Friday 23 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 44 - 49

ಶೃಣುಷ್ವ ರಾಮ ತ್ವಮಿಹೋದಿತಂ ಮಯಾ ಧನುರ್ಧ್ವಯಂ ಪೂರ್ವಮಭೂನ್ಮಹಾದ್ಭುತಮ್
ಉಮಾಪತಿಸ್ತ್ವೇಕಮಧಾರಯತ್ ತತೋ ರಮಾಪತಿಶ್ಚಾಪರಮುತ್ತಮೋತ್ತಮಮ್ .೪೪

ಪರಶುರಾಮ ರಾಮನ ಕುರಿತು ಆಡಿದ ಮಾತುಗಳು,
ಹಿಂದಿದ್ದವು ಎರಡು ಅತ್ಯದ್ಭುತವಾದ ಧನುಸ್ಸುಗಳು.
ಒಂದಾಗಿತ್ತು ಅದರಲ್ಲಿ ಉಮಾಪತಿಯ ಪಾಲು,
ಇನ್ನೊಂದು ಅಲಂಕರಿಸಿತ್ತು ರಮಾಪತಿಯ ಹೆಗಲು.

ತದಾ ತು ಲೋಕಸ್ಯ ನಿದರ್ಶನಾರ್ಥಿಭಿಃ ಸಮರ್ಥಿತೌ ತೌ ಹರಿಶಙ್ಕರೌ ಸುರೈಃ
ರಣಸ್ಥಿತೌ ವಾಂ ಪ್ರಸಮೀಕ್ಷಿತುಂ ವಯಂ ಸಮರ್ಥಯಾಮೋsತ್ರ ನಿದರ್ಶನಾರ್ಥಿನಃ .೪೫

ದೇವತೆಗಳಿಂದ ಹರಿಹರರಲ್ಲಿ ನಮ್ರ ನಿವೇದನೆ,
ಆಗಬೇಕಿದೆ ನಿಮ್ಮಲ್ಲಾರು ಶ್ರೇಷ್ಠರೆಂಬ ಮಂಡನೆ.
ನಡೆಯಲಿ ನಿಮ್ಮ ಮಧ್ಯೆ ಒಂದು ಯುದ್ಧ,
ಮೂಲಕ ತತ್ವ ನಿಶ್ಚಯವಾಗಲಿ ಸಿದ್ಧ.

ತತೋ ಹಿ ಯುದ್ಧಾಯ ರಮೇಶಶಙ್ಕರೌ ವ್ಯವಸ್ಥಿತೌ ತೌ ಧನುಷೀ ಪ್ರಗೃಹ್ಯ
ಯತೋsನ್ತರಸ್ಯೈಷ ನಿಯಾಮಕೋ ಹರಿಸ್ತತೋ ಹರೋsಗ್ರೇsಸ್ಯ ಶಿಲೋಪಮೋsಭವತ್ .೪೬

ತದನಂತರ ಹರಿಹರರು ನಿಂತರು ಯುದ್ಧಕ್ಕೆ ಹಿಡಿದು ತಮ್ತಮ್ಮ ಬಿಲ್ಲು,
ಹರನಾತ್ಮಸಖನೂ ಹರಿಯೇ ಆದ್ದರಿಂದ ನಿಶ್ಚಲ ನಿಂತ ಶಿವ ಆದಂತೆ ಕಲ್ಲು.

ಶಶಾಕ ನೈವಾಥ ಯದಾsಭಿವೀಕ್ಷಿತುಂ ಪ್ರಸ್ಪನ್ದಿತುಂ ವಾ ಕುತ ಏವ ಯೋದ್ಧುಮ್
ಶಿವಸ್ತದಾ ದೇವಗಣಾಃ ಸಮಸ್ತಾಃ ಶಶಂಸುರುಚ್ಚೈರ್ಜಗತೋ ಹರೇರ್ಬಲಮ್ .೪೭

ಶಿವನಿಂದ ಸಾಧ್ಯವಾಗಲಿಲ್ಲ ಹರಿಯೆಡೆಗೆ ಸ್ಥಿರ ನೋಟ,
ಚಲನೆಯೇ ಇಲ್ಲದವನಿಂದ ಹೇಗಾದೀತು ಯುದ್ಧದ ಆಟ.
ದೇವತೆಗಳಿಗಾದ ಅನುಭವ ಹರಿಯೇ ಎಲ್ಲರಿಗಿಂತ ಉತ್ತಮ,
ಸಾರಿದರು ಲೋಕಕ್ಕೆ ನಾರಾಯಣನೇ ಸರ್ವೋತ್ತಮ.


ಯದೀರಣೇನೈವ ವಿನೈಷ ಶಙ್ಕರಃ ಶಶಾಕ ಪ್ರಶ್ವಸಿತುಂ ಕೇವಲಮ್
ಕಿಮತ್ರ ವಕ್ತವ್ಯಮತೋ ಹರೇರ್ಬಲಂ ಹರಾತ್ ಪರಂ ಸರ್ವತ ಏವ ಚೇತಿ .೪೮

ಶಿವನೂ ಅಲ್ಲ ಸ್ವತಂತ್ರವಾಗಿ ಉಸಿರಾಡಲು ಸಮರ್ಥ,
ಸ್ಪಷ್ಟವಾಗುವುದಿಲ್ಲವೇ ತಾರತಮ್ಯ ಹೇಳುವ ಅರ್ಥ.
ಹರಿಯವನು ಎಂದೂ ಎಲ್ಲೂ ಸರ್ವೋತ್ತಮ,
ದೇವತೆಗಳು ಜಗಕೆ ತೋರಿದ ವಿಶೇಷ ನೇಮ.

ತತಃ ಪ್ರಣಮ್ಯಾsಶು ಜನಾರ್ದನಂ ಹರಃ ಪ್ರಸನ್ನದೃಷ್ಟ್ಯಾ ಹರಿಣಾsಭಿವೀಕ್ಷಿತಃ
ಜಗಾಮ ಕೈಲಾಸಮಮುಷ್ಯ ತದ್ ಧನುಸ್ತ್ವಯಾ ಪ್ರಭಗ್ನಂ ಕಿಲ ಲೋಕಸನ್ನಿಧೌ .೪೯

ನಂತರ ಸದಾಶಿವನಿಂದ ನಾರಾಯಣಗೆ ನಮಸ್ಕಾರ,
ಹರಿಯನುಗ್ರಹೀತನಾಗಿ ಕೈಲಾಸದೆಡೆಗೆ ನಡೆದ ಹರ.
ಅಂಥಾ ಶಿವನ ಧನುಸ್ಸನ್ನು ನೀ ಮುರಿದ ವ್ಯಾಪಾರ,
ಮತ್ತೊಮ್ಮೆ ಆಗಲಿ ನಿನ್ನಿಂದ ಹಿರಿತತ್ವದ ಸಾಕಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula