Tuesday 6 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 76 - 80


ತಾವೇವ ಜಾತೌ ಭರತಶ್ಚ ನಾಮ್ನಾ ಶತ್ರುಘ್ನ ಇತ್ಯೇವ ಚ ರಾಮತೋsನು ।
ಪೂರ್ವಂ ಸುಮಿತ್ರಾತನಯಶ್ಚ ಶೇಷಃ ಸ ಲಕ್ಷ್ಮಣೋ ನಾಮ ರಘೂತ್ತಮಾದನು ॥೩.೭೬॥

ಆ ಪ್ರದ್ಯುಮ್ನಾ ಅನಿರುದ್ಧರೇ ಭರತ ಮತ್ತು ಶತ್ರುಘ್ನರಾದರು.
ರಾಮಾವತಾರದ ನಂತರ ಹುಟ್ಟಿ ಬಂದು ಅವನ ತಮ್ಮಂದಿರಾದರು.
ಸುಮಿತ್ರೆಯ ಮಗನಾಗಿ ಬಂದ ಲಕ್ಷ್ಮಣ ಹಿಂದೆ ಶೇಷ ದೇವರಾಗಿದ್ದರು.

ಕೌಸಲ್ಯಕಾಪುತ್ರ ಉರುಕ್ರಮೋsಸಾವೇಕಸ್ತಥೈಕೋ ಭರತಸ್ಯ ಮಾತುಃ ।
ಉಭೌ ಸುಮಿತ್ರಾತನಯೌ ನೃಪಸ್ಯ ಚತ್ವಾರ ಏತೇ ಹ್ಯಮರೋತ್ತಮಾಃ ಸುತಾಃ ॥೩.೭೭॥

ಶ್ರೀರಾಮ ಕೌಸಲ್ಯೆಯ ಮಗ.
ಭರತ ಕೈಕೇಯಿಯ ಮಗ.
ಲಕ್ಷ್ಮಣ ಶತ್ರುಘ್ನರು ಸುಮಿತ್ರೆಯ ಮಕ್ಕಳು.
ಈ ನಾಕು ದೇವತೆಗಳೂ ದಶರಥನ ಮಕ್ಕಳು.

ಸಙ್ಕರ್ಷಣಾದ್ಯೈಸ್ತ್ರಿಭಿರೇವ ರೂಪೈರಾವಿಷ್ಟ ಆಸೀತ್ ತ್ರಿಷು ತೇಷು ವಿಷ್ಣುಃ ।
ಇನ್ದ್ರೋsಙ್ಗದೇ ಚೈವ ತತೋsಙ್ಗದೋ ಹಿ ಬಲೀ ನಿತಾನ್ತಂ ಸ ಬಭೂವ ಶಶ್ವತ್ ॥೩.೭೮॥

ಸಂಕರ್ಷಣ, ಪ್ರದ್ಯುಮ್ನ  ಅನಿರುದ್ಧ  ಈ ಮೂರು ರೂಪ ,
ಲಕ್ಷ್ಮಣ ಭರತ ಶತ್ರುಘ್ನರಲ್ಲಿ ನಾರಾಯಣ ಆವಿಷ್ಟ  ಆಗಿದ್ದನಪ್ಪ .
ಇಂದ್ರ ಅಂಗದನಲ್ಲಾಗಿದ್ದ ಆವಿಷ್ಟ ,
ಅದಕೆ ಅಂಗದನಾದ ಬಹಳ ಬಲಿಷ್ಠ .

ಯೇsನ್ಯೇ ಚ ಭೂಪಾಃ ಕೃತವೀರ್ಯಜಾದ್ಯಾ ಬಲಾಧಿಕಾಃ ಸನ್ತಿ ಸಹಸ್ರಶೋsಪಿ ।
ಸರ್ವೇ ಹರೇಃ ಸನ್ನಿಧಿಭಾವಯುಕ್ತಾ ಧರ್ಮಪ್ರಧಾನಾಶ್ಚ ಗುಣಪ್ರಧಾನಾಃ ॥೩.೭೯॥

ಉಳಿದ ಕಾರ್ತವೀರ್ಯಾರ್ಜುನಾದಿ ರಾಜರು,
ಬಲಶಾಲಿ ಧಾರ್ಮಿಕ ಅತ್ಯಂತ ಗುಣವಂತರು.
ಅವರೆಲ್ಲ ಖಂಡಿತ ಭಗವತ್ ಸನ್ನಿಧಿಯುಕ್ತರು.

ಸ್ವಯಂ ರಮಾ ಸೀರತ ಏವ ಜಾತಾ ಸೀತೇತಿ ರಾಮಾರ್ಥಮನೂಪಮಾ ಯಾ ।
ವಿದೇಹರಾಜಸ್ಯ ಹಿ ಯಜ್ಞಭೂಮೌ ಸುತೇತಿ ತಸ್ಯೈವ ತತಸ್ತು ಸಾsಭೂತ್ ॥೩.೮೦॥

ಲಕ್ಷ್ಮಿಯೇ ನೇಗಿಲ ಸಾಲಿಂದ ಬಂದಾದಳು ಸೀತಾ,
ರಾಮನ ಸೇವೆಗಾಗಿ ಅವತರಿಸಿದ  ಲೋಕಮಾತಾ.
ವಿದೇಹರಾಜನಿಗೆ ಯಜ್ಞಭೂಮಿಯಲ್ಲಿ ಸಿಕ್ಕ ವೈದೇಹಿ,
ಅವನ ಮಗಳೆಂದೇ ಹೆಸರು ಪಡೆದ  ಸೀತಾದೇವಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula