ಬಲಂ ಸ್ವಭಕ್ತೇರಧಿಕಂ ಪ್ರಕಾಶಯನ್ನನುಗ್ರಹಂ ಚ ತ್ರಿದಶೇಷ್ವತುಲ್ಯಮ್ ।
ಅನನ್ಯಭಕ್ತಾಂ ಚ ಸುರೇಶಕಾಙ್ಕ್ಷಯಾ ವಿಧಾಯ ನಾರೀಂ ಪ್ರಯಯೌ ತಯಾsರ್ಚಿತಃ ॥೪.೧೧॥ಭಕ್ತಿಯ ಹಿರಿಮೆ ದೇವತೆಗಳಲ್ಲಿ ಭಗವಂತನ ಒಲುಮೆ,
ಪ್ರಕಟಿಸಿ ತೋರುತ್ತಾ ಮಾಡಿದ ಅಹಲ್ಯೋದ್ಧಾರದ ಮಹಿಮೆ.
ಇಂದ್ರನ ಪ್ರಾರ್ಥನೆಯಂತೆ ಭಕ್ತೆ ಅಹಲ್ಯೆಯ ಉದ್ಧಾರ,
ಅವಳಿಂದ ವಂದಿತನಾಗಿ ಮುನ್ನಡೆದ ತಾ ಕರುಣಾಸಾಗರ.
ಶ್ಯಾಮಾವದಾತೇ ಜಗದೇಕಸಾರೇ ಸ್ವನನ್ತಚನ್ದ್ರಾಧಿಕಕಾನ್ತಿಕಾನ್ತೇ ।
ಸಹಾನುಜೇ ಕಾರ್ಮುಕಬಾಣಪಾಣೌ ಪುರೀಂ ಪ್ರವಿಷ್ಟೇ ತುತುಷುರ್ವಿದೇಹಜಾಃ ॥೪.೧೨॥
ನೀಲಮೇಘನಾದ ಶ್ರೀರಾಮ,
ಅನಂತ ಚಂದ್ರರ ಕಾಂತಿಧಾಮ.
ಬಿಲ್ಲುಧಾರಿಯಾಗಿ ಲಕ್ಷ್ಮಣನೊಡನೆ ವಿದೇಹನಗರ ಪ್ರವೇಶ,
ಆ ದೃಶ್ಯ ಕಂಡ ಜನರೆಲ್ಲ ಹೊಂದಿದರು ಅತೀವ ಹರುಷ.
ಪಪುರ್ನಿತಾನ್ತಮ್ ಸರಸಾಕ್ಷಿಭೃಙ್ಗೈರ್ವರಾನನಾಬ್ಜಂ ಪುರುಷೋತ್ತಮಸ್ಯ।
ವಿದೇಹನಾರೀನರವರ್ಯಸಙ್ಘಾ ಯಥಾ ಮಹಾಪೂರುಷಿಕಾಸ್ತದಙ್ಘ್ರಿಮ್ ॥೪.೧೩॥
ಹರಿಭಕ್ತರ ದೃಷ್ಟಿ ಹರಿಯ ಚರಣಕಮಲಗಳಲ್ಲಿ,
ವಿದೇಹನಗರಿಗಳ ದೃಷ್ಟಿ ರಾಮನ ಮುಖಕಮಲದಲ್ಲಿ.
ಭಗವಂತನ ಮುಖತಾವರೆಯ ಸವಿಜೇನು,ಆಸ್ವಾದಿಸಿತು ಪ್ರಜಾವೃಂದ ನೋಟದಲ್ಲೇ ತಾನು.
[Contributed by Shri Govind Magal]
No comments:
Post a Comment
ಗೋ-ಕುಲ Go-Kula