ಹೊಂದಿದವಳು.
ಬ್ರಹ್ಮದೇವಗೆ ಅವಳಿಗೆ ಅರ್ಹ ಗತಿ ಪಾಲಿಸುವ ಉದ್ದೇಶ,
ದಾಸಿಯಾಗಿ ಹುಟ್ಟಿ ರಾಮಾಭಿಷೇಕ ಕೆಡಿಸೆಂಬ ಆದೇಶ.
ಅದರಂತೆ ಅಲಕ್ಷ್ಮಿ ಮಂಥರೆಯಾಗಿ ಬಂದ ಪ್ರಸಂಗ,
ಕುಕೃತ್ಯವೆಸಗಿ ಮಾಡಿದಳು ಪಟ್ಟಾಭಿಷೇಕದ ಭಂಗ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula