Wednesday 14 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 14 - 16

ತಥಾ ವಿದೇಹಃ ಪ್ರತಿಲಭ್ಯ ರಾಮಂ ಸಹಸ್ರನೇತ್ರಾವರಜಂ ಗವಿಷ್ಠಮ್
ಸಮರ್ಚಯಾಮಾಸ ಸಹಾನುಜಂ ತಮೃಷಿಂ ಸಾಕ್ಷಾಜ್ಜ್ವಲನಪ್ರಕಾಶಮ್ .೧೪

ಇಂದ್ರನ ತಮ್ಮನಾಗಿ ಬಂದ ಉಪೇಂದ್ರ,
ಅವನೇ ತಾನಾದ ದೇವ ಶ್ರೀರಾಮಚಂದ್ರ.
ಅಂಥಾ ಲಕ್ಷ್ಮಣಸಮೇತ ರಾಮನಿಗೆ ಜನಕನಿಂದ ಸತ್ಕಾರ,
ಅಗ್ನಿಯಂತೆ ಹೊಳೆವ ವಿಶ್ವಾಮಿತ್ರಗೂ ತೋರಿದ ಆದರ.

ಮೇನೇ ಜಾಮಾತರಮಾತ್ಮಕನ್ಯಾ ಗುಣೋಚಿತಂ ರೂಪನವಾವಾತಾರಮ್
ಉವಾಚ ಚಾಸ್ಮೈ ಋಷಿರುಗ್ರತೇಜಾಃ ಕುರುಷ್ವ ಜಾಮಾತರಮೇನಮಾಶ್ವಿತಿ .೧೫

ಜನಕ ನೋಡಿದ ಚೆಲುವ ರಾಮಚಂದ್ರರಾಯ,
ಮನದಲ್ಲೆ ತಿಳಿದ ಇವ ಅನುರೂಪನಾದ ಅಳಿಯ.
ಉಗ್ರತೇಜಸ್ಸಿನ ವಿಶ್ವಾಮಿತ್ರರು ಹೇಳಿದ ಮಾತು,
ಇವನನ್ನು ನಿನ್ನಳಿಯನನ್ನಾಗಿಸುವುದು ಒಳಿತು.

ಆಹ ಚೈನಂ ಪರಮಂ ವಚಸ್ತೇ ಕರೋಮಿ ನಾತ್ರಾಸ್ತಿ ವಿಚಾರಣಾ ಮೇ
ಶೃಣುಷ್ವ ಮೇsಥಾಪಿ ಯಥಾ ಪ್ರತಿಜ್ಞಾ ಸುತಾಪ್ರದಾನಾಯ ಕೃತಾ ಪುರಸ್ತಾತ್ .೧೬

ಜನಕನೆನ್ನುತ್ತಾನೆ ನಿಮ್ಮ ಮಾತು ಅತ್ಯಂತ ಉಚಿತ,
ನಮಗೂ ರಾಮ ಅಳಿಯನಾಗುವುದು ಸರ್ವಸಮ್ಮತ.
ಆದರೆ ನನ್ನದೊಂದಿದೆ ಹಳೆಯ ಪ್ರತಿಜ್ಞೆ,
ಅದ ತಿಳಿಸಿ ಬೇಡುತ್ತೇನೆ ನಿಮ್ಮ ಅನುಜ್ಞೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula